ಬೆಂಗಳೂರು : ಗೊತ್ತಿರಲಿ. ನಿದ್ರೆಗೂ ಒಂದು ದಿನವಿದೆ. 19, ಮಾರ್ಚ್ ವಿಶ್ವ ನಿದ್ರೆಯ ದಿನ (World sleeping day). ಆರೋಗ್ಯ ಕಾಪಾಡುವಲ್ಲಿ ಸುಖ ನಿದ್ರೆ ಬಹಳ ಮುಖ್ಯ. ಸಾಕಷ್ಟು ಕಾಯಿಲೆಗಳಿಗೆ ಸುಖ ನಿದ್ರೆಯೇ ರಾಮಬಾಣ. ಇನ್ನು ನಿದ್ರೆ ಕಡಿಮೆಯಾದರೆ ಹೃದಯ ಕಾಯಿಲೆ (Heart disease), ಡಯಾಬಿಟೀಸ್, ಬೊಜ್ಜು, ಕ್ಯಾನ್ಸರ್ (cancer), ಹಲವು ರೀತಿಯ ಮಾನಸಿಕ ಕಾಯಿಲೆಗಳು ವಕ್ಕರಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ ಆರೋಗ್ಯ ತಜ್ಷರು. ಹಾಗಾಗಿ, ನಿದ್ರೆಯ ಜೊತೆ ಯಾವತ್ತಿಗೂ ರಾಜೀ ಮಾಡಿಕೊಳ್ಳಬೇಡಿ. ಕಣ್ತುಂಬ ನಿದ್ರೆ ಮಾಡಿ. ಮಗುವಿನಂತೆ ನಿಶ್ಚಿಂತೆಯಿಂದ ನಿದ್ರೆ ಮಾಡಿ.
ಸುಖನಿದ್ರೆಗೆ ಸುಲಭ ಸೂತ್ರ ಯಾವುದು..?
ಹೌದು.! ಇಂದಿನ ಬ್ಯೂಸಿ ಲೈಫಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಆಗುವುದೇ ಇಲ್ಲ. ಅದರಲ್ಲೂ ಸುಖನಿದ್ರೆ ಅನ್ನೋದು ಕನಸು. ಇಲ್ಲಿ ನಾವೊಂದಿಷ್ಟು ಟಿಪ್ಸ್ (Sleeping Tips) ಹೇಳುತ್ತೇವೆ. ಅದನ್ನು ಅನುಸರಿಸಿದರೆ ನಿದಿರಾ ದೇವಿ ನಿಮ್ಮಅಡಿಯಾಳಾಗಿ ಬಿಡುತ್ತಾಳೆ.
ಇದನ್ನೂ ಓದಿ : ಈ ಕಾರಣಗಳಿಂದಾಗಿ ಚಹಾ, ಗ್ರೀನ್ ಟೀ ಅಥವಾ ಜ್ಯೂಸ್ ಜೊತೆ ಔಷಧಿ ಸೇವನೆ ಬೇಡ
1. ನಿದ್ರೆಗೆ ಒಂದು ಕರೆಕ್ಟ್ ಟೈಮ್ ಟೇಬಲ್ ಇಟ್ಟು ಕೊಳ್ಳಿ.
ಎಷ್ಟು ಗಂಟೆಗೆ ಮಲಗಬೇಕು. ಎಷ್ಟು ಗಂಟೆಗೆ ಏಳಬೇಕು ಎಂಬ ಟೈಮ್ ಟೇಬಲ್ ಹಾಕಿಕೊಂಡು ಅದನ್ನು ಅನುಸರಿಸಬೇಕು. ಈ ಟೈಮ್ ಟೇಬಲ್ ಬದಲಾಗಬಾರದು. ಹೀಗೆ ಟೈಮ್ ಟೇಬಲ್ ಹಾಕಿದರೆ ನಿದ್ರೆಯ ಟೈಮಿಗೆ (Sleeping time) ನಿದ್ರೆ, ಏಳಬೇಕಾದ ಸಮಯಕ್ಕೆ ಸರಿಯಾಗಿ ಎಚ್ಚರ ಆಗುತ್ತದೆ.
2. ಸುಸ್ತಾಗಿದ್ದರೆ ಮಧ್ಯಾಹ್ನ ಒಂದು ಅರ್ಧಗಂಟೆ ಸಣ್ಣ ನಿದ್ರೆ ಮಾಡಿ. ಇದು ದೇಹಾರೋಗ್ಯಕ್ಕೆ (Health) ಬಹಳ ಒಳ್ಳೆಯದು. ಮಧ್ಯಾಹ್ನ ಸಿಕ್ಕಾಪಟ್ಟೆ ಮಲಗಿಬಿಡಬೇಡಿ. ಮತ್ತೆ ರಾತ್ರಿ ನಿದ್ರೆ ಬರಲ್ಲ.
3. ಬೆಡ್ ಟೈಮಿಗೆ ಸುಮಾರು 8 ಗಂಟೆ ಮೊದಲು ಕುಡಿಯುವ ಕಾಫಿ ಅಥವಾ ಟೀ (Tea) ಅದು ಆ ದಿನದ ನಿಮ್ಮ ಕೊನೆಯ ಟೀ ಅಥವಾ ಕಾಫಿ. ಮಲಗುವ ಮೊದಲು ಟೀ/ಕಾಫಿ ಬೇಡ. ಏನಿದ್ದರೂ 8 ಗಂಟೆ ಮೊದಲು.
ಇದನ್ನೂ ಓದಿ : Golgappa Dieting : ಒಂದು ಪ್ಲೇ ಟ್ ಪಾನಿಪೂರಿಯಿಂದಲೂ Weight Loss ಸಾಧ್ಯ
4. ಬೆಡ್ ಟೈಮಿಗೆ ಒಂದು ಗಂಟೆ ಮೊದಲು ಮೊಬೈಲ್ (Mobile), ಲ್ಯಾಪ್ ಟಾಪ್, ಟೀವಿ ಎಲ್ಲಾ ಬಂದ್ ಆಗಬೇಕು.
5. ಬೆಡ್ ಟೈಮಿಗೆ ಒಂದು ಗಂಟೆ ಮೊದಲು ಎಲ್ಲಾ ಕೆಲಸ ಮುಗಿಸಿ. ಕೆಲಸ ಎಲ್ಲಾ ಮುಗಿಸಿ ಒಂದು ಗಂಟೆ ಬಳಿಕ ನಿದ್ರೆ ಮಾಡಿ.
6. ನಿದ್ದೆಗೆ ಒರಗುವ ಮೊದಲು ಓದುವ ಅಭ್ಯಾಸ ಇದ್ದರೆ ಒಳ್ಳೆಯದು. ಇದರಿಂದ ಕಣ್ಮುಚ್ಚಿದ ಕೂಡಲೇ ನಿದ್ದೆ ಒಲಿದು ಬಿಡುತ್ತದೆ.
7. ಸಾಕಷ್ಟು ಸ್ವಚ್ಛವಾಗಿರುವ ಹಾಗೂ ತಂಪಾದ ಕೋಣೆಯಲ್ಲಿ ನಿದ್ರೆ ಮಾಡಿ. ಮಲಗುವ ಕೋಣೆ ಕತ್ತಲಿದ್ದಷ್ಟು ಒಳ್ಳೆಯದು.
ಇದನ್ನೂ ಓದಿ : ಮೈಮರೆತು ಮಲಗಲು 7 ಸೂತ್ರಗಳು..! ಕ್ಷಣದಲ್ಲಿ ನಿದ್ರಾದೇವಿಯ ಒಲಿಸಿಕೊಳ್ಳಿ..!
8. ಮಲಗುವ ಮುನ್ನ ಧ್ಯಾನ ಮಾಡಿ. ಆಗದೇ ಹೋದರೆ ಉಸಿರಾಟಕ್ಕೆ ಸಂಭಂದಿಸಿದಂತೆ ಯೋಗ (Yoga) ಮಾಡಿ.
9. ದಿನಕ್ಕೆ ಸಾಕಷ್ಟು ವ್ಯಾಯಾಮ ಅಥವಾ ಯೋಗ ಮಾಡಿ. ವ್ಯಾಯಾಮ ಅಥವಾ ಯೋಗದಿಂದ ದೇಹದ ಪ್ರತಿಯೊಂದು ಅಂಗಕ್ಕೂ ಕಸರತ್ತು ಸಿಗುತ್ತದೆ. ಸಕ್ರಿಯವಾಗುತ್ತವೆ. ದೇಹ ದಣಿಯುತ್ತದೆ. ದಣಿದ ದೇಹ ಬೇಗ ನಿದ್ದೆಗೆ ಜಾರುತ್ತದೆ.
10. ಯಾವುದೇ ಚಿಂತೆಯನ್ನು ಬೆಡ್ ರೂಮ್ (Bed room) ಒಳಗೆ ನುಸುಳಲು ಬಿಡಬೇಡಿ. ಆರೋಗ್ಯ ಗಟ್ಟಿ ಇದ್ದರೆ ಯಾವುದೇ ಸಮಸ್ಯೆ ಎದುರಿಸಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಮಲಗುವ ಮೊದಲು ಚಿತ್ತ ಶಾಂತಿ ಖಂಡಿತಾ ಇರಲಿ. ಮನದ ಚಿಂತೆ ಮಲಗುವ ಕೋಣೆಯಲ್ಲಿ ಮನೆ ಮಾಡಲು ಬಿಡಬೇಡಿ.
11. ಖಂಡಿತಾ, ನಿದ್ರೆಗೆ ನಿದ್ದೆ ಮಾತ್ರೆ ತೆಗೆದುಕೊಳ್ಳುವ ಪರಿಪಾಠ ಬಿಟ್ಟು ಬಿಡಿ. ಇದರಿಂದ ನಿದ್ರೆ ಬರಲ್ಲ. ಬದಲಿಗೆ ರೋಗ ಬರುತ್ತದೆ.
ಇದನ್ನೂ ಓದಿ : Health Tips : ಈ ಕಾರಣಗಳಿಗಾಗಿ ಪುರುಷರು ಹಾಲು ಮತ್ತು ಖರ್ಜೂರ ಸೇವಿಸಬೇಕು
12. ಅಲ್ಕೋಹಾಲ್ (Alcohol) ತಗೊಂಡ್ರೆ ನಿದ್ರೆ ಬರುತ್ತದೆ ಎಂಬುದು ಕೆಲವರ ನಂಬಿಕೆ. ಡ್ರಿಂಕ್ಸ್ ಮಾಡಿದ್ರೆ ನಿದ್ರೆ ಬರೋದು ಅದರಲ್ಲಿರೋ ಅಲ್ಕೋಹಾಲ್ ನಿಂದ. ಅಂದು ಮತ್ತೇರಿ ನೀವು ಅಮಲಿನ ನಿದ್ರೆಗೆ ಜಾರಬಹುದು. ಗೊತ್ತಿರಲಿ. ಅದು ಅಮಲಿನ ನಿದ್ರೆ, ಸುಖ ನಿದ್ರೆ ಅಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.