Good news..! ಭಾರತದಲ್ಲಿ ಶೀಘ್ರವೇ ಬರಲಿದೆ 5G ಸೇವೆ..!

ಈ ವರ್ಷದ ಆರಂಭದಿಂದಲೂ ಬಹುತೇಕ ಎಲ್ಲ ಮೊಬೈಲ್ ಕಂಪನಿಗಳು 5G ತಂತ್ರಜ್ಞಾನವನ್ನೊಳಗೊಂಡ  ಸ್ಮಾರ್ಟ್‌ಫೋನ್‌ಗಳನ್ನು (Smartphone) ಮಾರಾಟ ಮಾಡಲು ಪ್ರಾರಂಭಿಸಿವೆ. 

Written by - Ranjitha R K | Last Updated : Feb 9, 2021, 08:23 PM IST
  • 5G ಪ್ರಯೋಗಗಳು ಶೀಘ್ರದಲ್ಲೇ ಆರಂಭ
  • 2-3 ತಿಂಗಳಲ್ಲಿ 5G ಕ್ಷೇತ್ರ ಪ್ರಯೋಗಗಳು ಪ್ರಾರಂಭ
  • ಸೇವೆಗಳ ಪ್ರಯೋಗಕ್ಕಾಗಿ 16 ಅರ್ಜಿಗಳ ಸ್ವೀಕಾರ
 Good news..! ಭಾರತದಲ್ಲಿ ಶೀಘ್ರವೇ ಬರಲಿದೆ 5G ಸೇವೆ..!  title=
2-3 ತಿಂಗಳಲ್ಲಿ 5G ಕ್ಷೇತ್ರ ಪ್ರಯೋಗ (File photo)

ನವದೆಹಲಿ : ಈ ವರ್ಷದ ಆರಂಭದಿಂದಲೂ ಬಹುತೇಕ ಎಲ್ಲ ಮೊಬೈಲ್ ಕಂಪನಿಗಳು 5G ತಂತ್ರಜ್ಞಾನವನ್ನೊಳಗೊಂಡ  ಸ್ಮಾರ್ಟ್‌ಫೋನ್‌ಗಳನ್ನು (Smartphone) ಮಾರಾಟ ಮಾಡಲು ಪ್ರಾರಂಭಿಸಿವೆ. ಭಾರತದಲ್ಲಿ 5G ಸೇವೆ ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆ ಭಾರತೀಯರನ್ನು ಕಾಡುತ್ತಿತ್ತು. 5ಜಿಗಾಗಿ ಇನ್ನು ಹೆಚ್ಚು ಕಾಯಬೇಕಾಗಿಲ್ಲ. 5Gಯ ಪ್ರಯೋಗಗಳು ಶೀಪ್ರದಲ್ಲೇ ಆರಂಭವಾಗಲಿವೆ.  

ದೂರಸಂಪರ್ಕ ಇಲಾಖೆ ನೀಡಿದ ಮಾಹಿತಿ : 
5G ಸೇವೆಯ ಕುರಿತು ಸಂಸದೀಯ ಸಮಿತಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೂರಸಂಪರ್ಕ ಇಲಾಖೆ , ದೇಶದಲ್ಲಿ 5 ಜಿ ಸೇವೆಗೆ ಸಿದ್ಧತೆಗಳು ಪ್ರಾರಂಭವಾಗಿವೆ ಎಂದು ಹೇಳಿದೆ. ಟೆಕ್ ಸೈಟ್ ಟೆಲಿಕಾಂಟಾಕ್ (telecomtalk) ಪ್ರಕಾರ, ಮುಂದಿನ 2-3 ತಿಂಗಳಲ್ಲಿ 5G ಕ್ಷೇತ್ರ ಪ್ರಯೋಗಗಳು ಪ್ರಾರಂಭವಾಗಲಿವೆ.  

ಇದನ್ನೂ ಓದಿ : WhatsApp ಕಥೆ ಮುಗಿತು, ಬಂತು Modi ಸರ್ಕಾರದ 'Sandes App'

ಸಂಸದೀಯ ಸಮಿತಿ ಅಸಮಾಧಾನ : 
ಮೂಲಗಳ ಪ್ರಕಾರ, ಟೆಲಿಕಾಂಗಾಗಿ ರಚಿಸಲಾದ ಸಂಸದೀಯ ಸಮಿತಿಯು 5G ಸೇವೆಯನ್ನು ಪ್ರಾರಂಭಿಸುವ ವಿಷಯದಲ್ಲಿ DoT ನಿಧಾನಗತಿಯ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. 5 ಜಿ ಸೇವೆಯನ್ನು ಪ್ರಾರಂಭಿಸಲು ಮತ್ತು ಅದರ ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಮಿತಿ DoTಯನ್ನು  ಪ್ರಶ್ನಿಸಿದೆ.

5 ಜಿ ಪ್ರಯೋಗಕ್ಕಾಗಿ 16 ಅರ್ಜಿಗಳು :
ದೇಶದಲ್ಲಿ 5 ಜಿ ತಂತ್ರಜ್ಞಾನ ಮತ್ತು ಸೇವೆಗಳ ಪ್ರಯೋಗಕ್ಕಾಗಿ ಈಗಾಗಲೇ 16 ಅರ್ಜಿಗಳನ್ನು ಸ್ವೀಕರಿಸಲಾಗಿದೆ.  ಟೆಲಿಕಾಂ (telecom) ಕಂಪನಿಗಳು ಶೀಘ್ರದಲ್ಲೇ ದೇಶದ ವಿವಿಧ ಪ್ರದೇಶಗಳಲ್ಲಿ ಕ್ಷೇತ್ರ ಪ್ರಯೋಗಗಳನ್ನು ನಡೆಸಲಿವೆ.

ಇದನ್ನೂ ಓದಿ : ಫೇಸ್‌ಬುಕ್‌ಗೆ TikTok ಜೊತೆಗೆ ಸ್ಪರ್ಧಿಸಲೂ ಸಾಧ್ಯವಾಗುತ್ತಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News