Data Leak Through Telegram Bot App - ದೆಹಲಿ: ನೀವೂ ಕೂಡ ಒಂದು ವೇಳೆ ಟೆಲಿಗ್ರಾಂ ಬಾಟ್ಆಪ್ ಬಳಸುತ್ತಿದ್ದಾರೆ ಈ ಸುದ್ದಿ ತಪ್ಪದೆ ಓದಿ. ವರದಿಗಳ ಪ್ರಕಾರ, ಟೆಲಿಗ್ರಾಮ್ ಆ್ಯಪ್ ಬೋಟ್ ಬಳಸುವ ಫೇಸ್ಬುಕ್ ಬಳಕೆದಾರರ ಡೇಟಾವನ್ನು ಹ್ಯಾಕರ್ಗಳು ಕದ್ದಿದ್ದಾರೆ ಮತ್ತು ಇದರಲ್ಲಿ ಚಿಂತೆಗೀಡು ಮಾಡುವ ವಿಷಯ ಎಂದರೆ ಈ ಸಂಖ್ಯೆ 50 ಕೋಟಿ ಬಳಕೆದಾರರಿಗೂ ಹೆಚ್ಚಾಗಿದೆ ಎನ್ನಲಾಗಿದೆ.
ಇದರಿಂದ ಫೇಸ್ ಬುಕ್ ಅಕೌಂಟ್ ಗೆ ಎಷ್ಟು ಅಪಾಯ
ವರದಿಗಳ ಪ್ರಕಾರ, ಡೇಟಾ ಲೀಕ್ (Data Leak) ಅಪಾಯದ ನಂತರ ತಯಾರಿಸಲಾಗಿರುವ ಫೇಸ್ ಬುಕ್ ಖಾತೆಗಳ ಮೇಲೆ ಈ ಬಾಟ್ ಕೆಲಸ ಮಾಡುವುದಿಲ್ಲ ಎಂದು ಫೇಸ್ ಬುಕ್ ಹೇಳಿದೆ. 2019 ಕ್ಕಿಂತ ಮೊದಲು ತೆರೆಯಲಾಗಿರುವ ಖಾತೆಗಳ ಬಗ್ಗೆ ಇದರಲ್ಲಿ ಮಾಹಿತಿ ನೀಡಲಾಗಿಲ್ಲ ಎಂದು ಫೇಸ್ಬುಕ್ ಹೇಳಿಕೊಂಡಿದೆ.
ಇದನ್ನು ಓದಿ- Data Leak: 10 ಕೋಟಿ ಭಾರತೀಯರ Debit/Credit ಕಾರ್ಡ್ ಮಾಹಿತಿ ಸೋರಿಕೆ
ಸಂಶೋಧನೆಯಲ್ಲಿ ಪತ್ತೆಯಾದ ಅಸುರಕ್ಷಿತ ಸರ್ವರ್
2019ರಲ್ಲಿ ನಡೆಸಲಾಗಿರುವ ಒಂದು ಸಂಶೋಧನೆ ಈ ಅಸುರಕ್ಷಿತ ಸರ್ವರ್ ಅನ್ನು ಪತ್ತೆಹಚ್ಚಿತ್ತು. ಈ ಸರ್ವರ್ ನಲ್ಲಿ ಸುಮಾರು 42ಕೋಟಿ ರಿಕಾರ್ಡ್ ಗಳನ್ನು ಸಂಗ್ರಹಿಸಿಡಲಾಗಿದೆ. ಇದರಲ್ಲಿ ಅಮೇರಿಕಾ ಹಾಗೂ ಬ್ರಿಟನ್ ನ 15 ಕೋಟಿ ಬಳಕೆದಾರರ ಡೇಟಾ ಕೂಡ ಶಾಮೀಲಾಗಿವೆ. ಹ್ಯಾಕರ್ ಗಳು ಟೆಲಿಗ್ರಾಂ ಬಾಟ್ ಆಪ್ ಬಳಕೆ ಮಾಡಿ ಸುಲಭವಾಗಿ ಫೇಸ್ ಬುಕ್ ಬಳಕೆದಾರರ ಕಾಂಟಾಕ್ಟ್ ಮಾಹಿತಿ ಕದ್ದಿದ್ದಾರೆ ಎನ್ನಲಾಗುತ್ತಿದೆ.
ಇದನ್ನು ಓದಿ-Physical Safety Keyಯಿಂದ ನಿಮ್ಮ Facebook ಮಾಹಿತಿ ಇನ್ನಷ್ಟು ಸುರಕ್ಷಿತವಾಗಲಿದೆ
ಬಾಟ್ ಬಳಿ ಒಟ್ಟು 19 ದೇಶಗಳ ಜನರ ಡೇಟಾ ಲಭ್ಯವಿದೆ
ವರದಿಗಳ ಪ್ರಕಾರ ಯಾವ ಆಪ್ ಮೂಲಕ ಹ್ಯಾಕರ್ಸ್ ಗಳು ಈ ಕೃತ್ಯ ಎಸಗಿದ್ದಾರೆಯೋ, ಆ ಟೆಲಿಗ್ರಾಮ್ ಬಾಟ್ ಆಪ್ ಬಳಿ 19 ದೇಶಗಳ ಬಳಕೆದಾರರ ಡೇಟಾ ಸಂಗ್ರಹವಿದೆ. ಸಾಮಾನ್ಯವಾಗಿ ತಮ್ಮ ಮೊಬೈಲ್ ಫೋನ್ ನಂಬರ್ ಅನ್ನು ಖಾಸಗಿಯಾಗಿಟ್ಟಿರುವ ಬಳಕೆದಾರರ ನಂಬರ್ ಅಕ್ಸಸ್ ಮಾಡಲು ಇದು ವಿಫಲವಾಗಿದೆ ಎಂದು ಬಾಟ್ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಇದನ್ನು ಓದಿ-Big Mistake! ಈ ಆನ್ಲೈನ್ ಮಾರುಕಟ್ಟೆಯ ಡೇಟಾ ಹ್ಯಾಕ್! 2 ಕೋಟಿ ಗ್ರಾಹಕರ ವೈಯಕ್ತಿಕ ಮಾಹಿತಿ SALE
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.