ನವದೆಹಲಿ: ದೋಹಾದಲ್ಲಿ ನಡೆದ ಐಬಿಎಸ್ಎಫ್ ಸ್ನೂಕರ್ ವಿಶ್ವಕಪ್ ಉದ್ಘಾಟನಾ ಆವೃತ್ತಿಯ ಶೃಂಗಸಭೆ ಪಂದ್ಯದಲ್ಲಿ ಪಂಕಜ್ ಆಡ್ವಾಣಿ ನೇತೃತ್ವದ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸುವುದರ ಮೂಲಕ ವಿಶ್ವಕಪ್ ನ್ನು ಎತ್ತಿಹಿಡಿದಿದೆ.
ಏಸ್ ಇಂಡಿಯನ್ ಕ್ಯೂಯಿಸ್ಟ್ ಅಡ್ವಾಣಿ ಮತ್ತು ಮನನ ಚಂದ್ರರ ಜೋಡಿ ಭರ್ಜರಿ ಪ್ರದರ್ಶನದಿಂದಾಗಿ ಭಾರತ ತಂಡವು 2-0 ಅಂತರದಿಂದ ಪಾಕಿಸ್ತಾನ ತಂಡದ ಬಾಬರ್ ಮಾಸಿಹ್ ಮತ್ತು ಮುಹಮ್ಮದ್ ಆಸಿಫ್ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿಯನ್ನು ಎತ್ತಿಹಿಡಿಯಿತು.
IBSF World Cup Snooker Champions 2018 🏆🥇What an awesome feeling to win it from 2-0 down against Pakistan in the final! Really enjoyed partnering with the super talented Manan Chandra- superb show mate 🙌👏 pic.twitter.com/FKTnbF64wp
— Pankaj Advani (@PankajAdvani247) 3 March 2018
ಫೈನಲ್ ಪಂದ್ಯದ ಗೆಲುವಿನ ನಂತರ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ಪಂಕಜ್ ಅಡ್ವಾಣಿ "ಐಬಿಎಸ್ಎಫ್ ವಿಶ್ವಕಪ್ ಸ್ನೂಕರ್ ಚಾಂಪಿಯನ್ಸ್ 2018ರ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ 2-0ರಿಂದ ಗೆಲುವು ಸಾಧಿಸಿದ್ದು ನಿಜಕ್ಕೂ ಅದ್ಭುತ ಅನುಭವ ! ಮನನ ಚಂದ್ರ ನಿಜಕ್ಕೂ ಅತ್ತ್ಯುತ್ತಮ ಸಹ ಆಟಗಾರ" ಎಂದು ಟ್ವೀಟ್ ಮಾಡಿದ್ದಾರೆ
ಇದಕ್ಕೂ ಮುಂಚೆ, ಸೆಮಿಫೈನಲ್ ನಲ್ಲಿ ಭಾರತ ತಂಡದ ಅಡ್ವಾಣಿ ಮತ್ತು ಚಂದ್ರ ಇರಾನ್ ತಂಡವನ್ನು 3-2 ಅಂತರದಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು.