ನವದೆಹಲಿ: ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಸಚಿನ್ ತೆಂಡೂಲ್ಕರ್ ಅವರ 17 ವರ್ಷಗಳ ದಾಖಲೆ ಮುರಿದ ವಿರಾಟ್ ಕೊಹ್ಲಿ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾ ತಂಡವು ವಾಡೆ 58 ಹಾಗೂ ಹಾಗೂ ಸ್ಟೀವನ್ ಸ್ಮಿತ್ 46 ರನ್ ಗಳ ಭರ್ಜರಿ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಗಳ ಗೆಲುವು ಸಾಧಿಸಿತು.
That's as clutch as they come from Hardik Pandya! 💥💥💥
Final scorecard: https://t.co/KEpZrVTqWs#AUSvIND pic.twitter.com/hbf5u37gqP
— cricket.com.au (@cricketcomau) December 6, 2020
ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ಉತ್ತಮ ಆರಂಭವನ್ನೇ ಪ್ರಾರಂಭಿಸಿತು ಆದರೆ 5.2 ಓವರ್ ಗಳಾಗಿದ್ದಾಗ ಕೆ.ಎಲ್ ರಾಹುಲ್ ಅವರು 30 ರನ್ ಗಳಿಸಿ ಔಟಾಗಿ ಹೊರ ನಡೆದರು. ಇದಾದ ನಂತರ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 52 ಹಾಗೂ 40 ರನ್ ಗಳಿಸಿದರು. ಇದಾದ ನಂತರ ಸಂಜು ಸ್ಯಾಮ್ಸನ್ 15 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಮುರಿಯಲು ಕೊಹ್ಲಿಗೆ ಕೇವಲ 23 ರನ್ ಗಳಷ್ಟೇ ಬಾಕಿ...!
ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಕೇವಲ 22 ಎಸೆತಗಳಲ್ಲಿ 42 ರನ್ ಗಳನ್ನು ಚಚ್ಚಿಸಿದರು.ಇದರಲ್ಲಿ ಭರ್ಜರಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳು ಸೇರಿದವು. ಇನ್ನೊಂದೆಡೆಗೆ ಶ್ರೇಯಸ್ ಅಯ್ಯರ್ ಕೂಡ 5 ಎಸೆತಗಳಲ್ಲಿ 12 ರನ್ ಗಳನ್ನು ಸಿಡಿಸುವ ಮೂಲಕ ಸರಣಿಯನ್ನು 2-0 ಅಂತರದಲ್ಲಿ ತಮ್ಮದಾಗಿಸಿಕೊಂಡರು.