ನವದೆಹಲಿ: ಒಂದು ವೇಳೆ ನೀವೂ ಕೂಡ ನೆಟ್ ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime) ಹಾಗೂ ಡಿಸ್ನಿ+ (Disney+) ಪ್ಲಾಟ್ ಫಾರ್ಮ್ ಗಳ ಮೇಲೆ ಚಿತ್ರ ವಿಕ್ಷೀಸುವ ಯೋಜನೆಯಲ್ಲಿದ್ದರೆ ಸ್ವಲ್ಪ ನಿಲ್ಲಿ. ಏಕೆಂದರೆ, ಇದೇ ಚಿತ್ರಗಳನ್ನು ವಿಕ್ಷೀಸಲು ನಿಮಗೆ ಲಕ್ಷಾಂತರ ರೂ.ಗಳು ಸಿಗುತ್ತವೆ ಎಂದು ಯಾರಾದರೂ ನಿಮಗೆ ಹೇಳಿದರೆ? ಹೌದು, ಕ್ರಿಸ್ಮಸ್ ಸಂದರ್ಭಗಳಲ್ಲಿ OTT ಪ್ಲಾಟ್ಫಾರ್ಮ್ ಗಳು ತನ್ನ ಬಳಕೆದಾರರಿಗೆ ಚಿತ್ರಗಳನ್ನು ವಿಕ್ಷೀಸಲು ಹಣ ನೀಡಲಿವೆ.
ಇದನ್ನು ಓದಿ -ಇನ್ಮುಂದೆ Netflix,Hotstar ಹಾಗೂ ಇತರೆ OTT ಕಂಟೆಂಟ್ ಗಳ ಮೇಲೆ ಕೇಂದ್ರ ಸರ್ಕಾರದ ನಿಗಾ
ಡ್ರೀಮ್ ಜಾಬ್
ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಕ್ರಿಸ್‌ಮಸ್ ಚಲನಚಿತ್ರಗಳ ವೀಕ್ಷಿಸಿ ಅವುಗಳ ವಿಮರ್ಶೆ ಮಾಡಲು ಜನರನ್ನು ಹುಡುಕುತ್ತಿವೆ. ವಿಮರ್ಶಕರು 25 ದಿನಗಳಲ್ಲಿ 25 ಚಲನಚಿತ್ರಗಳನ್ನು ನೋಡಬೇಕಾಗುತ್ತದೆ.
ಇದನ್ನು ಓದಿ- ನ್ಯೂಸ್ ಪೋರ್ಟಲ್ಸ್, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮೂಗುದಾರಕ್ಕೆ ಕೇಂದ್ರದ ಚಿಂತನೆ
ಚಿತ್ರಗಳನ್ನು ವಿಕ್ಷೀಸಲು ಹಣ ಸಿಗಲಿದೆ
ಇದಕ್ಕಾಗಿ ವಿಮರ್ಶಕರಿಗೆ 2500 ಡಾಲರ್ (ರೂ.1,84,558 ) ನೀಡಲಾಗುವುದು. ಅಲ್ಲದೆ, ನೆಟ್‌ಫ್ಲಿಕ್ಸ್, ಡಿಸ್ನಿ + ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಏಳು ಸ್ಟ್ರೀಮಿಂಗ್ ಸೇವೆಗಳ ಒಂದು ವರ್ಷದ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುವುದು.
ಇದನ್ನು ಓದಿ- ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿ ಸುದ್ದಿ; ಸಿಗಲಿದೆ ಅಮೆಜಾನ್ ಪ್ರೈಮ್ ಉಚಿತ ಸದಸ್ಯತ್ವ!
ಚಿತ್ರಗಳ ಕುರಿತು ವಿಮರ್ಶೆ ಬರೆಯಬೇಕು
ಕಂಪನಿ ಇದಕ್ಕೆ Chief Holiday Cheermeister! ಎಂದು ಹೆಸರಿಸಿದೆ. ಇದಕ್ಕಾಗಿ ವಿಮರ್ಶಕರು Reviews.org ಮೇಲೆ ಹೋಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
ಇದನ್ನು ಓದಿ- ಭಾರತದಲ್ಲಿ Netflix ಉಚಿತವಾಗಿ ಬಳಸಿ, ಸಂಪೂರ್ಣ ವಿವರ ಇಲ್ಲಿದೆ
25 ದಿನಗಳಲ್ಲಿ 25 ಚಿತ್ರಗಳನ್ನು ವಿಕ್ಷೀಸಬೇಕು
ಈ ಡ್ರೀಮ್ ಜಾಬ್ ಮಾಡಲು ನಿಮ್ಮ ಬಳಿ ಒಂದು ಲ್ಯಾಪ್ ಟಾಪ್ ಚಿತ್ರಗಳನ್ನು ವಿಕ್ಷೀಸಬಹುದಾದ ಡಿವೈಸ್ ಬೇಕಾಗಲಿದೆ. ಬಳಿಕ ಕ್ರಿಸ್ಮಸ್ ಚಿತ್ರಗಳ ಪಟ್ಟಿಯಿಂದ ನೀವು ನೋಡಬಯಸುವ 25 ಚಿತ್ರಗಳನ್ನು ಆಯ್ದುಕೊಳ್ಳಬೇಕು. ಪ್ರತಿ ಚಿತ್ರದ ಬಳಿಕ ನೀವು ಒಂದು ಸಮೀಕ್ಷಾ ವರದಿಯನ್ನು ಭರ್ತಿ ಮಾಡಬೇಕು.
ಇದನ್ನು ಓದಿ- Netflix-ಅಮೆಜಾನ್ ಪ್ರೈಮ್ನಲ್ಲಿ ಮೂವೀಸ್, ವೆಬ್ ಸರಣಿಗಳನ್ನು ಉಚಿತವಾಗಿ ವೀಕ್ಷಿಸಿ
ಸಿಗಲಿದೆ ಲಕ್ಷಾಂತರ ರೂ.
Reviews.org ಅನುಸಾರ ಈ 25 ಚಿತ್ರಗಳು ಸಂಪೂರ್ಣ ವಿಮರ್ಶಕರ ಆಯ್ಕೆ ಮತ್ತು ಇಷ್ಟದ ಮೇಲೆ ಇರಲಿವೆ.
ಇದನ್ನು ಓದಿ-ಇದೀಗ Netflix ಸಹಾಯ ಇಲ್ಲದೆ ಉಚಿತವಾಗಿ ವೀಕ್ಷಿಸಿ HD Quality Movies
ಕೆಲಸದ ಸಂಗತಿ
ಆದರೆ ಈ ಡ್ರೀಮ್ ಜಾಬ್ ಮಾಡಬಯಸುವವರಿಗೆ 18 ವರ್ಷ ವಯಸ್ಸು ಪೂರ್ಣಗೊಳಿಸಿರಬೇಕು ಮತ್ತು ಅವರು ಅಮೇರಿಕಾದಲ್ಲಿ ನೆಲಸಿರಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 4 ಕೊನೆಯ ದಿನವಾಗಿರಲಿದೆ.