/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಕಠ್ಮಂಡು: ಜಗತ್ತಿಗೇ ಕಂಟಕವಾಗಿ ಕಾಡುತ್ತಿರುವ ಕರೋನಾವೈರಸ್ ಹರಡುವಿಕೆಗೆ ಮುಖ್ಯ ಕಾರಣವಾಗಿರುವ ಚೀನಾದ (China) ಖುಷಿಗಾಗಿ ಭಾರತದೊಂದಿಗಿನ ತನ್ನ ಶತಮಾನಗಳಷ್ಟು ಹಳೆಯ ಸ್ನೇಹವನ್ನೇ ಪಣಕ್ಕಿಟ್ಟಿದ್ದ ನೇಪಾಳಕ್ಕೆ ಸಂಕಷ್ಟದ ಸಮಯದಲ್ಲಿ ಭಾರತ ಮತ್ತೆ ಸಹಾಯ ಹಸ್ತ ಚಾಚಿದೆ. ಹೌದು ನೇಪಾಳದ ಬದಲಾವಣೆಯ ಹೊರತಾಗಿಯೂ ತಾನು ನೇಪಾಳದ ಅತ್ಯುತ್ತಮ ಸ್ನೇಹಿತ ಎಂಬ ಭರವಸೆಯನ್ನು ಉಳಿಸಿಕೊಂಡಿರುವ ಭಾರತ ಕರೋನಾವೈರಸ್ (Coronavirus) ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು 28 ಐಸಿಯು ವೆಂಟಿಲೇಟರ್‌ಗಳನ್ನು ನೇಪಾಳ ಸರ್ಕಾರಕ್ಕೆ ನೀಡಿದೆ ಎಂದು  ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿ ಮಾಹಿತಿ ಹಂಚಿಕೊಂಡಿದೆ.

ಚೀನಾದ ಹೊಸ ಕೈಗೊಂಬೆ ನೇಪಾಳ ಭಾರತಕ್ಕೆ ಹಾಕಿರುವ ಬೆದರಿಕೆ ಏನು ಗೊತ್ತಾ?

ಕರೋನಾವೈರಸ್ ಸಂಕಷ್ಟದ ಸಮಯದಲ್ಲಿ ಭಾರತ ಸರ್ಕಾರ ನೇಪಾಳ ಸರ್ಕಾರಕ್ಕೆ ಕೋವಿಡ್-19 (Covid 19) ವಿರುದ್ಧ ಹೋರಾಡಲು ಸಹಕರಿಸಲಿದೆ. ಈ ಹಿನ್ನಲೆಯಲ್ಲಿ 28 ಐಸಿಯು ವೆಂಟಿಲೇಟರ್‌ಗಳನ್ನು ನೀಡಲಾಗಿದೆ. ಭಾರತೀಯ ರಾಯಭಾರಿ ವಿನಯ್ ಎಂ. ಕ್ವಾತ್ರಾ (Indian envoy VM Kwatra) ಅವರು ನೇಪಾಳದ ಆರೋಗ್ಯ ಸಚಿವ ಭಾನುಭಕ್ತ ಧಕಲ್ (Bhanubhakt Dhakal) ಅವರಿಗೆ ವೆಂಟಿಲೇಟರ್‌ಗಳನ್ನು ಹಸ್ತಾಂತರಿಸಿದರು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಭಾರತದ ಬಗ್ಗೆ ನೇಪಾಳದ ವರ್ತನೆ ಬದಲಾವಣೆ ಹಿಂದೆ ಚೀನಾ-ಪಾಕ್ ಪಿತೂರಿ

ಜೀವ ಉಳಿಸುವಲ್ಲಿ ವೆಂಟಿಲೇಟರ್‌ಗಳು ಪರಿಣಾಮಕಾರಿ:-
ವಾಸ್ತವವಾಗಿ ಕರೋನಾ ಸೋಂಕಿಗೆ ಒಳಗಾಗಿದ್ದು ಗಂಭೀರ ಸ್ಥಿತಿಯಲ್ಲಿರುವವರಿಗೆ ಜೀವ ಉಳಿಸುವಲ್ಲಿ ವೆಂಟಿಲೇಟರ್‌ಗಳು ಅತ್ಯವಶ್ಯಕವಾಗಿದೆ. ಈ ಹಿಂದೆ ಭಾರತವು ಕೋವಿಡ್ -19 ಪರೀಕ್ಷಾ ಕಿಟ್‌ಗಳು, ವೆಂಟಿಲೇಟರ್‌ಗಳು ಮತ್ತು ಅಗತ್ಯ ಔಷಧಗಳನ್ನು ರವಾನಿಸುವ ಮೂಲಕ ನೇಪಾಳಕ್ಕೆ ನೆರವಾಗಿತ್ತು. 

ನೇಪಾಳದ ಭೂಪ್ರದೇಶವನ್ನು ಅಕ್ರಮವಾಗಿ ಅತಿಕ್ರಮಿಸಿ 9 ಕಟ್ಟಡಗಳನ್ನು ನಿರ್ಮಿಸಿದ ಚೀನಾ

ಇದೀಗ 28 ಐಸಿಯು ವೆಂಟಿಲೇಟರ್‌ಗಳನ್ನು ಹಸ್ತಾಂತರಿಸುವ ವೇಳೆ ಭಾರತೀಯ ರಾಯಭಾರಿ ಕ್ವಾತ್ರಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಭಾರತ ಸರ್ಕಾರ ನೇಪಾಳದ (Nepal) ಜನತೆಯೊಂದಿಗೆ ಸದಾ ನಿಲ್ಲಲಿದೆ ಎಂಬ ಸಂದೇಶವನ್ನು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುವ ಭಾರತದ ಬದ್ಧತೆಯನ್ನು ದೃಢಪಡಿಸಿದರು ಎಂದು ಹೇಳಲಾಗಿದೆ.

ನೇಪಾಳದ ಕರೋನಾ ಬುಲೆಟಿನ್ :-
ನೇಪಾಳದಲ್ಲಿ ಕರೋನಾ ಸಾಂಕ್ರಾಮಿಕ ರೋಗಿಗಳ ಸಂಖ್ಯೆ 1 ಲಕ್ಷದ 94 ಸಾವಿರಕ್ಕಿಂತಲೂ ಹೆಚ್ಚಾಗಿದೆ. ಇವರಲ್ಲಿ 1 ಲಕ್ಷದ 58 ಮಂದಿ ಕರೋನಾ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದಾರೆ. ಕರೋನಾ ಕಾರಣದಿಂದಾಗಿ ಈವರೆಗೂ 1108 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 

Section: 
English Title: 
Corona Crisis: India handover 28 more ventilators to Nepal
News Source: 
Home Title: 

ಸಂಕಷ್ಟದ ಸಮಯದಲ್ಲಿ ನೇಪಾಳದ ಸಹಾಯಕ್ಕೆ ಬಾರದ ಚೀನಾ, ಮತ್ತೆ ಸಹಾಯ ಹಸ್ತ ಚಾಚಿದ ಭಾರತ

ಸಂಕಷ್ಟದ ಸಮಯದಲ್ಲಿ ನೇಪಾಳದ ಸಹಾಯಕ್ಕೆ ಬಾರದ ಚೀನಾ, ಮತ್ತೆ ಸಹಾಯ ಹಸ್ತ ಚಾಚಿದ ಭಾರತ
Yes
Is Blog?: 
No
Tags: 
Facebook Instant Article: 
Yes
Highlights: 

ಚೀನಾದ ಖುಷಿಗಾಗಿ ಭಾರತದೊಂದಿಗಿನ ತನ್ನ ಶತಮಾನಗಳಷ್ಟು ಹಳೆಯ ಸ್ನೇಹವನ್ನೇ ಪಣಕ್ಕಿಟ್ಟಿದ್ದ ನೇಪಾಳ

ನೇಪಾಳದ ಬದಲಾವಣೆಯ ಹೊರತಾಗಿಯೂ ತಾನು ನೇಪಾಳದ ಅತ್ಯುತ್ತಮ ಸ್ನೇಹಿತ ಎಂಬ ಭರವಸೆಯನ್ನು ಉಳಿಸಿಕೊಂಡಿರುವ ಭಾರತ 

ಕರೋನಾವೈರಸ್ ಸಂಕಷ್ಟದ ಸಮಯದಲ್ಲಿ ಭಾರತ ಸರ್ಕಾರ ನೇಪಾಳ ಸರ್ಕಾರಕ್ಕೆ ಕೋವಿಡ್-19 ವಿರುದ್ಧ ಹೋರಾಡಲು ಸಹಕರಿಸಲಿದೆ. 

Mobile Title: 
ಸಂಕಷ್ಟದ ಸಮಯದಲ್ಲಿ ನೇಪಾಳದ ಸಹಾಯಕ್ಕೆ ಬಾರದ ಚೀನಾ, ಮತ್ತೆ ಸಹಾಯ ಹಸ್ತ ಚಾಚಿದ ಭಾರತ
Publish Later: 
No
Publish At: 
Monday, November 9, 2020 - 06:26
Created By: 
Yashaswini V
Updated By: 
Yashaswini V
Published By: 
Yashaswini V