ನವದೆಹಲಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಅಂತಿಮ ಆದೇಶ ನೀಡುವ ಮೊದಲೇ ಪೀಠದಲ್ಲಿದ್ದ ನ್ಯಾಯಮೂರ್ತಿ ರಂಜಿತ್ ಚಟರ್ಜಿ ನಿವೃತ್ತರಾದ ಹಿನ್ನೆಲೆಯಲ್ಲಿ ಇಂದಿನಿಂದ ಎತ್ತಿನಹೊಳೆ ನದಿ ತಿರುವು ಯೋಜನೆಯ ಪುನರ್ ವಿಚಾರಣೆ ಆರಂಭವಾಗಲಿದೆ.
ಎತ್ತಿನಹೊಳೆ ನದಿ ವಿಚಾರವಾಗಿ ಈವರೆಗೂ ವಿಚಾರಣೆ ನಡೆಸಿದ್ದ ಪೀಠದಲ್ಲಿದ್ದ ನ್ಯಾಯಮೂರ್ತಿ ರಂಜಿತ್ ಚಟರ್ಜಿ ನಿವೃತ್ತರಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸುವಂತೆ ಅರ್ಜಿದಾರರ ಪರ ವಕೀಲ ಖುತ್ವಿಕ್ ದತ್ತಾ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಪುನರ್ ವಿಚಾರಣೆಗೆ ಸಮ್ಮತಿ ನೀಡಿದೆ. ಹಾಗಾಗಿ ಈ ಹಿಂದೆ ಷರತ್ತುಗಳನ್ನು ಪಾಲಿಸಿ ಕಾಮಗಾರಿ ನಡೆಸಬಹುದು ಎಂದು ನ್ಯಾಯಾಧಿಕರಣ ರಾಜ್ಯ ಸರ್ಕಾರಕ್ಕೆ ನೀಡಿದ್ದ ಮಧ್ಯಂತರ ತೀರ್ಪು ರದ್ದಾಗುವ ಸಾಧ್ಯತೆ ಇದೆ.
ಇದನ್ನು ಓದಿ: 'ಎತ್ತಿನ ಹೊಳೆ' ಯೋಜನೆಯ ಮೊದಲ ಹಂತದ ಕಾಮಗಾರಿಗೆ NGT ಅಸ್ತು
ನವದೆಹಲಿಯಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ಇಂದಿನಿಂದ ನ್ಯಾ. ಜಾವೇದ್ ರಹೀಂ ನೇತೃತ್ವದ ತ್ರಿಸದಸ್ಯ ಪೀಠ ಎತ್ತಿನಹೊಳೆ ನದಿ ತಿರುವು ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಸೋಮಶೇಖರ್ ಸಲ್ಲಿಸಿದ್ದ ಮೂಲ ಅರ್ಜಿಯ ಪುನರ್ ವಿಚಾರಣೆಯನ್ನು ನಡೆಸಲಿದೆ.