ಖ್ಯಾತ ಹಿರಿಯ ಶಾಸ್ತ್ರೀಯ ಗಾಯಕ Pandit Jasraj ನಿಧನ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ, ಹಿರಿಯ ಶಾಸ್ತ್ರೀಯ ಗಾಯಕ ಪಂಡಿತ್ ಜಸರಾಜ್ ನಿಧನರಾಗಿದ್ದಾರೆ.  

Last Updated : Aug 17, 2020, 06:44 PM IST
ಖ್ಯಾತ ಹಿರಿಯ ಶಾಸ್ತ್ರೀಯ ಗಾಯಕ Pandit Jasraj ನಿಧನ title=

ನವದೆಹಲಿ:ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ, ಹಿರಿಯ ಶಾಸ್ತ್ರೀಯ ಗಾಯಕ ಪಂಡಿತ್ ಜಸರಾಜ್ ನಿಧನರಾಗಿದ್ದಾರೆ.  ಅವರಿಗೆ 90 ವರ್ಷ ವಯಸ್ಸಾಗಿತ್ತು. ಅಮೆರಿಕಾದ ನ್ಯೂ ಜರ್ಸಿಯಲ್ಲಿ ಅವರು ತಮ್ಮ ಕೊನೆಯುಸಿರೆಳೆದಿದಾರೆ. ಭಾರತದ ಸರ್ವೋಚ್ಛ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ್ ನಿಂದ ಅವರನ್ನು ಗೌರವಿಸಲಾಗಿತ್ತು. ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎನ್ನಲಾಗಿದೆ. ಆದರೆ ಇದುವರೆಗೆ ಈ ಕುರಿತು ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಲತಾ ಮಂಗೇಶ್ಕರ್ ಪ್ರಶಸ್ತಿಯಿಂದಲೂ ಕೂಡ ಅವರನ್ನು ಗೌರವಿಸಲಾಗಿತ್ತು . ಪಂಡಿತ್ ಜಸರಾಜ್ ಅವರ ಗೌರವಾರ್ಥ NASA ಗ್ರಹವೊಂದನ್ನು ಕೂಡ ಹೆಸರಿಸಿದೆ.

Trending News