10 ರೂ.ಗೆ ಚಹಾ, 20 ರೂ.ಗೆ ಸಮೋಸ ಸಿಗುವ ದೇಶ ಏಕೈಕ ವಿಮಾನ ನಿಲ್ದಾಣ ಇದು ! ಇಲ್ಲಿ ವಿಮಾನ ಯಾನ ದುಬಾರಿಯಲ್ಲ

ಕಳೆದ ವರ್ಷ ಡಿಸೆಂಬರ್ 21 ರಂದು ಕೋಲ್ಕತ್ತಾ ವಿಮಾನ ನಿಲ್ದಾಣದ ಶತಮಾನೋತ್ಸವದ ಸಂದರ್ಭದಲ್ಲಿ ಈ ಕೆಫೆಯನ್ನು ಪ್ರಾರಂಭಿಸಲಾಯಿತು.   

Written by - Ranjitha R K | Last Updated : Jan 22, 2025, 04:18 PM IST
  • ದೇಶದ ಮೊದಲ ‘ಅಗ್ಗದ ಆಹಾರ’ ಕೆಫೆ ಆರಂಭ
  • ಉಡಾನ್ ಯಾತ್ರಿ ಕೆಫೆಯಲ್ಲಿ ಅಗ್ಗದ ಬೆಲೆಯಲ್ಲಿ ಆಹಾರ
  • ೧೦ ರೂಪಾಯಿಗೆ ಚಹಾ, ಕಾಫಿ
10 ರೂ.ಗೆ ಚಹಾ, 20 ರೂ.ಗೆ ಸಮೋಸ ಸಿಗುವ ದೇಶ ಏಕೈಕ ವಿಮಾನ ನಿಲ್ದಾಣ ಇದು ! ಇಲ್ಲಿ ವಿಮಾನ ಯಾನ ದುಬಾರಿಯಲ್ಲ  title=

ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ದೇಶದ ಮೊದಲ ‘ಅಗ್ಗದ ಆಹಾರ’ ಕೆಫೆ ಆರಂಭಿಸಲಾಗಿದೆ. ಉಡಾನ್ ಯಾತ್ರಿ ಕೆಫೆಯಲ್ಲಿ ಪ್ರಯಾಣಿಕರಿಗೆ ಕೇವಲ 10 ರೂಪಾಯಿಗೆ ಚಹಾ ನೀಡಲಾಗುತ್ತದೆ. ಆದರೆ ವಿಮಾನ ನಿಲ್ದಾಣದ ಇತರ ಅಂಗಡಿಗಳಲ್ಲಿ ಅದೇ ಚಹಾವನ್ನು ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಕಳೆದ ವರ್ಷ ಡಿಸೆಂಬರ್ 21 ರಂದು ಕೋಲ್ಕತ್ತಾ ವಿಮಾನ ನಿಲ್ದಾಣದ ಶತಮಾನೋತ್ಸವದ ಸಂದರ್ಭದಲ್ಲಿ ಈ ಕೆಫೆಯನ್ನು ಪ್ರಾರಂಭಿಸಲಾಯಿತು. ಕೆಫೆಯನ್ನು ಉದ್ಘಾಟಿಸಿದ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು, ಕೆಫೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. 'ಎಕ್ಸ್' ಪೋಸ್ಟ್‌ನಲ್ಲಿ ಸಚಿವರು, 'ನಾಗರಿಕ ವಿಮಾನಯಾನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ, ಪ್ರತಿ ಭಾರತೀಯರಿಗೂ ವಿಮಾನ ಪ್ರಯಾಣವನ್ನು ಹೆಚ್ಚು ಸುಲಭ ಮತ್ತು ಕೈಗೆಟುಕುವಂತೆ ಮಾಡುವುದು ನನ್ನ ಗುರಿಯಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿರುವ 'ಉಡಾನ್ ಯಾತ್ರಿ ಕೆಫೆ' ದೇಶದ ಮೊದಲ ಅಗ್ಗದ ಆಹಾರ ಮಳಿಗೆಯಾಗಿದ್ದು, ಈ ದಿಕ್ಕಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಸರ್ಕಾರದ ಆದೇಶದ ಬಳಿಕ ಸರ್ಕಾರಿ ನೌಕರರ ವೇತನದಲ್ಲಿ 186% ಹೆಚ್ಚಳ ! ಪಿಂಚಣಿಯಲ್ಲಿಯೂ ಭರ್ಜರಿ ಏರಿಕೆ !

ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಖಾಸಗಿ ಕಂಪನಿಯೊಂದು ಈ ಕೆಫೆಯನ್ನು ನಿರ್ವಹಿಸುತ್ತಿದೆ. ಇಲ್ಲಿ ನೀರಿನ ಬಾಟಲಿಗಳು 10 ರೂ.ಗೆ, ಕಾಫಿ, ಸಿಹಿತಿಂಡಿಗಳು ಮತ್ತು ಸಮೋಸಾಗಳು 20 ರೂ.ಗೆ ಲಭ್ಯವಿವೆ. ಮುಂದಿನ ದಿನಗಳಲ್ಲಿ ಇತರ ವಿಮಾನ ನಿಲ್ದಾಣಗಳಲ್ಲೂ ಇಂತಹ ಅಗ್ಗದ ಕೆಫೆಗಳನ್ನು ಆರಂಭಿಸಬಹುದು ಎಂದು ಮೂಲಗಳು ತಿಳಿಸಿವೆ. ಈ ಕೆಫೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಸಹಯೋಗದಲ್ಲಿ ಪ್ರಾರಂಭಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಆಹಾರ ಮತ್ತು ಪಾನೀಯಗಳ ಬೆಲೆ ಹೆಚ್ಚು ಎನ್ನುವ ಪ್ರಯಾಣಿಕರ  ದೂರಿನ ಹಿನ್ನೆಲೆಯಲ್ಲಿ ಈ ಕೆಫೆಯನ್ನು ಆರಂಭಿಸಲಾಗಿದೆ. 

ವಿಮಾನ ನಿಲ್ದಾಣದಲ್ಲಿ ಆಹಾರ ಪದಾರ್ಥಗಳು ಮತ್ತು ಪಾನೀಯಗಳ ಬೆಲೆಗಳು ರೈಲ್ವೆ ನಿಲ್ದಾಣಕ್ಕಿಂತ 100-200 ಪ್ರತಿಶತದಷ್ಟು ಹೆಚ್ಚಿವೆ ಎನ್ನುವುದು 60 ಪ್ರತಿಶತ ಪ್ರಯಾಣಿಕರ ಅಭಿಪ್ರಾಯ. ಕಳೆದ ತಿಂಗಳು ಬಿಡುಗಡೆಯಾದ ಸಮೀಕ್ಷೆಯಲ್ಲಿ 28,000 ಕ್ಕೂ ಹೆಚ್ಚು ವಿಮಾನ ಪ್ರಯಾಣಿಕರು ಪಾಲ್ಗೊಂಡಿದ್ದರು. 

ಇದನ್ನೂ ಓದಿ : ಹೊಸ ಮಾರ್ಗಸೂಚಿ: ಬ್ಯಾಂಕಿಂಗ್ ಹೆಸರಿನಲ್ಲಿ ಕರೆ ವಂಚನೆ ತಪ್ಪಿಸಲು ಬಹುದೊಡ್ಡ ಕ್ರಮ ಕೈಗೊಂಡ ಆರ್‌ಬಿ‌ಐ

ವಿಮಾನ ನಿಲ್ದಾಣದಲ್ಲಿ ಸಮೋಸಾ ಅಥವಾ ಪಪ್ಸ್ ಬೆಲೆ 200 ರೂ.ಗಿಂತ ಹೆಚ್ಚಿದ್ದು, ಕಾಫಿ ಅಥವಾ ಟೀಯನ್ನು 200-300 ರೂ.ಗೆ ಮಾರಾಟ ಮಾಡಲಾಗುತ್ತದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಈ ಬೆಲೆಯು ಮಾಲ್ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಆಹಾರದ ಅಂಗಡಿಗಳಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚು ಎನ್ನುವುದು ಗಮನಾರ್ಹ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News