Viral Video: ಇಂಟರ್ನೆಟ್ನಲ್ಲಿ ವೈರಲ್ ಆಗುವ ಕೆಲವು ವೀಡಿಯೊಗಳು ಕೆಲವೊಮ್ಮೆ ನಮ್ಮ ಹೃದಯವನ್ನು ಮಿಡಿಯುವಂತೆ ಮಾಡುತ್ತವೆ. ಸದ್ಯ ಇಂತಹದೊಂದು ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಗೆಳೆಯನ ಹುಟ್ಟುಹಬ್ಬ ಆಚರಿಸಲು ಹೋದ ಆ ಯುವಕ ಅನಿರೀಕ್ಷಿತವಾಗಿ ಕಟ್ಟಡದಿಂದ ಬಿದ್ದಿದ್ದು ಹೇಗೆ? ಅದರ ಬಗ್ಗೆ ನೋಡೋಣ.
ಹೈದರಾಬಾದ್ನ ಚಂದನ್ ನಗರದಲ್ಲಿ ಕಟ್ಟಡದಿಂದ ಬಿದ್ದು ಉದಯ್ ಕುಮಾರ್ ಸಾವನ್ನಪ್ಪಿದ್ದಾರೆ. 22 ವರ್ಷ ವಯಸ್ಸಿನವರಾಗಿದ್ದ ಅವರು ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು. ಜ್ಯೋತಿನಗರ ಮೂಲದ ಈತ ಘಟನೆ ನಡೆದ ಅಕ್ಟೋಬರ್ 20-21ರ ರಾತ್ರಿ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ವಿವಿ ಪ್ರೈಡ್ ಹೋಟೆಲ್ ಗೆ ತೆರಳಿದ್ದ.
ಯುವಕನ ಸಾವಿನ ನಂತರ ಹೋಟೆಲ್ ನ 3ನೇ ಮಹಡಿಯಿಂದ ಕೆಳಗೆ ಬಿದ್ದಿದ್ದ ಸಿಸಿಟಿವಿ ದೃಶ್ಯಾವಳಿ ಇದೀಗ ವೈರಲ್ ಆಗಿದೆ. ಹೋಟೆಲ್ ಲಾಬಿಯಲ್ಲಿ ನಾಯಿಯನ್ನು ನೋಡಿದ ಅವನು ಅದರ ಹಿಂದೆ ಓಡುತ್ತಾನೆ, ವೇಗವಾಗಿ ಓಡುತ್ತಾನೆ ಈ ವೇಳೆ ಹೋಟೆಲ್ನ ಕಿಟಕಿಯಿಂದ ಕೆಳಗೆ ಬೀಳುತ್ತಾನೆ.
ಅವನು ಬೆನ್ನಟ್ಟುತ್ತಿದ್ದ ನಾಯಿ ಇನ್ನೊಂದು ಬದಿಗೆ ಹೋಗುತ್ತದೆ. ಆದರೆ, ಯುವಲ ಮಾತ್ರ ಓಡುತ್ತಾ ಹೋಗಿ ಕಿಟಕಿಯಿಂದ ಬೀಳುತ್ತಾನೆ. ಇಣುಕಿ ನೋಡುತ್ತಿದ್ದ ಅವನ ಸ್ನೇಹಿತರು ಅವನು ಬೀಳುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಈ ವೀಡಿಯೋ ಸದ್ಯ ಅಂತರ್ಜಾಲದಲ್ಲಿ ದುಃಖ ಮತ್ತು ಆಘಾತವನ್ನುಂಟು ಮಾಡುತ್ತಿದೆ.
ಘಟನೆಯ ಕುರಿತು ಪೊಲೀಸರು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ. ನಡೆಯುತ್ತಿರುವ ತನಿಖೆಯ ಪ್ರಕಾರ, ಮೃತರು 12:30 ರ ಸುಮಾರಿಗೆ ಹೋಟೆಲ್ ಲಾಬಿಯಲ್ಲಿ ನಾಯಿಯನ್ನು ನೋಡಿದ್ದಾರೆ ಮತ್ತು ಅದರೊಂದಿಗೆ ಆಟವಾಡಲು ಹೊರಗೆ ಹೋಗಿದ್ದರು. ಆಗ ಅದರ ಹಿಂದೆ ಓಡುತ್ತಿದ್ದಾಗ ಈ ಭಯಾನಕ ಘಟನೆ ನಡೆದಿದೆ.
ಘಟನೆ ನಡೆದ ಹೋಟೆಲ್ ಗೂಗಲ್ನಲ್ಲಿ 3.5 ಸ್ಟಾರ್ ರೇಟಿಂಗ್ ಪಡೆದಿದೆ ಮತ್ತು ಅದರ ಅತಿಥಿಗಳಿಂದ ತೀವ್ರ ಟೀಕೆಗೆ ಒಳಗಾಗಿದೆ. 22ರ ಹರೆಯದ ಯುವಕನ ಸಾವಿಗೆ ಹೋಟೆಲ್ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ. ಈ ಘಟನೆಯನ್ನು ಕೇಳಿದವರು ಅಂತರ್ಜಾಲದಲ್ಲಿ ಈ ವಿಡಿಯೋವನ್ನು ಶೇರ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
Now a close up and clear cctv video emerged it looks like
Dog was not chasing him
He was chasing the dog and slipped from the third floor#Hyderabad #chandanagar https://t.co/4ifKOhlCul pic.twitter.com/YRvGAzbijJ
— Sudhakar Udumula (@sudhakarudumula) October 22, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.