ಸೌಂದರ್ಯವೇ ಮುಳುವಾಯ್ತು ಕುಂಭಮೇಳ ಸುಂದರಿಗೆ..! ಏನಾಗಬಾರದಿತ್ತೋ ಅದೇ ಆಯ್ತು ಚೆಲುವೆಗೆ.. ಪಾಪ..

Maha kumbh mela beautiful girl : ಪ್ರಯಾಗ್ ರಾಜ್‌ನಲ್ಲಿ ಮಹಾ ಕುಂಭಮೇಳ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಪ್ರತಿ ದಿನ ನೂರಾರು ಭಕ್ತರು ಪ್ರಪಂಚದಾದ್ಯಂತ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕುಂಭಮೇಳದಲ್ಲಿ ತನ್ನ ಸೌಂದರ್ಯದ ಮೂಲಕ ವೈರಲ್‌ ಆಗಿದ್ದ ಯುವತಿ ಗೋಳು ಹೇಳತಿರದ್ದಾಗಿದೆ..

Written by - Krishna N K | Last Updated : Jan 19, 2025, 06:57 PM IST
    • ಮಹಾ ಕುಂಭಮೇಳ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ.
    • ಪ್ರತಿ ದಿನ ನೂರಾರು ಭಕ್ತರು ಪ್ರಪಂಚದಾದ್ಯಂತ ಪವಿತ್ರ ಸ್ನಾನ ಮಾಡುತ್ತಿದ್ದಾರೆ.
    • ಸೌಂದರ್ಯದ ಮೂಲಕ ವೈರಲ್‌ ಆಗಿದ್ದ ಯುವತಿ ಗೋಳು ಹೇಳತಿರದ್ದಾಗಿದೆ..
ಸೌಂದರ್ಯವೇ ಮುಳುವಾಯ್ತು ಕುಂಭಮೇಳ ಸುಂದರಿಗೆ..! ಏನಾಗಬಾರದಿತ್ತೋ ಅದೇ ಆಯ್ತು ಚೆಲುವೆಗೆ.. ಪಾಪ.. title=

Maha Kumbh Monalisa : ಕುಂಭಮೇಳದ ಆಧ್ಯಾತ್ಮಿಕ ಉತ್ಸವಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಸೇರುತ್ತಾರೆ. ಕೋಟ್ಯಂತರ ಭಕ್ತರು ಈಗಾಗಲೇ ಪುಣ್ಯ ಸ್ನಾನ ಮಾಡಿದ್ದಾರೆ. ಸುಮಾರು 13 ಅಖಾಡಗಳಿಗೆ ಸೇರಿದ ಅಘೋರಿಗಳು, ನಾಗಾ ಸಾಧುಗಳು ಮತ್ತು  ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ.. ಇದರ ನಡುವೆ ವೈರಲ್‌ ಆಗಿದ್ದ ಚೆಲುವೆಗೆ ಯೂಟ್ಯೂಬರ್‌ಗಳ ಕಾಟ ಹೆಚ್ಚಾಗಿಬಿಟ್ಟಿದೆ..

ಹೌದು.. ಪ್ರಸ್ತು ಕುಂಭಮೇಳ ದೇಶದಾದ್ಯಂತ ಸುದ್ದಿಯಲ್ಲಿರುವ ವಿಷಯ. ಈಗಾಗಲೇ ಐಐಟಿ ಬಾಬಾ, ಗ್ಲಾಮರಸ್ ಸಾಧ್ವಿ ಹರ್ಷರಿಚಾರ್ಯ ಒಂದು ರೇಂಜ್ ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಇವರ ನಡುವೆ.. ವೈರಲ್‌ ಆದ ರುದ್ರಾಕ್ಷಿ ಮಾರುವ ಯುವತಿಯನ್ನು ಸಂದರ್ಶಿಸಲು ಹಲವು ಮಾಧ್ಯಮಗಳು ಪೈಪೋಟಿ ನಡೆಸುತ್ತಿವೆ. 

ಇದನ್ನೂ ಓದಿ:ಒಂದೇ Reels ಮೂಲಕ ಗಿನ್ನಿಸ್ ದಾಖಲೆ ಬರೆದ ಯುವಕ..! ಬ್ಯಾಕ್‌.. ಫ್ರಂಟ್‌ ತೋರಿಸೋದು ಬಿಟ್ಟು ಈ ರೀತಿ ವಿಡಿಯೋ ಮಾಡಿ..

ಕಳೆದ ನಾಲ್ಕೈದು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಈಕೆಯ ಸೌಂದರ್ಯ ವಿಚಾರವೇ ಸುದ್ದಿಯಾಗುತ್ತಿದೆ.. ಈ ಚೆಲುವೆಯ ಫೋಟೋಗಳು ಮತ್ತು ವಿಡಿಯೋಗಳು ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿವೆ.. ಆಕರ್ಷಕ ಕಣ್ಣು, ಕೃಷ್ಣ ವರ್ಣ.. ಸುಂದರವಾದ ನಗುವಿನ ಮೂಲಕ ಗಮನಸೆಳೆದಿದ್ದ ರೂಪವತಿಗೆ ವ್ಯಾಪರ ಮಾಡಲೂ ಜನ ಬಿಡುತ್ತಿಲ್ಲ.. 

ಕುಂಭಮೇಳದಲ್ಲಿ ಮಾಲೆ ಮತ್ತು ರುದ್ರಾಕ್ಷಗಳನ್ನು ಮಾರುತ್ತ ಜೀವನ ಸಾಗಿಸುತ್ತಿದ್ದ ಮೊನಾಲಿಸಾ.. ಇಂದೋರ್‌ನ ಹುಡುಗಿ. ಇದೀಗ ಈಕೆಯನ್ನು ಸಂದರ್ಶಿಸಲು ಯೂಟ್ಯೂಬರ್‌ಗಳು ಹಿಂದೆ ಬಿದ್ದಿದ್ದಾರೆ. ಇದರಿಂದ ಈಕೆ ವ್ಯಾಪರಕ್ಕೆ ಅಡ್ಡಿಯಾಗುತ್ತಿದೆ. ಅದಕ್ಕಾಗಿ ಎಲ್ಲರಿಂದ ತಪ್ಪಿಸಿಕೊಳ್ಳಲು ಸಾಧುಗಳ ಟೆಂಟ್‌ ಮೊರೆ ಹೋಗಬೇಕಾಗಿದೆ. 

ಇದನ್ನೂ ಓದಿ:ಕುಂಭಮೇಳ 2025: ಈ ಬಾರಿ ಎಷ್ಟು ಮಹಿಳೆಯರು ಸನ್ಯಾಸತ್ವ ಸ್ವೀಕರಿಸಿದ್ದಾರೆ ಗೊತ್ತಾ? ಬೆಚ್ಚಿಬೀಳಿಸುತ್ತಿದೆ ಆಘಾತಕಾರಿ ವರದಿ..

ಮೊನಾಲಿಸಾಗೆ ಇದು ವ್ಯಾಪಾರದ ಸಮಯ ಆದರೆ ಸಂದರ್ಶಕರು ಈಕೆಯ ಬೆನ್ನು ಹತ್ತಿದ್ದು ನಷ್ಟ ಅನುಭವಿಸಬೇಕಾಗಿದೆ. ಸೌಂದರ್ಯವೇ ಈಕೆಯ ಹೊಟ್ಟೆಗೆ ಶಾಪವಾಗಿ ಪರಿಣಮಿಸುತ್ತಿದೆ. ಇನ್ನಾದರೂ ಜನ ಆಕೆಯನ್ನ ಆಕೆಯ ಪಾಡಿಗೆ ಬಿಟ್ಟರೆ ತುಂಬಾ ಒಳ್ಳೆಯದು ಅಲ್ವಾ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News