Kyle Gordy kids : ಕೈಲ್ ಗೋರ್ಡಿ ಎಂಬ 32 ವರ್ಷದ ಅವಿವಾಹಿತ ಅಮೆರಿಕನ್ ವ್ಯಕ್ತಿ 87 ಮಕ್ಕಳ ತಂದೆ. ಈ ವಿಚಾರ ನಿಮ್ಮ ತಲೆ ಕಡಿಸಿಬಹುದು.. ಅಲ್ಲದೆ ಎಷ್ಟು ಹುಡುಗಿಯರ ಜೊತೆ ಈತ ಮಲಗಿರಬಹುದು ಅಂತ ಪ್ರಶ್ನೆ ಮೂಡಿರಬಹುದು.. ಅಲ್ವಾ.. ಕೆಲವೊಂದಿಷ್ಟು ಬಾಯ್ಸ್ ಹೊಟ್ಟೆ ಉರಿದಿರುತ್ತೆ ಬಿಡಿ..
ಹೌದು.. ಈ ಸುದ್ದಿ 100% ನಿಜ ಕೈಲ್ ಗೋಡಿ ವೀರ್ಯ ದಾನಿಯಾಗಿ ಕೆಲಸ ಮಾಡುತ್ತಾರೆ. ಅನೇಕ ದಂಪತಿಗಳಿಗೆ ಈತ ಸಹಾಯ ಮಾಡುತ್ತಾನೆ. ಅಲ್ಲದೆ, ಭವಿಷ್ಯದಲ್ಲಿ 100 ಮಕ್ಕಳ ತಂದೆಯಾಗುವ ಕನಸು ಹೊತ್ತಿರುವ ಇವರು ಈ ಕೆಲಸಕ್ಕೆ ಒಂದು ರೂ. ಹಣ ತೆಗೆದುಕೊಳ್ಳುವುದಿಲ್ಲ.
2025ರ ಅಂತ್ಯದ ವೇಳೆಗೆ 100 ಮಕ್ಕಳಿಗೆ ತಂದೆಯಾಗುವುದು ಕೈಲ್ ಕನಸು. ಈ 'ಶತಕವೀರ್' ಪ್ರಪಂಚದಾದ್ಯಂತ ಮಕ್ಕಳಿಲ್ಲದ ದಂಪತಿಗಳಿಗೆ ಸಹಾಯ ಮಾಡುತ್ತಿದ್ದಾನೆ.. ಅವರ ಮುಖದಲ್ಲಿ ನಗುವನ್ನು ತರುತ್ತಿದ್ದಾನೆ. ಜನರು ನಿರಂತರವಾಗಿ ಇವರ ಸಹಾಯವನ್ನು ಕೇಳುತ್ತಿದ್ದಾರೆ. ಇಲ್ಲ ಅನ್ನದೆ.. ಎಲ್ಲರಿಗೂ ವೀರ್ಯ ನೀಡುತ್ತಾನೆ.. ಕೈಲ್..
'ದಿ ಸನ್' ವೆಬ್‌ಸೈಟ್‌ನ ವರದಿಯ ಪ್ರಕಾರ, ಕ್ಯಾಲಿಫೋರ್ನಿಯಾದ 32 ವರ್ಷದ ಕೈಲ್ ಗೋರ್ಡಿ ಇದುವರೆಗೆ 87 ಮಕ್ಕಳಿಗೆ ತಂದೆಯಾಗಿದ್ದಾರೆ. ಈತನ ಮಕ್ಕಳು ವಿಶ್ವದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಶೀಘ್ರದಲ್ಲೇ 100 ಮಕ್ಕಳ ತಂದೆಯಾಗುವ ಗುರಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಯುಕೆಯ ನೀಡ್ ಟು ನೋ ವೆಬ್‌ಸೈಟ್‌ನೊಂದಿಗೆ ಮಾತನಾಡಿದ ಕೈಲ್, ಇಷ್ಟು ಮಕ್ಕಳಿಗೆ ತಂದೆಯಾಗಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಕೈಲ್ ಗೋರ್ಡಿ ಇನ್ನೂ ಎಷ್ಟು ಮಕ್ಕಳಿಗೆ ತಂದೆಯಾಗಬೇಕು ಎಂಬ ಗುರಿಯನ್ನು ಹೊಂದಿಲ್ಲವಂತೆ.. ಆದಷ್ಟೂ ಸಹಾಯ ಮಾಡುವ ಗುಣ ಅವರದ್ದು ಎಂದು ಹೇಳಿಕೊಂಡಿದ್ದಾರೆ..
ಅಷ್ಟೇ ಅಲ್ಲ ಕೈಲ್ 'ಬಿ ಪ್ರೆಗ್ನೆಂಟ್ ನೌ' ಎಂಬ ವೆಬ್‌ಸೈಟ್ ಅನ್ನು ಹೊಂದಿದ್ದಾರೆ, ಅಲ್ಲಿ ಜನರು ಅವರನ್ನು ಸಂಪರ್ಕಿಸುತ್ತಾರೆ. ಇದಲ್ಲದೆ, ಈತ ತನಗಾಗಿ ಜೀವನ ಸಂಗಾತಿಯನ್ನು ಹುಡುಕುತ್ತಿದ್ದಾನೆ. ಕಳೆದ ವರ್ಷ ಅವರು ಹುಡುಗಿಯನ್ನು ಪ್ರೀತಿಸುತ್ತಿದ್ದರು ಆದ್ರೆ ಬ್ರೇಕಪ್ ಆಯ್ತು.. ವರದಿಯ ಪ್ರಕಾರ, ಸ್ವೀಡನ್, ನಾರ್ವೆ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನಲ್ಲಿ ಈ ವರ್ಷ 14 ಶಿಶುಗಳು ಜನಿಸುತ್ತವೆಯಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.