ರೋಗ ಪ್ರತಿರೋಧಕ ಶಕ್ತಿ ಹೆಚ್ಚಳಕ್ಕೆ ಇಲ್ಲಿವೆ Health Tips

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲಹೆಗಳು ಆಯುರ್ವೇದದಲ್ಲಿವೆ. ಇದರ ಜೊತೆಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳ ಸಹಾಯವನ್ನೂ ಸಹ ಪಡೆಯಬಹುದು.

Last Updated : May 22, 2020, 08:43 PM IST
ರೋಗ ಪ್ರತಿರೋಧಕ ಶಕ್ತಿ ಹೆಚ್ಚಳಕ್ಕೆ ಇಲ್ಲಿವೆ Health Tips title=

ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟಿನ ಈ ಅವಧಿಯಲ್ಲಿ ಸೌಮ್ಯವಾದ ಕೆಮ್ಮು ಮತ್ತ್ತು ಗಂಟಲ ಕೆರೆತಕ್ಕೆ ಚಿಂತೆ ಮಾಡುವ ಅಗತ್ಯತೆ ಇಲ್ಲ. ಹವಾಮಾನದಲ್ಲಿ ಬದಲಾವಣೆ ಹಾಗೂ ತಂಪಾದ ಮತ್ತು ಬಿಸಿಯಾದ ಆಹಾರ ಪದಾರ್ಥಗಳ ಸೇವೆನೆಯಿಂದ ಇಂತಹ ಸಣ್ಣ ಪುಟ್ಟ ಸಮಸ್ಯೆಗಳು ಉದ್ಭವಿಸುತ್ತವೆ. ಇದಕ್ಕಾಗಿ ಆಸ್ಪತ್ರೆಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ಅದರ ಮದ್ದು ನಿಮ್ಮ ಅಡುಗೆಮನೆಯಲ್ಲಿದೆ. ಅವುಗಳನ್ನು ನೀವು ತಿಳಿದುಕೊಳ್ಳಿ ಮತ್ತು ಇತರರಿಗೂ ತಿಳಿಸಿ. ಆಯುರ್ವೇದದ ಈ ಜ್ಞಾನದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ ಮತ್ತು ಇತರರನ್ನು ರಕ್ಷಿಸಿ.

ಈ ಕುರಿತು ಹೇಳಿಕೆ ನೀಡಿರುವ ರಾಷ್ಟ್ರೀಯ ಆರೋಗ್ಯ ಮಿಶನ್ ನ ಆಯುಶ್ ಘಟಕದ  ಮಹಾನಿರ್ದೇಶಕ ಡಾ.ರಾಮಜೀ ವರ್ಮಾ, ಒಣ ಕೆಮ್ಮು ಮತ್ತು ಗಂಟಲ ಕೆರೆತ ನಿವಾರಣೆಗೆ ಆಯುಶ್ ಸೂಚಿಸಿರುವ ಮನೆಮದ್ದು ತುಂಬಾ ಪರಿಣಾಮಕಾರಿಯಾಗಿವೆ ಎಂದು ಹೇಳಿದ್ದಾರೆ. ಇದಕ್ಕಾಗಿ, ತಾಜಾ ಪುದೀನ ಎಲೆಗಳು ಮತ್ತು ಕಪ್ಪು ಜೀರಿಗೆಗಳನ್ನು ನೀರಿನಲ್ಲಿ ಕುದಿಸಿ ಅದರ ಆವಿಯನ್ನು ದಿನಕ್ಕೆ ಒಮ್ಮೆ ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುತ್ತಾರೆ. ಇದಲ್ಲದೆ ಲವಂಗ ಪುಡಿಯನ್ನು ಸಕ್ಕರೆ-ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಎರಡು ಮೂರು ಬಾರಿ ಸೇವಿಸುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಇದರ ನಂತರವೂ ಸಮಸ್ಯೆ ಗುಣವಾಗದೇ ಹೋದಲ್ಲಿ ವೈದ್ಯಕೀಯ ಸಲಹೆ ಪಡೆಯಿರಿ ಎಂದು ಡಾ.ವರ್ಮಾ ಹೇಳುತ್ತಾರೆ.

ಇದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಒಂದಕ್ಕಿಂತ ಒಂದು  ಸಲಹೆಗಳು ಆಯುರ್ವೇದದಲ್ಲಿವೆ, ಇವುಗಳನ್ನು ಅನುಸರಿಸುವ ಮೂಲಕ ನಾವು ಕೇವಲ ಕರೋನಾ ಅಷ್ಟೇ ಅಲ್ಲ ಇತರ ಸಾಂಕ್ರಾಮಿಕ ರೋಗಗಳಿಂದ ಕೂಡ ದೂರ ಇರಬಹುದು ಎಂದು ಅವರು ಹೇಳಿದ್ದಾರೆ.ಇವುಗಳಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಉಂಟಾಗುವುದಿಲ್ಲ ಎಂದು ವರ್ಮಾ ಹೇಳಿದ್ದಾರೆ.

ಅರಿಶಿನ, ಕೊತ್ತಂಬರಿ, ಜೀರಿಗೆ ಮತ್ತು ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬಳಸುವುದರಿಂದ ಲಾಭದಾಯಕ ಸಾಬೀತಾಗಲಿದೆ ಎಂದು ಡಾ.ವರ್ಮಾ ಹೇಳಿದ್ದರೆ. ಇದಲ್ಲದೆ, ಹಾಲಿನೊಂದಿಗೆ ಅರಿಶಿಣ ಬೆರೆಸಿ ಕುಡಿಯುವುದರಿಂದ ಲಾಭವಾಗಲಿದೆ, ಉಗುರು ಬೆಚ್ಚನೆಯ ನೀರು ಮತ್ತು ಗಿಡಮೂಲಿಕೆ ಕಷಾಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಇದರ ಜೊತೆಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮವನ್ನೂ ಸಹ ಮಾಡಬಹುದಾಗಿದೆ. ಬದಲಾದ ಸಂದರ್ಭಗಳಲ್ಲಿ ಈ ಸಣ್ಣ ಮನೆ ಮದ್ದುಗಳನ್ನು ಪ್ರಯತ್ನಿಸುವ ಮೂಲಕ ನೀವು ಆರೋಗ್ಯವಾಗಿರಲು ಸಾಧ್ಯವಿದೆ, ಏಕೆಂದರೆ ಇದೀಗ ಆಸ್ಪತ್ರೆ ಮತ್ತು ವೈದ್ಯರು ಕರೋನಾದ ರೋಗಿಗಳನ್ನು ಪರೀಕ್ಷಿಸುವ ಮತ್ತು ಮೇಲ್ವಿಚಾರಣೆಯಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಆಸ್ಪತ್ರೆಗಳಲ್ಲಿ ಅನಗತ್ಯ ಒತ್ತಡವನ್ನು ಹೆಚ್ಚಿಸುವುದನ್ನು ತಪ್ಪಿಸಿ ಮತ್ತು ಸುರಕ್ಷಿತವಾಗಿರಿ.

Trending News