Pushpa 2: The Rule : ಪುಷ್ಪ 2: ದಿ ರೂಲ್ ಭಾರತದಲ್ಲಿ ಹೆಚ್ಚು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿತ್ತು. ಚಿತ್ರದ ಪೂರ್ವಭಾಗ, ಪುಷ್ಪ: ದಿ ರೈಸ್, 2021 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದನಾ ನಟಿಸಿದ್ದರು. ಇಲ್ಲಿ ನಾವು ಚಿತ್ರದ ಬಗ್ಗೆ ವಿವರಗಳನ್ನು ಮತ್ತು ಚಿತ್ರದಲ್ಲಿ ಮೂಲತಃ ನಟಿಸಿದವರ ವಿವರಗಳನ್ನು ತಿಳಿಯೋಣ..
ಪುಷ್ಪದಲ್ಲಿ, ಶ್ರೀಗಂಧದ ಕಳ್ಳಸಾಗಣೆ ದಂಧೆ ಮತ್ತು ಅದಕ್ಕೆ ಅಡ್ಡಿಯಾಗುವ ಪೊಲೀಸ್ ಖಳನಾಯಕನ ಸುತ್ತ ಕಥೆ ಸುತ್ತುತ್ತದೆ. ಚಿತ್ರದ ಮೊದಲ ಭಾಗದಲ್ಲಿ ರಕ್ತ ಚಂದನ ಮಾರಾಟ ಜಾಲದಲ್ಲಿ ನಾಯಕನಾಗಿ ಬೆಳೆದ ಪುಷ್ಪಾ ಎರಡನೇ ಭಾಗದಲ್ಲಿ ಡಾನ್ ಆಗಿ ಬದಲಾಗುತ್ತಾನೆ. ಪುಷ್ಪಾ ಚಿತ್ರದ ಎರಡೂ ಭಾಗಗಳನ್ನು ಸುಕುಮಾರ್ ನಿರ್ದೇಶಿಸಿದ್ದಾರೆ. 3 ವರ್ಷಗಳ ಅಂತರದ ನಂತರ ಪುಷ್ಪಾ ಎರಡನೇ ಭಾಗ ಡಿಸೆಂಬರ್ 5 ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ, ರಶ್ಮಿಕಾ ನಾಯಕಿ ಹಾಗೂ ಫಹಾದ್ ಫಾಸಿಲ್ ವಿಲನ್ ಆಗಿ ನಟಿಸಿದ್ದಾರೆ.
ಇದನ್ನೂ ಓದಿ:ಡಿವೋರ್ಸ್ ರೂಮರ್ಸ್ ನಡುವೆ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ಜತೆಯಾಗಿ ಪಾರ್ಟಿ... ಫೋಟೋ ವೈರಲ್! ಸರಿಹೋಯ್ತಾ ಸಂಬಂಧ?
ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಾಯಕಿ ಸಮಂತಾ, ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದರು ಎಂಬ ಮಾತಿದೆ. ಆದರೆ 2018ರ ನಂತರ ಹಳ್ಳಿ ಹುಡುಗಿ ಪಾತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದ ಸಮಂತಾ ಶ್ರೀವಲ್ಲಿ ಪಾತ್ರ ಮಾಡಲು ನಿರಾಕರಿಸಿದ್ದರು ಎನ್ನಲಾಗಿದೆ. ಅದ್ದರಿಂದ ಆ ಅವಕಾಶ ರಶ್ಮಿಕಾ ಪಾಲಾಯಿತು. ಚಿತ್ರದಲ್ಲಿ ಸಮಂತಾ ನಟಿಸಲೇಬೇಕು ಎಂದುಕೊಂಡಿದ್ದ ನಿರ್ದೇಶಕರು ಆಕೆಯನ್ನು ‘ಹೂ ಅಂತಿಯಾ ಮಾವ’ ಹಾಡಿಗೆ ಡ್ಯಾನ್ಸ್ ಮಾಡಲು ಒಪ್ಪಿಸಿದರು.. ಅಂತಿಮವಾಗಿ ಈ ಹಾಡು ಚಿತ್ರಕ್ಕೆ ದೊಡ್ಡ ಹಿಟ್ ಆಯಿತು.
ರಶ್ಮಿಕಾ ಮಾತ್ರವಲ್ಲ, ಪುಷ್ಪಾಗೆ ಅಲ್ಲು ಅರ್ಜುನ್ ಮೊದಲ ಆಯ್ಕೆಯ ನಟನಾಗಿರಲಿಲ್ಲ. ಮೊದಲು ನಾಯಕನಾಗಿ ನಟಿಸಲು ಮಹೇಶ್ ಬಾಬು ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಮಹೇಶ್ ಬಾಬು ವಿಲನ್ ಶೇಡ್ ಪಾತ್ರದಲ್ಲಿ ನಟಿಸಲು ಹಿಂದೇಟು ಹಾಕಿದ್ದರಿಂದ ಆ ಅವಕಾಶ ಅಲ್ಲು ಅರ್ಜುನ್ ಪಾಲಾಯಿತು. ಇತ್ತೀಚೆಗಷ್ಟೇ ಈ ಸಿನಿಮಾದಲ್ಲಿನ ನಟನೆಗೆ ಅಲ್ಲು ಅರ್ಜುನ್ ಪಾತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಬಂದಿತ್ತು.
ಇದನ್ನೂ ಓದಿ:ಸಿನಿರಂಗಕ್ಕೆ ಬಿಗ್ಶಾಕ್.. ವಿಚ್ಛೇದನದ ಹಾದಿಯಲ್ಲಿ ಮತ್ತೊಂದು ಸ್ಟಾರ್ ಜೋಡಿ!!
ಪುಷ್ಪಾ ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ನಟನೆ ಸಖತ್ತಾಗಿದೆ.. ದ್ವಿತೀಯಾರ್ಧದಲ್ಲಿಯೂ ಅವರೇ ವಿಲನ್ ಆಗಿ ಮುಂದುವರೆದಿದ್ದಾರೆ. ಈ ಪಾತ್ರದಲ್ಲಿ ಮೂಲತಃ ತಮಿಳು ನಟ ವಿಜಯ್ ಸೇತುಪತಿ ವಿಲನ್ ಆಗಿ ನಟಿಸಬೇಕಿತ್ತು. ಆದರೆ ಪುಷ್ಪಾ ಚಿತ್ರಕ್ಕೆ ಕಾಲ್ ಶೀಟ್ ಕೊಡಲು ಸಾಧ್ಯವಾಗದ ಕಾರಣ ಅಭಿನಯಿಸಲಿಲ್ಲ ಎನ್ನಲಾಗಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.