Best Bank FD Rates: 1 ವರ್ಷದ ಫಿಕ್ಸಡ್ ಡೆಪಾಸಿಟ್‌ಗೆ ಯಾವ ಬ್ಯಾಂಕುಗಳು ಎಷ್ಟು ಬಡ್ಡಿ ನೀಡುತ್ತೆ?

FD Interest Rates: ಸ್ಥಿರ ಠೇವಣಿ (FD) ಖಾತೆಯನ್ನು ತೆರೆಯುವ ಮೊದಲು ಬ್ಯಾಂಕ್‌ಗಳು ನೀಡುವ ಬಡ್ಡಿ ದರಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹೀಗಾಗಿ ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

FD Interest Rates: ಸ್ಥಿರ ಠೇವಣಿ (FD) ಖಾತೆ ತೆರೆಯುವ ಮೊದಲು ವಿವಿಧ ಬ್ಯಾಂಕ್‌ಗಳು ನೀಡುವ ಬಡ್ಡಿ ದರಗಳನ್ನು ತಿಳಿದುಕೊಳ್ಳುವುದು ಮುಖ್ಯ. ಅಲ್ಪಾವಧಿಯ ಹೂಡಿಕೆಗೆ ಕಡಿಮೆ ಮತ್ತು ದೀರ್ಘಾವಧಿಯ ಹೂಡಿಕೆಗೆ ಹೆಚ್ಚಿನ ಬಡ್ಡಿ ದರ ನೀಡಲಾಗುತ್ತದೆ. ಮೂರು ವರ್ಷಗಳ FDಗೆ ನೀಡಲಾಗುವ ಬಡ್ಡಿ ಒಂದು ವರ್ಷದ FDಗಿಂತ ಹೆಚ್ಚಾಗಿರುತ್ತದೆ. ಬಡ್ಡಿಯಲ್ಲಿ ಗಮನಾರ್ಹ ವ್ಯತ್ಯಾಸವಿದ್ದಾಗ ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕನ್ನು ಆಯ್ಕೆ ಮಾಡಿಕೊಳ್ಳಬಹುದು. 1 ವರ್ಷದ ಸ್ಥಿರ ಠೇವಣಿ ಖಾತೆಯಲ್ಲಿ ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕ್‌ಗಳ ಬಗ್ಗೆ ತಿಳಿದುಕೊಳ್ಳಿರಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

2024ರ ಜುಲೈ 24ರಿಂದ ಜಾರಿಗೆ ಬಂದ ದರಗಳ ಪ್ರಕಾರ, HDFC ಬ್ಯಾಂಕ್ 1 ವರ್ಷದ ಸ್ಥಿರ ಠೇವಣಿಗೆ 6.6% ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ 7.1% ನೀಡುತ್ತದೆ

2 /7

ಈ ಖಾಸಗಿ ಬ್ಯಾಂಕ್ ಒಂದು ವರ್ಷದಿಂದ 15 ತಿಂಗಳವರೆಗಿನ FD ಖಾತೆಗೆ ಸಾರ್ವಜನಿಕರಿಗೆ 6.7% ಮತ್ತು ಹಿರಿಯ ನಾಗರಿಕರಿಗೆ 7.20% ಬಡ್ಡಿ ದರವನ್ನು ನೀಡುತ್ತದೆ.

3 /7

ಒಂದು ವರ್ಷದ ಸ್ಥಿರ ಠೇವಣಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್, ಸಾರ್ವಜನಿಕರಿಗೆ 7.1% ಮತ್ತು ಹಿರಿಯ ನಾಗರಿಕರಿಗೆ 7.6% ಬಡ್ಡಿ ನೀಡುತ್ತದೆ. ಇದು ಜೂನ್ 14ರಿಂದ ಜಾರಿಗೆ ಬಂದಿದೆ.

4 /7

ಕಳೆದ ಅಕ್ಟೋಬರ್ 16ರಿಂದ ಒಂದು ವರ್ಷದ ಸ್ಥಿರ ಠೇವಣಿಗೆ ಫೆಡರಲ್ ಬ್ಯಾಂಕ್ ಸಾರ್ವಜನಿಕರಿಗೆ 6.8% ಮತ್ತು ಹಿರಿಯ ನಾಗರಿಕರಿಗೆ 7.3% ಬಡ್ಡಿ ದರವನ್ನು ನೀಡುತ್ತದೆ.

5 /7

ಭಾರತದ ಅತಿದೊಡ್ಡ ಬ್ಯಾಂಕ್ SBI ಜೂನ್ 15ರಿಂದ ಜಾರಿಗೆ ಬರುವಂತೆ, ಒಂದು ವರ್ಷದ ಸ್ಥಿರ ಠೇವಣಿಯಲ್ಲಿ ಸಾರ್ವಜನಿಕರಿಗೆ 6.8% ಮತ್ತು ಹಿರಿಯ ನಾಗರಿಕರಿಗೆ 7.3% ಬಡ್ಡಿ ನೀಡುತ್ತದೆ.

6 /7

ಕೆನರಾ ಬ್ಯಾಂಕ್ ಸಹ ಸ್ಥಿರ ಠೇವಣಿಗಳಿಗೆ 6.85% ಮತ್ತು ಒಂದು ವರ್ಷದ ಸ್ಥಿರ ಠೇವಣಿಗಳಿಗೆ 7.35% ಬಡ್ಡಿ ನೀಡುತ್ತದೆ. ಈ ದರಗಳು ಜೂನ್ 11ರಿಂದ ಜಾರಿಗೆ ಬಂದಿದೆ.

7 /7

ಒಂದು ವರ್ಷದ FD ಖಾತೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾರ್ವಜನಿಕರಿಗೆ 6.85% ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿ ದರವನ್ನು ನೀಡುತ್ತದೆ. ಇದು ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ.