ಚುನಾವಣೆಯಲ್ಲಿ ಸರ್ಕಾರದ ಸಂಪನ್ಮೂಲ ಹೇರಳವಾಗಿ ಬಳಕೆಯಾಗಿದೆ : ಸಿ.ಸಿ. ಪಾಟೀಲ್

ಕ್ಷೇತ್ರದ ಹಣೆಬರಹವೂ ಇರುತ್ತದೆ. ಇವರಿಂದ ಕ್ಷೇತ್ರದ ಪುಣ್ಯ ಹೆಚ್ಚಾಗಿದೆ ಎಂದು ಭಾವಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರಬಹುದು. ಜನರ ತೀರ್ಪನ್ನು ನಾವು ತಲೆಬಾಗಿ ಸ್ವೀಕರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್‌ ಹೇಳಿದರು.

Written by - Krishna N K | Last Updated : Nov 23, 2024, 04:03 PM IST
    • ಉಪ ಚುನಾವಣೆಯಲ್ಲಿ ಬಹುತೇಕ ಜನರು ಆಡಳಿತ ಪಕ್ಷದ ಪರ ಇರುತ್ತಾರೆ‌.
    • ಸಚಿವರು, ಶಾಸಕರು, ಸಂಪನ್ಮೂಲದ ಬಳಕೆ ಹೇರಳವಾಗಿ ಬಳಕೆಯಾಗುತ್ತದೆ.
    • ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ ಎಂದ ಮಾಜಿ ಸಚಿವ ಸಿ.ಸಿ. ಪಾಟೀಲ್
ಚುನಾವಣೆಯಲ್ಲಿ ಸರ್ಕಾರದ ಸಂಪನ್ಮೂಲ ಹೇರಳವಾಗಿ ಬಳಕೆಯಾಗಿದೆ : ಸಿ.ಸಿ. ಪಾಟೀಲ್ title=

ಹುಬ್ಬಳ್ಳಿ: ಉಪ ಚುನಾವಣೆಯಲ್ಲಿ ಬಹುತೇಕ ಜನರು ಆಡಳಿತ ಪಕ್ಷದ ಪರ ಇರುತ್ತಾರೆ‌. ಸಚಿವರು, ಶಾಸಕರು, ಸಂಪನ್ಮೂಲದ ಬಳಕೆ ಹೇರಳವಾಗಿ ಬಳಕೆಯಾಗುತ್ತದೆ. ಆದರೂ, ನಾವು ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು,  ಈ ಚುನಾವಣೆಯಲ್ಲಿ ನಾನು ಸುಮಾರು ಐದಿನೈದು ದಿನ ಕೆಲಸ ಮಾಡಿದ್ದೇನೆ. ಬಸವರಾಜ ಬೊಮ್ಮಾಯಿಯವರು ಈ ಕ್ಷೇತ್ರದಲ್ಲಿ ಐದು ಲಕ್ಷ ರೂಪಾಯಿಯ ಸುಮಾರು 15000 ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ‌. ಒಂದು ಮನೆಗೆ ನಾಲ್ಕು ಮತ ಬಂದರೂ ಸುಮಾರು ಆರವತ್ತು ಸಾವಿರ ಮತಗಳು ಬರಬೇಕಿತ್ತು. ಬಡವರಿಗೆ ಗೋವುಗಳನ್ನು ಕೊಡಿಸಿದ್ದಾರೆ. ಆಸ್ಪತ್ರೆ ‌ಕಟ್ಟಿಸಿದ್ದಾರೆ. ಅಭಿವೃದ್ಧಿ ಅಂದರೆ ಶಿಗ್ಗಾವಿ ಕ್ಷೇತ್ರಕ್ಕೆ ಹೋಗಿ ನೋಡಬೇಕು. ಈಗ ಯಾಸಿರ್ ಖಾನ್ ಪಠಾಣ ಆಯ್ಕೆಯಾಗಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರು ಮಾಡಲು ಕ್ಷೇತ್ರದಲ್ಲಿ ಏನೂ ಉಳಿದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ರಾಹುಲ್ ಗಾಂಧಿ ಫೇಲ್ಡ್ ಲೀಡರ್ ಅನ್ನೋದು ಮತ್ತೆ ಸಾಬೀತು : ಪ್ರಲ್ಹಾದ ಜೋಶಿ  

ಕ್ಷೇತ್ರದ ಹಣೆಬರಹವೂ ಇರುತ್ತದೆ. ಇವರಿಂದ ಕ್ಷೇತ್ರದ ಪುಣ್ಯ ಹೆಚ್ಚಾಗಿದೆ ಎಂದು ಭಾವಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರಬಹುದು. ಜನರ ತೀರ್ಪನ್ನು ನಾವು ತಲೆಬಾಗಿ ಸ್ವೀಕರಿಸಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನತೆಯೇ ಜನಾರ್ದನ ಎಂದು ನಂಬಿದ್ದೇವೆ. ನಾವು ಹಿಂದೆ 17 ಜನ ಶಾಸಕರನ್ನು ರಾಜಿನಾಮೆ ಕೊಡಿಸಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವು, ಶ್ರೀಮಂತ ಪಾಟೀಲ್ ಅವರ ಕ್ಷೇತ್ರದ ಉಸ್ತುವಾರಿ ಹೊತ್ತು ನಾನು ಗೆಲ್ಲಿಸಿಕೊಂಡು ಬಂದಿದ್ದೆ. 

ಈಗ ಶಿಗ್ಗಾವಿ ಸವಣೂರಿನಲ್ಲಿ ಕಾಂಗ್ರೆಸ್ ನವರು ಗೆಲುವು ಸಾಧಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿ ಕ್ಷೇತ್ರದಲ್ಲಿ 45 ಕಿಲೋ‌ಮೀಟರ್ ದೂರದಿಂದ ನದಿ ನೀರು ತಿರುಗಿಸಿ ತುಂತುರು ಹನಿ ನೀರಾವರಿ ಮಾಡಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿದ್ದ ಶಿಗ್ಗಾವಿ ಅಭಿವೃದ್ಧಿ ಹೊಂದಿದ ತಾಲೂಕುಗಳ ಪಟ್ಟಿಯಲ್ಲಿ ಸೇರುವಂತೆ ಬೊಮ್ಮಾಯಿಯವರು ಕೆಲಸ ಮಾಡಿದ್ದರು. ಆದರೂ, ಜನರ ತೀರ್ಪಿಗೆ ತಲೆ ಬಾಗುತ್ತೇವೆ ಎಂದರು. 

ಇದನ್ನೂ ಓದಿ:ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ

ಯಾವುದೇ ಚುನಾವಣೆಯನ್ನು ಯಾವುದೇ ರಾಜಕಾರಣಿ ನಿರ್ಲಕ್ಷ್ಯ ಮಾಡುವುದಿಲ್ಲ. ಕೆಲವು ಸಾರಿ ನಾವು ತಪ್ಪು ಮಾಡದಿದ್ದರೂ ಸೋಲುತ್ತೇವೆ. ಕೆಲವರು ತಪ್ಪು ಮಾಡಿದರೂ ಗೆಲ್ಲುತ್ತಾರೆ. ತೀರ್ಪನ್ನು ಒಪ್ಪಿಕೊಳ್ಳಬೇಕು. ಒಪ್ಪಿಕೊಂಡಿದ್ದೇವೆ. ಇನ್ನು ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ ದೊಡ್ಡ ಪ್ರಮಾಣದ ಜನ ಬೆಂಬಲ ದೊರೆತಿದೆ. ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ  ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News