ಈ ರಾಜ್ಯದಲ್ಲಿ ಮೇ 7ರವರೆಗೆ ಲಾಕ್‌ಡೌನ್ ವಿಸ್ತರಣೆ, ಪೊಲೀಸರಿಗೆ ಬಂಪರ್ ಕೊಡುಗೆ

ದೇಶದಲ್ಲಿ ಕರೋನಾವೈರಸ್ ಪೀಡಿತರ ಸಂಖ್ಯೆ 16,116ಕ್ಕೆ ಏರಿದೆ.

Last Updated : Apr 20, 2020, 08:30 AM IST
ಈ ರಾಜ್ಯದಲ್ಲಿ ಮೇ 7ರವರೆಗೆ ಲಾಕ್‌ಡೌನ್ ವಿಸ್ತರಣೆ, ಪೊಲೀಸರಿಗೆ ಬಂಪರ್ ಕೊಡುಗೆ title=

ಹೈದರಾಬಾದ್: ಕರೋನಾವೈರಸ್ COVID-19  ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮೇ 3ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಏತನ್ಮಧ್ಯೆ ತೆಲಂಗಾಣ (Telangana) ಸರ್ಕಾರ ಲಾಕ್‌ಡೌನ್ ಅನ್ನು ಮೇ 7ರವರೆಗೆ ವಿಸ್ತರಿಸಿದೆ. ರಾಜ್ಯದಲ್ಲಿ ಕರೋನಾ ವೈರಸ್‌ನಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲು ಮೇ 5 ರಂದು ಕ್ಯಾಬಿನೆಟ್ ಸಭೆ ನಡೆಯಲಿದೆ ಎಂದು ಹೇಳಲಾಗಿದೆ. 

ದೇಶದಲ್ಲಿ ಕೊರೊನಾವೈರಸ್ (Coronavirus)  ಪೀಡಿತರ ಸಂಖ್ಯೆ 16,116ಕ್ಕೆ ಏರಿದೆ. ಈವರೆಗೆ 519 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಮತ್ತು 2302 ರೋಗಿಗಳು ಗುಣಮುಖರಾಗಿದ್ದಾರೆ.  ತೆಲಂಗಾಣದಲ್ಲಿ ಕರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 858 ಆಗಿದ್ದು ಈ ಪೈಕಿ 186 ರೋಗಿಗಳು ಗುಣಮುಖರಾಗಿದ್ದರೆ, 21 ಜನರು ಸಾವನ್ನಪ್ಪಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K Chandrashekhar Rao) ಅವರು ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಲಸೆ ಕಾರ್ಮಿಕರಿಗೆ ಪಡಿತರ ಜೊತೆಗೆ ಸರ್ಕಾರವು 1500 ರೂ. ಘೋಷಿಸಿದೆ. ಇದೇ ವೇಳೆ ಕರೋನಾ ವಿರುದ್ಧದ ಯುದ್ಧದಲ್ಲಿ ತಮ್ಮ ಜೀವನವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ವೇತನವನ್ನು 10% ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ದೆಹಲಿಯ ಲಾಕ್‌ಡೌನ್‌ನಲ್ಲಿ ಸಡಿಲತೆ ಇಲ್ಲ:
ಕೇಂದ್ರ ಸರ್ಕಾರದ ಮಾರ್ಗದರ್ಶನದ ಪ್ರಕಾರ ಏಪ್ರಿಲ್ 20ರಿಂದ ಕರೋನಾ ಕಡಿಮೆ ಅಥವಾ ಯಾವುದೇ ಪರಿಣಾಮ ಬೀರದ ಪ್ರದೇಶಗಳಲ್ಲಿ ಲಾಕ್‌ಡೌನ್‌(Lockdown)ನ್ನು ಸಡಿಲಿಸಬಹುದು.  ಆದರೆ ಇತ್ತೀಚಿನ ಕರೋನಾ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿ ನಿವಾಸಿಗಳಿಗೆ ಲಾಕ್‌ಡೌನ್‌ನಲ್ಲಿ ಸಡಿಲತೆ ನೀಡದಿರಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದರು.  ದೇಶದ ಜನಸಂಖ್ಯೆಯ ಒಟ್ಟು 2 ಪ್ರತಿಶತದಷ್ಟು ಜನರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ದೇಶದ ಒಟ್ಟು ಕರೋನಾ ಪ್ರಕರಣಗಳಲ್ಲಿ 12 ಪ್ರತಿಶತ ದೆಹಲಿಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ 11 ಜಿಲ್ಲೆಗಳನ್ನು ಹಾಟ್‌ಸ್ಪಾಟ್‌ (Hotspot)ಗಳಾಗಿ ಘೋಷಿಸಲಾಗಿದೆ.
 

Trending News