ನವದೆಹಲಿ: ಕರೋನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಣಕಾಸಿನ ತೊಂದರೆ ನೀಗಿಸಲು ಪಿಎಫ್ (PF) ಖಾತೆಯಿಂದ ಹಣ ಹಿಂಪಡೆಯಲು ಸರ್ಕಾರ ಅನುಮತಿ ನೀಡಿದೆ. ನಿಮ್ಮ ಸಂಬಳವು 15000 ರೂಪಾಯಿಗಳಿಗಿಂತ ಹೆಚ್ಚಿದ್ದು ಕೊರೊನಾವೈರಸ್ ಲಾಕ್ಡೌನ್ (LOCKDOWN)ನಲ್ಲಿ ನಿಮಗೆ ಹಣದ ಬಿಕ್ಕಟ್ಟು ಎದುರಾಗಿದ್ದರೆ ನೀವು ನಿಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.
ಪಿಎಫ್ ಖಾತೆದಾರರು ಎಷ್ಟು ಹಣವನ್ನು ಹಿಂತೆಗೆದುಕೊಳ್ಳಬಹುದು?
ಇಪಿಎಫ್ ಯೋಜನೆ 1952ರಲ್ಲಿ, ಯುಎಎನ್ (UAN) ಹೊಂದಿರುವ ಯಾವುದೇ ಸದಸ್ಯರು ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಆದರೆ ನೌಕರರ ಉದ್ಯೋಗಾದಾತರು ತಮ್ಮ ಸಂಸ್ಥೆಯನ್ನು ಇಪಿಎಫ್ ಮತ್ತು ಎಂಪಿ ಕಾಯ್ದೆ 1952ರ ಅಡಿಯಲ್ಲಿ ನೋಂದಾಯಿಸಬೇಕು. ಈ ಯೋಜನೆಯಡಿ ಅಗತ್ಯವಿರುವವರು ಪಿಎಫ್ ಖಾತೆದಾರರಿಗೆ ತಕ್ಷಣದ ಹಣಕಾಸಿನ ನೆರವು ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಉದ್ಯೋಗದಾತನು ಒಟ್ಟು ಠೇವಣಿ ಪಿಎಫ್ನ 75 ಪ್ರತಿಶತದಷ್ಟು ಹಣವನ್ನು ತ್ವರಿತವಾಗಿ ಹಿಂಪಡೆಯಬಹುದು.
ಹಣ ಯಾವಾಗ ಸಿಗುತ್ತದೆ?
ಅರ್ಜಿಯನ್ನು ಕಾರ್ಯಗತಗೊಳಿಸಲು ಪಿಎಫ್ ಸಂಸ್ಥೆ 20 ದಿನಗಳ ಸಮಯವನ್ನು ನಿಗದಿಪಡಿಸಿದೆ. ಆದರೆ ಇಡೀ ವಿಶ್ವವೇ ಕೊರೋನಾ ವೈರಸ್ (Coronavirus) ಕೋವಿಡ್ -19 (COVID-19) ಮಾಹಾಮಾರಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಕ್ಲೈಂ ಕೇವಲ 72 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆಯಲ್ಲಿ ಫಲಾನುಭವಿಗಳಾಗಲು ಕೆಲವು ಷರತ್ತುಗಳಿವೆ, ಇದರಲ್ಲಿ ಯುಎಎನ್ ಮತ್ತು ಕೆವೈಸಿ ಸಕ್ರಿಯಗೊಳಿಸುವಿಕೆ ಕಡ್ಡಾಯವಾಗಿದೆ.
ಈ ರೀತಿಯ ಪಿಎಫ್ ಹಣವನ್ನು ವಿತ್ ಡ್ರಾ ಮಾಡಬಹುದು:
- ಯುಎಎನ್ ಮತ್ತು ಪಾಸ್ವರ್ಡ್ ಸಹಾಯದಿಂದ ಯುಎಎನ್ ಸದಸ್ಯ ಪೋರ್ಟಲ್ಗೆ ಲಾಗ್ ಇನ್ ಆಗಿ.
- ನಂತರ 'ಆನ್ಲೈನ್ ಸೇವೆಗಳು' ಟ್ಯಾಬ್ ಕ್ಲಿಕ್ ಮಾಡಿ ಮತ್ತು ಡ್ರಾಪ್ ಡೌನ್ ಮೆನುವಿನಿಂದ 'ಕ್ಲೈಮ್ (ಫಾರ್ಮ್ -31, 19 ಮತ್ತು 10 ಸಿ)' ಆಯ್ಕೆಮಾಡಿ.
- ಸದಸ್ಯರ ಮಾಹಿತಿ ಪರದೆಯ ಮೇಲೆ ಕಾಣಿಸುತ್ತದೆ. ನಿಮ್ಮ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆಗಳನ್ನು ನಮೂದಿಸಿ ಮತ್ತು 'ಪರಿಶೀಲಿಸು' ಕ್ಲಿಕ್ ಮಾಡಿ
- ಬಳಿಕ ಹೌದು ಕ್ಲಿಕ್ ಮಾಡಿ
- ಈಗ 'ಆನ್ಲೈನ್ ಕ್ಲೈಮ್ಗಾಗಿ ಮುಂದುವರಿಯಿರಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಹಣವನ್ನು ಆನ್ಲೈನ್ನಲ್ಲಿ ಹಿಂಪಡೆಯಲು 'ಪಿಎಫ್ ಅಡ್ವಾನ್ಸ್ (ಫಾರ್ಮ್ 31)' ಆಯ್ಕೆಮಾಡಿ
- ಇಲ್ಲಿಂದ ಫಾರ್ಮ್ನ ಹೊಸ ಭಾಗವು ತೆರೆಯುತ್ತದೆ, ಅಲ್ಲಿ ನೀವು ಹಣವನ್ನು ಏಕೆ ಹಿಂಪಡೆಯಲಾಗುತ್ತಿದೆ, ಎಷ್ಟು ಮೊತ್ತವನ್ನು ಹಿಂತೆಗೆದುಕೊಳ್ಳಬೇಕು ಮತ್ತು ನೌಕರರ ವಿಳಾಸದ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಪ್ರಮಾಣೀಕರಣವನ್ನು ಟಿಕ್ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ.
ಪಿಎಂ ಗರಿಬ್ ಕಲ್ಯಾಣ್ ಯೋಜನೆ:
ಪ್ರಾವಿಡೆಂಟ್ ಫಂಡ್ ಸಂಸ್ಥೆ ಈ ದಿನಗಳಲ್ಲಿ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯನ್ನು ಸಹ ನಡೆಸುತ್ತಿದೆ. ಈ ಯೋಜನೆಯನ್ನು ಪಡೆಯಲು ಕೆಲವು ಷರತ್ತುಗಳಿವೆ. ಈ ಯೋಜನೆಯು ನೌಕರರ ಸಂಖ್ಯೆ 100 ಕ್ಕಿಂತ ಕಡಿಮೆ ಮತ್ತು ಒಟ್ಟು ನೌಕರರ ವೇತನದಲ್ಲಿ 90 ಪ್ರತಿಶತ 15,000 ರೂ.ಗಿಂತ ಕಡಿಮೆ ಇರುವ ಸಂಸ್ಥೆಗಳನ್ನು ಒಳಗೊಂಡಿದೆ.
ಯಾರಿಗೆ ಲಾಭ ?
ಸೆಪ್ಟೆಂಬರ್ 2019 ರಿಂದ ಫೆಬ್ರವರಿ 2020ರವರೆಗೆ ಯಾವುದೇ ಸಮಯದಲ್ಲಿ ಪಿಎಫ್ ಕೊಡುಗೆ ಬಂದ ನೌಕರರಿಗೆ ಇದರ ಪ್ರಯೋಜನವನ್ನು ನೀಡಲಾಗುವುದು. ಅಲ್ಲದೆ ಅವರು ಪ್ರಧಾನ್ ಮಂತ್ರಿ ರೋಜಗಾರ್ ಪ್ರೊತ್ಸಹನ್ ಯೋಜನೆಯ ಫಲಾನುಭವಿಗಳಾಗಿರಬಾರದು. ಈ ಯೋಜನೆಯ ಮುಖ್ಯ ಪ್ರಯೋಜನವೆಂದರೆ ಉದ್ಯೋಗದಾತ ಮತ್ತು ಉದ್ಯೋಗಿಗಳ ಪಾಲು ಎರಡರ ಪಿಎಫ್ ಕೊಡುಗೆಯನ್ನು ಭಾರತ ಸರ್ಕಾರವು 3 ತಿಂಗಳವರೆಗೆ ಭರಿಸಲಿದೆ.