ಪ್ರೇಮಕಥೆ! 22 ವರ್ಷದ ಅಂಜಲಿ 17 ವರ್ಷದ ಸಚಿನ್ ತೆಂಡೂಲ್ಕರ್‌ಗೆ ಮೊದಲ ಬಾರಿಗೆ ಕರೆ ಮಾಡಿದಾಗ...

ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ 'ಗಾಡ್ ಆಫ್ ಕ್ರಿಕೆಟ್' ಎಂದೇ ಖ್ಯಾತಿ ಪಡೆದಿದ್ದಾರೆ. 

Last Updated : Apr 11, 2020, 12:05 PM IST
ಪ್ರೇಮಕಥೆ! 22 ವರ್ಷದ ಅಂಜಲಿ 17 ವರ್ಷದ ಸಚಿನ್ ತೆಂಡೂಲ್ಕರ್‌ಗೆ ಮೊದಲ ಬಾರಿಗೆ ಕರೆ ಮಾಡಿದಾಗ... title=

ನವದೆಹಲಿ: ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ (Sachin Tendulkar) 'ಗಾಡ್ ಆಫ್ ಕ್ರಿಕೆಟ್' ಎಂದೇ ಖ್ಯಾತಿ ಪಡೆದಿದ್ದಾರೆ. ಸಚಿನ್ ಅವರ ಕ್ರಿಕೆಟ್ (Cricket) ಸಾಧನೆಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಸಚಿನ್ ಅವರ ಸಂಪೂರ್ಣ ವೃತ್ತಿಜೀವನದಲ್ಲಿ ಸಾಕಷ್ಟು ಕೊಡುಗೆ ನೀಡಿದ ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ (Anjali Tendulkar) ಅವರ ಅರಿತವರು ಬಹಳ ಕಡಿಮೆ. ಈ ಇಬ್ಬರ ಪ್ರೇಮಕಥೆಯು ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಅಮ್ಚಿ ಮುಂಬಯಿಯ ಸುರುಳಿಯಾಕಾರದ ಕೂದಲಿನ ಹುಡುಗ ಸಚಿನ್ ಮತ್ತು ಸುಂದರ ವೈದ್ಯೆ ಅಂಜಲಿ ಅವರ ಪ್ರೇಮಕಥೆಯನ್ನು ಇಂದು ನಾವು ನಿಮಗೆ ಪರಿಚಯಿಸುತ್ತೇವೆ.

ಶಾರ್ಜಾದಲ್ಲಿ ಶತಕ ಬಾರಿಸಿದಾಗ ಮಾಸ್ಟರ್ ಬ್ಲಾಸ್ಟರ್‌ಗೆ ಎಷ್ಟು ವರ್ಷ

ಮೊದಲ ನೋಟದಲ್ಲೇ ಪ್ರೀತಿ (Love at first sight) ಎಂಬುದು ಸಿನಿಮಾಗಳಲ್ಲಿ ಮಾತ್ರ ಎಂದು ಹೇಳುತ್ತಾರೆ? ಇದು ನಿಜ ಜೀವನದಲ್ಲಿಯೂ ಸಂಭವಿಸುತ್ತದೆ. ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಮೆಹ್ತಾ ಅವರ ಪ್ರೇಮಕಥೆಯೂ ಹೀಗೆಯೇ ಚಲನಚಿತ್ರ ರೀತಿಯಲ್ಲಿ ಪ್ರಾರಂಭವಾಯಿತು. ಅವರ ಭೇಟಿಯ ಈ ಕಥೆ ಸಾಕಷ್ಟು ಆಸಕ್ತಿದಾಯಕವಾಗಿದೆ. ಆ ಸಮಯದಲ್ಲಿ ಅಂಜಲಿ ವೈದ್ಯರಾಗಿದ್ದರು ಮತ್ತು ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ವಾಸ್ತವವಾಗಿ ಇದು 1990 ರ ವಿಷಯವಾಗಿದ್ದು ಇಂಗ್ಲೆಂಡ್‌ಗೆ ಭೇಟಿ ನೀಡಿದ ಬಳಿಕ ಸಚಿನ್ ಭಾರತಕ್ಕೆ ಮರಳಿದ ಸಂದರ್ಭದಲ್ಲಿ ಅಂಜಲಿ ಮೊದಲ ಬಾರಿಗೆ ಸಚಿನ್‌ನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ನೋಡಿದರು. ತಮ್ಮ ತಾಯಿಯನ್ನು ಬರಮಾಡಿಕೊಳ್ಳಲು ಅಂಜಲಿ ಸ್ನೇಹಿತನೊಂದಿಗೆ ಅಲ್ಲಿಗೆ ತಲುಪಿದ್ದಳು. ಸಚಿನ್ ಅವರನ್ನು ನೋಡಿದ ಅಂಜಲಿ ತಕ್ಷಣವೇ ತನನ್ ಸ್ನೇಹಿತನ ಬಳಿ ಸೋ ಕ್ಯೂಟ್ ಎಂದು ಹೇಳಿದಳು, ಆ ಸಮಯದಲ್ಲಿ ಸಚಿನ್ ಕ್ರಿಕೆಟಿಗ ಎಂದು ಅಂಜಲಿಗೆ ತಿಳಿದಿರಲಿಲ್ಲವಾದರೂ ಅವಳು ವಿಮಾನ ನಿಲ್ದಾಣದಲ್ಲಿ ಸಚಿನ್‌ನನ್ನು ಹಿಂಬಾಲಿಸಿ ಅವನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದಳು. ಅದೇ ಸಮಯದಲ್ಲಿ, ಸಚಿನ್ ಸಹ ಅಂಜಲಿಯನ್ನು ನೋಡಿದನು ಆದರೆ ಕಟ್ಟುನಿಟ್ಟಿನ ಭದ್ರತೆಯಿಂದಾಗಿ ಅವನಿಗೆ ಅಂಜಲಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ತಮಾಷೆಯೆಂದರೆ ಸಚಿನ್ ಅವರನ್ನು ಭೇಟಿಯಾಗುವ ಪ್ರಕ್ರಿಯೆಯಲ್ಲಿ ಅಂಜಲಿ ತನ್ನ ತಾಯಿಯನ್ನು ಸ್ವಾಗತಿಸುವುದನ್ನೂ ಮರೆತಿದ್ದರಂತೆ...

ಐಪಿಎಲ್‌ನಲ್ಲಿ ಸಚಿನ್ ಅದ್ಭುತ ಸಾಧನೆ ನಿಮಗೂ ನೆನಪಿದೆಯೇ!

ಸಚಿನ್ ಭಾರತೀಯ ಕ್ರಿಕೆಟ್ ತಂಡದ ಕಿರಿಯ ಕ್ರಿಕೆಟಿಗ ಇತ್ತೀಚೆಗೆ ಅವರು ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಶತಕ ಬಾರಿಸಿದ್ದಾರೆ  ಎಂದು ಅಂಜಲಿಯ ಸ್ನೇಹಿತ ಹೇಳಿದರಂತೆ. ಆದರೆ ಅಂಜಲಿಗೆ ಕ್ರಿಕೆಟ್ ಬಗ್ಗೆ ಹೆಚ್ಚು ತಿಳಿದಿಲ್ಲವಾದ್ದರಿಂದ ಈ ಎಲ್ಲ ಸಂಗತಿಗಳು ಯಾವುದೇ ವ್ಯತ್ಯಾಸವನ್ನುಂಟುಮಾಡಲಿಲ್ಲ. ಆದರೆ ಸಚಿನ್ ಜೊತೆ ಮಾತನಾಡಲೇ ಬೇಕೆಂಬ ಆಕೆಯ ದೃಢ ನಿಶ್ಚಯ ಅಂಜಲಿಯನ್ನು ಸಚಿನ್‌ ದೂರವಾಣಿ ಸಂಖ್ಯೆ ಹುಡುಕಲು ಪ್ರೇರೇಪಿಸಿತು. ಕಡೆಗೂ ದೂರವಾಣಿ ಸಂಖ್ಯೆ ಪಡೆದ ಅಂಜಲಿ ಸಚಿನ್‌ಗೆ ಕರೆ ಮಾಡಿ "ನನ್ನ ಹೆಸರು ಅಂಜಲಿ ಮತ್ತು ನೀವು ಬಹುಶಃ ನನಗೆ ತಿಳಿದಿಲ್ಲ. ನಿನ್ನೆ ನಾನು ನಿಮ್ಮನ್ನು ಮೊದಲ ಬಾರಿಗೆ ವಿಮಾನ ನಿಲ್ದಾಣದಲ್ಲಿ ನೋಡಿದೆ ಎಂದರು. ಇದನ್ನು ಕೇಳಿದ ಸಚಿನ್ ಪ್ರತಿಕ್ರಿಯೆಯಾಗಿ ಹೌದು - ನನಗೆ ನೆನಪಿದೆ ಎಂದರಂತೆ. ಇದನ್ನು ಕೇಳಿದ ಅಂಜಲಿಯವರಿಗೆ ಕುತೂಹಲ ತಡೆಯಲಾಗದೆ  ನಾನು ನಿನ್ನೆ ಏನು ಧರಿಸಿದ್ದೇ ಎಂದು ಹೇಳಿ? ಎಂದು ಕೇಳಿದರಂತೆ. ಇದಕ್ಕೆ ಪ್ರತಿಕ್ರಿಯೆಯಾಗಿ ಸಚಿನ್ ಆರೆಂಜ್ ಕಲರ್ ಟಿ-ಶರ್ಟ್ ಎಂದು ಹೇಳಿದರು ". ಇಲ್ಲಿಂದ ಅವರಿಬ್ಬರ ಸ್ನೇಹ ಪ್ರಾರಂಭವಾಯಿತು.

ಸಚಿನ್ 'ಕೃಷ್ಣ', ನಾನು 'ಸುದಾಮ' ಎಂದು ಟ್ರೋಲ್ ಆದ ಮೊಹಮ್ಮದ್ ಕೈಫ್‌

ಬಳಿಕ ಮುಂದೊಂದು ದಿನ ಸಚಿನ್ ಮೊದಲ ಬಾರಿಗೆ ಅಂಜಲಿಯನ್ನು ತನ್ನ ಮನೆಗೆ ಕರೆತಂದರು. ಈ ಕಥೆಯು ಸಹ ಬಹಳ ಆಸಕ್ತಿದಾಯಕವಾಗಿದೆ, ಏಕೆಂದರೆ ಸಚಿನ್ ತುಂಬಾ ನಾಚಿಕೆ ಸ್ವಭಾವದ ವ್ಯಕ್ತಿ ಎಂದು ಕುಟುಂಬಕ್ಕೆ ತಿಳಿದಿತ್ತು. ಆದರೆ ಅಂಜಲಿಯನ್ನು ತನ್ನ ಕುಟುಂಬಕ್ಕೆ ಪರಿಚಯಿಸಿದಾಗ ಅವಳು ಪತ್ರಕರ್ತೆ ಮತ್ತು ನನ್ನನ್ನು ಸಂದರ್ಶನ ಮಾಡಲು ಬಂದಿದ್ದಾಳೆ ಎಂದು ಹೇಳಿದ್ದರು. ಆದರೆ ಈ ಸಂಬಂಧ ಬೇರೆ ವಿಷಯ ಎಂಬುದನ್ನು ಕುಟುಂಬ ಸದಸ್ಯರು ಅರ್ಥಮಾಡಿಕೊಂಡಿದ್ದಾರೆ. ಇದರ ಜೊತೆಗೆ, ಸಚಿನ್‌ಗೆ ಅಂಜಲಿ ತುಂಬಾ ವಿಶೇಷ ಎಂದು ಅವರು ಅರ್ಥಮಾಡಿಕೊಂಡರು.

ಇಬ್ಬರೂ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು ಆದರೆ ಆ ಸಮಯದಲ್ಲಿ ಸಾಮಾಜಿಕ ಮಾಧ್ಯಮವು ಪ್ರಭಾವ ಬೀರಲಿಲ್ಲ, ಆದ್ದರಿಂದ ಅವರ ಪ್ರಣಯದ ಸುದ್ದಿ ಯಾರಿಗೂ ಸಿಗಲಿಲ್ಲ. ಸಚಿನ್ ಮತ್ತು ಅಂಜಲಿ ಅವರು 1994 ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಾಗ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದರು. ನಿಶ್ಚಿತಾರ್ಥದ ಸ್ವಲ್ಪ ಸಮಯದ ನಂತರ ಇಬ್ಬರೂ ಮುಂದಿನ ವರ್ಷದಲ್ಲಿ ಅಂದರೆ 1995 ರಲ್ಲಿ ವಿವಾಹವಾದರು ಮತ್ತು ಇಂದು 25 ವರ್ಷಗಳ ನಂತರವೂ ಈ ಸುಂದರ ದಂಪತಿಗಳು ಆದರ್ಶ ದಾಂಪತ್ಯ ಜೀವನ ಸಾಗಿಸುತ್ತಿದ್ದು ಯುವ ಪೀಳಿಗೆಗೆ ಉತ್ತಮ ಉದಾಹರಣೆ ಆಗಿದ್ದಾರೆ.
 

Trending News