ಕರ್ನಾಟಕ-ಗೋವಾ ಜಲಸಂಪನ್ಮೂಲ ಸಚಿವರ ಜಗ್ಗಾಟ

ಕರ್ನಾಟಕ ಹಣ ನೀಡಿ ಸಾಕ್ಷ್ಯ ಹೇಳಿಸಿದೆ ಎಂಬ ಗೋವಾ ಜಲಸಂಪನ್ಮೂಲ ಸಚಿವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಎಂ.ಬಿ. ಪಾಟೀಲ್.

Last Updated : Jan 16, 2018, 03:32 PM IST
ಕರ್ನಾಟಕ-ಗೋವಾ ಜಲಸಂಪನ್ಮೂಲ ಸಚಿವರ ಜಗ್ಗಾಟ title=

ಬೆಂಗಳೂರು: ಮಹಾದಾಯಿ ನೀರು ಹಂಚಿಕೆ ಸಂಬಂಧಿಸಿದಂತೆ ಕರ್ನಾಟಕ ಇದುವರೆಗೂ ಸುಳ್ಳು ಹೇಳಿಕೊಂಡೆ ಬಂದಿದೆ. 'ನೀರು ಹಂಚಿಕೆ ವಿವಾದದಲ್ಲಿ ಸಾಕ್ಷ್ಯ ಹೇಳಲು ಕರ್ನಾಟಕದವರು ಸಾಕ್ಷಿಗಳಿಗೆ ಹಣ ಪಾವತಿಸಿದ್ದಾರೆ' ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಟ್ವೀಟ್ ಮಾಡುವ ಮೂಲಕ ಆರೋಪಿಸಿದ್ದಾರೆ.

ಗೋವಾ ಜಲಸಂಪನ್ಮೂಲ ಸಚಿವರ ಹೇಳಿಕೆಗೆ ಟಾಂಗ್ ನೀಡಿರುವ ಕರ್ನಾಟಕ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ವಿನೋದ್ ಪಾಲ್ಯೇಕರ್ ಅವರಿಗೆ ತಲೆಕೆಟ್ಟಿರಬೇಕು. ಗೋವಾ ಮುಖ್ಯಮಂತ್ರಿ ಮಹಾನಾಟಕವಾಡಿದರು, ಅದರಿಂದ ರಾಜಕೀಯವಾಗಿ ತೀವ್ರ ಹಿನ್ನಡೆಯಾಗಿದೆ. ಅದನ್ನು ಮರೆಮಾಚಲು ಈ ರೀತಿಯ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ: ಗೋವಾ ಸಚಿವರ ಹೇಳಿಕೆ ಗರಂ ಆದ ಸಿದ್ದರಾಮಯ್ಯ

ಅಷ್ಟೇ ಅಲ್ಲದೆ, ಟ್ವಿಟ್ಟರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹಚ್ಚಿದ ಬೆಂಕಿಯೇ ಇದಕ್ಕೆಲ್ಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Trending News