Amazon Great Indian Festival Sale: 15 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಬ್ರ್ಯಾಂಡೆಡ್ ಸ್ಮಾರ್ಟ್‌ಫೋನ್‌ಗಳು ಲಭ್ಯ

Amazon Great Indian Festival Sale: ನೀವು ಕಡಿಮೆ ಬಜೆಟ್ನಲ್ಲಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿದೆ ಗುಡ್ ನ್ಯೂಸ್. 

Written by - Yashaswini V | Last Updated : Sep 26, 2024, 11:21 AM IST
  • ಇಂದಿನಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್
  • ನಿನ್ನೆ ಮಧ್ಯರಾತ್ರಿ 12 ರಿಂದ ಪ್ರೈಮ್ ಸದಸ್ಯರಿಗೆ ಈ ಸೇಲ್ ಆರಂಭವಾಗಿದೆ
  • ಈ ಸೇಲ್ನಲ್ಲಿ ಬ್ರ್ಯಾಂಡೆಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗುತ್ತಿದೆ ಭರ್ಜರಿ ರಿಯಾಯಿತಿ
Amazon Great Indian Festival Sale: 15 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಬ್ರ್ಯಾಂಡೆಡ್ ಸ್ಮಾರ್ಟ್‌ಫೋನ್‌ಗಳು  ಲಭ್ಯ  title=

Amazon Great Indian Festival Sale: ನೀವು ಅಗ್ಗದ ದರದಲ್ಲಿ ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ನೀಡುತ್ತಿದೆ ಬಂಪರ್ ಅವಕಾಶ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಈಗಾಗಲೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆರಂಭವಾಗಿದ್ದು ಈ ಸೇಲ್ನಲ್ಲಿ 15 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಅದ್ಭುತ ಸ್ಮಾರ್ಟ್‌ಫೋನ್‌ ಖರೀದಿಸಬಹುದಾಗಿದೆ. 

ಬಂಪರ್ ಡಿಸ್ಕೌಂಟ್: 
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಆಯ್ದ ಬ್ಯಾಂಕ್‌ಗಳ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳಿಗೆ ರಿಯಾಯಿತಿ ನೀಡಲಾಗುವುದು. ಇದಲ್ಲದೆ, ವಿನಿಮಯ ಬೋನಸ್, ನೋ ಕಾಸ್ಟ್ EMI ನಲ್ಲಿ ಫೋನ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಈ ಸೇಲ್ ನಲ್ಲಿ ಯಾವ ಸ್ಮಾರ್ಟ್‌ಫೋನ್‌ ಎಷ್ಟು ರಿಯಾಯಿತಿಯಲ್ಲಿ ಸಿಗಲಿದೆ ಎಂದು ನೋಡುವುದಾದರೆ... 

iQOO Z9x 5G: 
120Hz ರಿಫ್ರೆಶ್ ದರದೊಂದಿಗೆ ಡಿಸ್‌ಪ್ಲೇ ಹೊಂದಿರುವ iQOO Z9x 5G ಸ್ಮಾರ್ಟ್‌ಫೋನ್‌ 4nm Snapdragon 6 Gen 1 ಪ್ರೊಸೆಸರ್ ಮತ್ತು 6000mAh ಬ್ಯಾಟರಿಯೊಂದಿಗೆ ಬರುತ್ತದೆ. ಆಂಡ್ರಾಯ್ಡ್ 14 ಆಧಾರಿತ Funtouch OS 14 ನಲ್ಲಿ ಕಾರ್ಯನಿರ್ವಹಿಸುವಾಯಿಯಿ ಸ್ಮಾರ್ಟ್‌ಫೋನ್‌ IP64 ರೇಟಿಂಗ್ ಅನ್ನು ಪಡೆಯುತ್ತದೆ. ಇದರಲ್ಲಿ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳನ್ನು ನೀಡಲಾಗಿದೆ. ಇದರ ಬೆಲೆ 12,998 ರೂ.ನಿಂದ ಪ್ರಾರಂಭವಾಗುತ್ತದೆ. ಅಮೆಜಾನ್ ಮಾರಾಟದಲ್ಲಿ ಈ ಫೋನ್ ಅನ್ನು 10,749 ರೂ.ಗಳಿಗೆ ಖರೀದಿಸಬಹುದು. 

ಇದನ್ನೂ ಓದಿ- ಬಿ‌ಎಸ್‌ಎನ್‌ಎಲ್ ಹೊಸ ಪ್ಲಾನ್: ಸಿಗುತ್ತೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ, ಅನ್ಲಿಮಿಟೆಡ್ ಕಾಲ್ ಜೊತೆ ಇಷ್ಟೆಲ್ಲಾ ಲಾಭ! 

Realme 70x 5G: 
ರಿಯಲ್ ಮೀ ಕಂಪನಿಯ Realme 70x 5G ಸ್ಮಾರ್ಟ್‌ಫೋನ್‌ 6GB RAM ಜೊತೆಗೆ 128GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. 45W SUPERVOOC ಚಾರ್ಜಿಂಗ್ ಬೆಂಬಲದೊಂದಿಗೆ ಬರುವ ಈ ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ದರದೊಂದಿಗೆ ಡಿಸ್‌ಪ್ಲೇಯನ್ನು ಹೊಂದಿದೆ. ಫೋನ್ MediaTek Dimensity 6100+ ಪ್ರೊಸೆಸರ್ ಹೊಂದಿದೆ.   IP54 ರೇಟಿಂಗ್‌ನೊಂದಿಗೆ ಬರುವ ಈ ಸ್ಮಾರ್ಟ್‌ಫೋನ್‌ನ ಬೆಲೆ 13,498 ರೂ.ನಿಂದ ಪ್ರಾರಂಭವಾಗುತ್ತದೆ. ಆದರೆ, ಅಮೆಜಾನ್ ಸೇಲ್ನಲ್ಲಿ ಇದನ್ನು 11,249 ರೂ.ಗೆ ನಿಮ್ಮದಾಗಿಸಬಹುದು. 

ಇದನ್ನೂ ಓದಿ- ನಿಮ್ಮ ಮೊಬೈಲ್ ನಲ್ಲಿ ಈ ಎರಡು 2 App ಇದ್ದರೆ ತಕ್ಷಣ ಡಿಲೀಟ್ ಮಾಡಿ ! ಇಲ್ಲವಾದರೆ ಖಾತೆಗೆ ಬೀಳುವುದು ಕನ್ನ 

Samsung Galaxy M35 5G: 
ನೀವು ಸ್ಯಾಮ್ಸಂಗ್ ಕಂಪನಿಯ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ 8GB RAM ಜೊತೆಗೆ 256GB ಸಂಗ್ರಹವನ್ನು ಹೊಂದಿರುವ Samsung Galaxy M35 5G ಫೋನ್ ನಲ್ಲಿ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ. 6.6 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಫೋನ್‌ನಲ್ಲಿ ಹ್ಯಾಂಡ್ಸೆಟ್ Exynos 1380 ಪ್ರೊಸೆಸರ್,  50MP ಮುಖ್ಯ ಕ್ಯಾಮೆರಾ ಮತ್ತು 13MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 6000mAh ಬ್ಯಾಟರಿ ಸಾಮರ್ಥ್ಯದ ಈ ಫೋನ್ 25W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಫೋನ್‌ನ ಬೆಲೆ 19,999 ರೂ.ನಿಂದ ಪ್ರಾರಂಭವಾಗುತ್ತದೆ. ಆದಾಗ್ಯೂ, ಅಮೆಜಾನ್ ಸೇಲ್ನಲ್ಲಿ ಈ ಫೋನ್ ಅನ್ನು 13,749 ಕ್ಕೆ ಖರೀದಿಸಲು ಅವಕಾಶವಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News