ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೌವ್ ಮತ್ತು ಫ್ರಿಜ್ ಮಧ್ಯೆ ಇಷ್ಟು ಅಂತರ ಇರಲೇಬೇಕು! ಒಂದೇ ಒಂದು ತಪ್ಪು ಎಲ್ಲವನ್ನೂ ನಾಶ ಮಾಡಿಬಿಡಬಹುದು !

ಈಗ ಬಹುತೇಕ ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇರುತ್ತದೆ.ಕೆಲವು ಮನೆಗಳಲ್ಲಿ  ಬಹಳ ವರ್ಷಗಳಿಂದ ಫ್ರಿಜ್ ಬಳಸಲಾಗುತ್ತಿದೆ. ಆದರೆ ಫ್ರಿಡ್ಜ್ ಅನ್ನು ಅಡುಗೆಮನೆಯಲ್ಲಿ ಇಟ್ಟರೆ  ಗ್ಯಾಸ್ ಸ್ಟೌವ್ ನಿಂದ ಎಷ್ಟು ದೂರದಲ್ಲಿ ಇಡಬೇಕು ಎಂದು ತಿಳಿಯದವರು ಅನೇಕ ಮಂದಿ ಇದ್ದಾರೆ.   

Written by - Ranjitha R K | Last Updated : Aug 22, 2024, 10:40 AM IST
  • ಕಾಲಕ್ಕೆ ತಕ್ಕಂತೆ ನಮ್ಮ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳಾಗಿವೆ
  • ಅಗತ್ಯಕ್ಕೆ ತಕ್ಕಂತೆ ಗೃಹೋಪಯೋಗಿ ವಸ್ತುಗಳೂ ಹೆಚ್ಚಾಗುತ್ತಿವೆ.
  • ರೆಫ್ರಿಜರೇಟರ್ ವಿಷಯಕ್ಕೆ ಬಂದಾಗ,ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿರುತ್ತದೆ.
ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೌವ್ ಮತ್ತು ಫ್ರಿಜ್ ಮಧ್ಯೆ ಇಷ್ಟು ಅಂತರ ಇರಲೇಬೇಕು! ಒಂದೇ ಒಂದು ತಪ್ಪು ಎಲ್ಲವನ್ನೂ ನಾಶ ಮಾಡಿಬಿಡಬಹುದು ! title=

Distance From Fridge To Stove: ಕಾಲಕ್ಕೆ ತಕ್ಕಂತೆ ನಮ್ಮ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳಾಗಿವೆ.ಜನರ ಅಗತ್ಯಗಳೂ ಹೆಚ್ಚಿವೆ.ಅಗತ್ಯಕ್ಕೆ ತಕ್ಕಂತೆ ಗೃಹೋಪಯೋಗಿ ವಸ್ತುಗಳೂ ಹೆಚ್ಚಾಗುತ್ತಿವೆ.ಮನೆಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಗ್ಯಾಜೆಟ್‌ಗಳ ಸಂಖ್ಯೆ ಕೂಡಾ ದಿನೇ  ದಿನೇ ಹೆಚ್ಚಾಗುತ್ತಿವೆ.ಅಗತ್ಯ ಎಂದು ಎಲ್ಲಾ ವಸ್ತುಗಳನ್ನು ಮನೆಯಲ್ಲಿ ತಂದುಹಾಕುವ ನಾವು ಅವುಗಳ ಬಗ್ಗೆ ಕಾಳಜಿ ವಹಿಸುವುದು ಕೂಡಾ ಮುಖ್ಯ.ಈ ವಸ್ತುಗಳನ್ನು  ಸರಿಯಾಗಿ ಬಳಸದಿದ್ದರೆ ಸಮಯಕ್ಕೆ ಮುಂಚೆಯೇ ಹಾಳಾಗುತ್ತದೆ.ನಾವು ಬಳಸುವ ರೆಫ್ರಿಜರೇಟರ್ ವಿಷಯಕ್ಕೆ ಬಂದಾಗ,ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿರುತ್ತದೆ. 

ರೆಫ್ರಿಜರೇಟರ್ ಅನ್ನು ಸ್ಟೌವ್ ಬಳಿ ಇಡಬಹುದೇ? : 
ಅನೇಕ ಜನರು ರೆಫ್ರಿಜರೇಟರ್ ಅನ್ನು ಅಡುಗೆಮನೆಯಲ್ಲಿಯೇ ಇಟ್ಟುಕೊಳ್ಳುತ್ತಾರೆ.ಅಡುಗೆ ಮನೆಯಲ್ಲಿ ಫ್ರಿಜ್ ಇಟ್ಟುಕೊಳ್ಳುವುದು ತಪ್ಪಲ್ಲ.ಆದರೆ, ಫ್ರಿಜ್ ಸುತ್ತ ಮುತ್ತ ಯಾವ  ವಸ್ತುಗಳನ್ನು ಇಟ್ಟುಕೊಂಡಿದ್ದೇವೆ ಎನ್ನುವುದು ಕೂಡಾ ಮುಖ್ಯವಾಗುತ್ತದೆ. ನಾವು ಗ್ಯಾಸ್  ಸ್ಟೌವ್ ಅನ್ನು ಅಡುಗೆ ಮನೆಯಲ್ಲಿಯೇ ಇಟ್ಟುಕೊಳ್ಳಬೇಕು. ಅದು ಬಿಟ್ಟು ಬೇರೆ ಜಾಗಲ್ಲಿ ಸ್ಟೌವ್ ಇಡುವುದು ಸಾಧ್ಯವಾಗದ ಮಾತು. ಸ್ಟೌವ್ ಎಂದ ಮೇಲೆ ಅಲ್ಲಿಂದ ಬಿಸಿ ತಾಪ ಹೊರ ಬರುತ್ತದೆ. ಹೀಗಿರುವಾಗ ರೆಫ್ರಿಜರೇಟರ್ ಅನ್ನು ಸ್ಟೌವ್ ನಿಂದ ಎಷ್ಟು ದೂರದಲ್ಲಿ ಇಡುವುದು ಸೂಕ್ತ?. 

ಇದನ್ನೂ ಓದಿ : ರಿಲಯನ್ಸ್ ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್: ಕೈಗೆಟುಕುವ ಬೆಲೆಯಲ್ಲಿ 2 ರಿಚಾರ್ಜ್ ಪ್ಲಾನ್ ಘೋಷಣೆ
 
ತಣ್ಣಗಾಗಲು ಸಾಧ್ಯವಾಗುವುದಿಲ್ಲ : 
ಫ್ರಿಜ್ ಅನ್ನು ಸ್ಟೌವ್  ಬಳಿ ಇಡುವುದು ಸರಿಯಾದ ಕ್ರಮ ಅಲ್ಲ.ಸ್ಟೌವ್ ನಿಂದ ಬರುವ ಶಾಖವು ರೆಫ್ರಿಜರೇಟರ್‌ನೊಳಗೆ ತಂಪಾಗಿಸುವಿಕೆಯನ್ನು ತಡೆಯುತ್ತದೆ.ರೆಫ್ರಿಜರೇಟರ್ ಕಂಪ್ರೆಸರ್ ಕೂಲಿಂಗ್ ಅನ್ನು ಕಾಪಾಡಲು ಎರಡು ಬಾರಿ ಕೆಲಸ ಮಾಡಬೇಕಾಗುತ್ತದೆ.

ತಜ್ಞರು ಹೇಳುವುದೇನು ? : 
ತಜ್ಞರ ಪ್ರಕಾರ, ಫ್ರಿಡ್ಜ್ ಮತ್ತು ಸ್ಟೌವ್  ನಡುವೆ 20 ಇಂಚುಗಳಷ್ಟು ಅಂತರವಿರಬೇಕು. ಸ್ಟೌವ್ ಈ ದೂರದಲ್ಲಿದ್ದರೆ ಅದು ಫ್ರಿಜ್ ಗೆ ಯಾವ ಹಾನಿಯನ್ನು ಕೂಡಾ ಉಂಟು ಮಾಡುವುದಿಲ್ಲ.ಆದರೆ ಇದಕ್ಕಿಂತ ಹೆಚ್ಚು ಸಮೀಪದಲ್ಲಿ ಇದ್ದರೆ ರೆಫ್ರಿಜರೇಟರ್‌ನ ಬಾಳಿಕೆ ಅವಧಿ ಕಡಿಮೆಯಾಗಬಹುದು. 

ಇದನ್ನೂ ಓದಿ : ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದು ಸಂಪರ್ಕದಲ್ಲಿ ನೋಡಿ ಎರಡು ಟಿವಿ

ಹತ್ತಿರ ಇಟ್ಟುಕೊಂಡರೆ ಏನಾಗುತ್ತದೆ? :
ರೆಫ್ರಿಜರೇಟರ್ ಅನ್ನು ಸ್ಟೌವ್  ಬಳಿ ಇರಿಸಿದರೆ, ಸ್ಟೌವ್ ನಿಂದ ಹೊರ ಬರುವ ಶಾಖ ರೆಫ್ರಿಜರೇಟರ್  ಹೊರಭಾಗಕ್ಕೆ ತಗಲುತ್ತದೆ.ಈ ಕಾರಣದಿಂದಾಗಿ,ಶಾಖವು ರೆಫ್ರಿಜರೇಟರ್ ನ ಕಂಪ್ರೆಸರ್ ಮೇಲೆ ಪರಿಣಾಮ ಬೀರಬಹುದು.ಇದು ಇಂಟರ್ನಲ್ ಕಾಯಿಲ್ ಮೇಲೆ ಪರಿಣಾಮವಾಗಿ ಫ್ರಿಜ್ ಹಾಳಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News