ಫಸ್ಟ್ ಲುಕ್ ಟೀಸರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಚಿತ್ರ `ಮಾರಿಗೆ ದಾರಿ'. ರೋಚಕ ಕಥನವೊಂದರ ಸುಳಿವಿನೊಂದಿದ್ದ ಸದ್ದು ಮಾಡಿದ್ದ ಈ ಚಿತ್ರ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡು, ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಅಗಸ್ತ್ಯ ನಿರ್ದೇಶನ ಮಾಡಿ, ಅವರೇ ನಾಯಕನಾಗಿಯೂ ನಟಿಸಿರುವ ಈ ಚಿತ್ರ ಹಿಂದೆ ಹೊಸಬರದ್ದೊಂದು ತಂಡವಿದೆ. ಈ ಮೂಲಕ ಒಂದಷ್ಟು ಪ್ರತಿಭಾನ್ವಿತರು ಚಿತ್ರರಂಗಕ್ಕೆ ಆಗಮಿಸಬಹುದಾದ ಲಕ್ಷಣಗಳೂ ಕಾಣಿಸುತ್ತಿವೆ. ನವ ಪ್ರತಿಭೆ ಅನಂತ್ ಕುಮಾರ್ ಎ ಹೀರೋಗೇ ಸರಿಸಮನಾದ ಖಡಕ್ ವಿಲನ್ ಆಗಿ ಎಂಟ್ರಿ ಕೊಡಲಿದ್ದಾರೆ.
ನಿರ್ದೇಶಕರೂ ಆಗಿರುವ ಅಗಸ್ತ್ಯ ಹೀರೋಯಿಸಮ್ಮಿನ ಅಬ್ಬರಕ್ಕಷ್ಟೇ ಒತ್ತು ನೀಡದೆ, ಪಾತ್ರಗಳು ಒಂದಕ್ಕೊಂದು ಮೀರಿ ಮಿಂಚುವಂತೆ ಅವಕಾಶ ಮಾಡಿ ಕೊಟ್ಟಿದ್ದಾರಂತೆ. ಇದರಲ್ಲಿನ ಮುಖ್ಯವಾದ ವಿಲನ್ ಪಾತ್ರಕ್ಕೆ ಅನಂತ್ ಕುಮಾರ್ ಅವರಿಗೆ ಅವಕಾಶ ಕೊಟ್ಟಿದ್ದಾರೆ. ವಿಲನ್ ಅಂದಾಕ್ಷಣವೇ ಪ್ರೇಕ್ಷಕರ ಮನಸಲ್ಲಿ ನಿಖರವಾದ ಚಿತ್ರವೊಂದು ಕದಲಿಬಿಡುತ್ತೆ. ಸಲೀಸಾಗಿ ಅಂಥಾ ಊಹೆಗಳ ನಿಲುಕಿಗೆ ಸಿಗದ ರುದ್ರ ಎಂಬ ಪಾತ್ರದಲ್ಲಿ ಅನಂತ್ ಮಿಂಚಿದ್ದಾರಂತೆ. ಅದು ಮುಖ್ಯ ವಿಲನ್ ಅನ್ನು ಮೀರಿ, ನಾಯಕನನ್ನು ಸರಿಗಟ್ಟಿ ನಿಲ್ಲುವಂಥಾ ಪಾತ್ರ. ಹೆಚ್ಚು ಮಾತಿಲ್ಲದ ಮಾಸ್ ಸೀನುಗಳಲ್ಲಿ ಮಿಂದೆದ್ದ ರುದ್ರ ಈ ಚಿತ್ರದ ಪ್ರಧಾನ ಆಕರ್ಷಣೆ ಅನ್ನೋದು ನಿರ್ದೇಶಕರ ಅಭಿಪ್ರಾಯ.
ಈ ಮೂಲಕ ಅಗಸ್ತ್ಯ ಮಾರಿಗೆ ದಾರಿ ಚಿತ್ರದ ಪ್ರಧಾನ ಪಾತ್ರವೊಂದನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಫಸ್ಟ್ ಲುಕ್ ಟೀಸರಿನಲ್ಲಿಯೇ ಇದೊಂದು ಮಾಸ್ ಸಬ್ಜೆಕ್ಟ್ ಹೊಂದಿರೋ ಸಿನಿಮಾ ಎಂಬ ವಿಚಾರ ಖಾತರಿಯಾಗಿತ್ತು. ಇದೀಗ ರುದ್ರನ ಚಹರೆಗಳ ಮೂಲಕ ಅದು ಮತ್ತೊಮ್ಮೆ ಮನದಟ್ಟಾಗಿದೆ. ವಿಶೇಷವೆಂದರೆ, ಈ ಪಾತ್ರವನ್ನು ನಿರ್ವಹಿಸಿರುವ ಅನಂತ್ ಕುಮಾರ್ ಈ ಚಿತ್ರದ ಅಸೋಸಿಯೇಟ್ ಡೈರೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿ ನಟಿಸಿರುವ ಅನುಭವವನ್ನೂ ಹೊಂದಿದ್ದಾರೆ.
ರಾಧಾ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಕನ್ನಡದ ಪ್ರೇಕ್ಷಕರಿಗೆ ತೀರಾ ಫ್ರೆಶ್ ಅನ್ನಿಸುವಂಥಾ ಕಥೆಯೊಂದಿಗೆ ಈ ಸಿನಿಮಾವನ್ನು ರೂಪಿಸಿರೋದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಅದಕ್ಕೆ ತಕ್ಕುದಾದ ಒಂದಷ್ಟು ಅಂಶಗಳು ಈಗಾಗಲೇ ಪ್ರೇಕ್ಷಕರನ್ನು ತಲುಪಿವೆ. ಇನ್ನುಳಿದಂತೆ, ಅಗಸ್ತ್ಯ, ಮಹಾಲಕ್ಷ್ಮಿ, ಕಾಕ್ರೋಚ್ ಸುಧಿ, ವರ್ಧನ್, ಪ್ರದೀಪ್ ಪೂಜಾರಿ, ಬೆನಕ ನಂಜಪ್ಪ, ಬಾಲ ರಾಜವಾಡಿ ಮುಂತಾದವರ ತಾರಾಗಣದೊಂದಿಗೆ ಮಾರಿಗೆ ದಾರಿ ಕಳೆಗಟ್ಟಿಕೊಂಡಿದೆ. ಜಗದೀಶ್ ಗೌಡ ಛಾಯಾಗ್ರಹಣ, ರಿಯೋ ಆಂಟನಿ ಸಂಗೀತ ನಿರ್ದೇಶನ, ಜಗದೀಶ್ ಗೌಡ ಸಂಕಲನ ಈ ಚಿತ್ರಕ್ಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ