How to Get Rid of Mosquitoes : ಮಳೆಗಾಲದಲ್ಲಿ ಮನೆಯಲ್ಲಿ ಸೊಳ್ಳೆ ಕಾಟವನ್ನು ತಪ್ಪಿಸಲು ಬಹುಷಃ ನೀವು ಹಲವಾರು ಕ್ರಮಗಳನ್ನು ತೆಗೆದುಕೊಂಡಿರಬೇಕು ಅಲ್ಲವೇ.. ಆದರೂ ಸೊಳ್ಳೆಗಳ ಕಾಟ ತಪ್ಪಿಲ್ಲ... ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ.. ಈ ಕೆಳಗೆ ನೀಡಿರುವ ಎರಡು ವಸ್ತುಗಳನ್ನು ಮನೆಯಲ್ಲಿ ಸುಟ್ಟು ನೋಡಿ... ನಿಮ್ಮ ಮನೆ ಹತ್ತಿರವೂ ಸೊಳ್ಳೆ ಸುಳಿಯಲ್ಲ..
ಮಳೆಗಾಲದಲ್ಲಿ ಮನೆಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಸೊಳ್ಳೆಗಳು ಡೆಂಗ್ಯೂ-ಮಲೇರಿಯಾದಂತಹ ಮಾರಕ ರೋಗಗಳನ್ನು ಹರಡುತ್ತವೆ. ಎಚ್ವರಿಕೆ.. ಈ ರೋಗಗಳನ್ನು ತಡೆಗಟ್ಟುವುದು ಅವಶ್ಯಕ. ಅದಕ್ಕಾಗಿ ಮೊದಲು ನೀವು ಸೊಳ್ಳೆಗಳನ್ನ ಹೆಚ್ಚಾಗದಂತೆ ನೋಡಿಕೊಳ್ಳಬೇಕು.. ಈ ಕೆಳಗೆ ಮನೆಯಲ್ಲಿ ಸೊಳ್ಳೆಗಳ ಹಾವಳಿಯನ್ನು ತಡೆಗಟ್ಟಲು ಕೆಲವು ಸಲಹೆಗಳಿವೆ ಪ್ರಯತ್ನಿಸಿ ನೋಡಿ..
ಮನೆಯಲ್ಲಿ ಸೊಳ್ಳೆಗಳನ್ನು ತಡೆಗಟ್ಟಲು ಸಾಕಷ್ಟು ಪರಿಹಾರ ಕ್ರಮಗಳಿವೆ.. ಅಂಗಡಿಯಲ್ಲಿ ಸಿಗುವ ರಾಸಾಯನಿಕ ಔಷಧಿಗಳನ್ನ, ಬತ್ತಿಗಳನ್ನು ಬಿಟ್ಟು ನಿಮ್ಮ ಆರೋಗ್ಯಕ್ಕೆ ಯಾಔುದೇ ಹಾನಿಯಾಗದಂತೆಯೂ ಸೊಳ್ಳೆಗಳ ನಿಯಂತ್ರಣ ಮಾಡಬಹುದು.. ಈ ಪೈಕಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಕರ್ಪೂರ ಬಳಸಬಹುದು.
ಕಹಿ ಬೇವಿನೊಂದಿಗೆ ಬೆರೆಸಿದ ಕರ್ಪೂರ ಅತ್ಯುತ್ತಮ ಸೊಳ್ಳೆ ನಿವಾರಕವಾಗಿದೆ. ಸಂಜೆ ಮತ್ತು ಬೆಳಿಗ್ಗೆ ಕರ್ಪೂರ ಮತ್ತು ಬೇವಿನ ಎಲೆಗಳನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿ. ಅದರಿಂದ ಬರುವ ಹೊಗೆಗೆ ಮೆನೆಯಲ್ಲಿರುವ ಸೊಳ್ಳೆಗಳು ಓಡಿ ಹೋಗುತ್ತವೆ..
ಮಳೆಗಾಲದಲ್ಲಿ ನಿಂತ ಕಲುಷಿತ ನೀರಿನಿಂದ ಅನೇಕ ಹರಡುವ ರೋಗಗಳು ಹರುಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆಯ ಹತ್ತಿರ, ಚರಂಡಿ ಇಲ್ಲವೆ ರಸ್ತೆಯಲ್ಲಿ ನೀರು ನಿಂತಿದ್ದರೆ ಅದನ್ನು ಖಾಲಿ ಮಾಡುತ್ತೀರಿ..
ಒಂದು ಪಾತ್ರೆಯಲ್ಲಿ ಕಹಿ ಬೇವಿನ ಎಲೆಗಳು, ಗುಲಾಬಿ ದಳಗಳನ್ನು ಕರ್ಪೂರದೊಂದಿಗೆ ಬೆರೆಸಿ ಒಂದರಿಂದ ಎರಡು ಗಂಟೆಗಳ ಕಾಲ ಗ್ಯಾಸ್ ಮೇಲೆ ಕುದಿಸಿ. ಕುದಿದ ನಂತರ ಅದು ದ್ರವವಾಗುತ್ತದೆ. ಈ ದ್ರವವನ್ನು ಬಾಟಲಿಗೆ ಸುರಿಯಿರಿ. ಕಾಲಕಾಲಕ್ಕೆ ಈ ದ್ರವವನ್ನು ಸಿಂಪಡಿಸುತ್ತಲೇ ಇರಿ. ಇದು ಸೊಳ್ಳೆಗಳು ಮತ್ತು ಇತರ ಕೀಟಗಳನ್ನು ಮನೆಯಿಂದ ದೂರವಿಡುತ್ತದೆ.