ಈಗ PAN Card ಪಡೆಯಲು ಸರ್ಕಾರದಿಂದ ವಿಶೇಷ ಸೌಲಭ್ಯ

ಈಗ ನೀವು ಪ್ಯಾನ್ ಕಾರ್ಡ್‌(PAN Card)ಗಾಗಿ ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿಲ್ಲ. ಈಗ ನೀವು ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡದೆ ಪ್ಯಾನ್ ಕಾರ್ಡ್ ಪಡೆಯುತ್ತೀರಿ. ಶನಿವಾರ ಬಜೆಟ್ ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಹೊಸ ವ್ಯವಸ್ಥೆಯನ್ನು ಪ್ರಕಟಿಸಿದ್ದಾರೆ.

Written by - Yashaswini V | Last Updated : Feb 3, 2020, 11:56 AM IST
ಈಗ PAN Card ಪಡೆಯಲು ಸರ್ಕಾರದಿಂದ ವಿಶೇಷ ಸೌಲಭ್ಯ title=

ನವದೆಹಲಿ: ಈಗ ನೀವು ಪ್ಯಾನ್ ಕಾರ್ಡ್‌(PAN Card)ಗಾಗಿ ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿಲ್ಲ. ಈಗ ನೀವು ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡದೆ ಪ್ಯಾನ್ ಕಾರ್ಡ್ ಪಡೆಯುತ್ತೀರಿ. ಶನಿವಾರ ಬಜೆಟ್ ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಹೊಸ ವ್ಯವಸ್ಥೆಯನ್ನು ಪ್ರಕಟಿಸಿದ್ದಾರೆ. ಸರ್ಕಾರದ ಈ ಹೊಸ ನಿರ್ಧಾರವು ಸಾರ್ವಜನಿಕರಿಗೆ ಸಾಕಷ್ಟು ಸಮಾಧಾನ ತಂದಿದೆ.

ಆಧಾರ್ ಕಾರ್ಡ್‌ನಿಂದ ಪಡೆಯಿರಿ ಪ್ಯಾನ್:
ಈ ಸಮಯದಲ್ಲಿ, ನೀವು ಯಾವುದೇ ಸರ್ಕಾರಿ ಯೋಜನೆಯ ಲಾಭ ಪಡೆಯಲು ಬಯಸಿದರೆ, ನೀವು ಪ್ಯಾನ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಹೊಂದಿರಬೇಕು. ಈ ಮೊದಲು, ನಾವು ಪ್ಯಾನ್ ಕಾರ್ಡ್ ತಯಾರಿಸಲು ಹಲವು ಬಾರಿ ಕಾಯಬೇಕಾಗಿತ್ತು, ಆದರೆ ಈಗ ನಿಮ್ಮ ಆಧಾರ್ ಸಂಖ್ಯೆಯಿಂದ ನೀವು ಪ್ಯಾನ್ ಕಾರ್ಡ್ ಮಾಡಿಸಬಹುದು ಎಂದು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಅಂದರೆ, ಈಗ ನೀವು ಪ್ಯಾನ್ ಪಡೆಯಲು ಸ್ವಲ್ಪವೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ.

ದೀರ್ಘ ಫಾರ್ಮ್ ಅನ್ನು ಭರ್ತಿ ಮಾಡುವ ಅಗತ್ಯವಿಲ್ಲ:
ಸರ್ಕಾರದ ಹೊಸ ನಿರ್ಧಾರವು ಸಾಮಾನ್ಯ ಜನರಿಗೆ ನೆಮ್ಮದಿಯ ಸುದ್ದಿಯಾಗಿದೆ. ವಾಸ್ತವವಾಗಿ, ಈಗ ನೀವು ಪ್ಯಾನ್ ಸಂಖ್ಯೆಗೆ ಯಾವುದೇ ದೀರ್ಘ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿಲ್ಲ. ಬದಲಾಗಿ, ನಿಮ್ಮ ಪ್ಯಾನ್ ಸಂಖ್ಯೆಯನ್ನು ನೀವು ಆಧಾರ್ ಸಂಖ್ಯೆಯ ಮೂಲಕ ಮಾತ್ರ ಪಡೆಯುತ್ತೀರಿ. ಅಂದರೆ, 'ಆಧಾರ್' ಆಧಾರದ ಮೇಲೆ ಪ್ಯಾನ್ ಸಂಖ್ಯೆ ಪಡೆಯುವ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ.

ಬಜೆಟ್ ಅನ್ನು ಪ್ರಸ್ತುತಪಡಿಸಿದ ಹಣಕಾಸು ಸಚಿವರು, ಇನ್ಮುಂದೆ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿ ಪ್ಯಾನ್ ಕಾರ್ಡ್ ಗೆ ಅಪ್ಪ್ಲೈ ಮಾಡಬಹುದಾಗಿದ್ದು, ಇದರಿಂದ ಪ್ಯಾನ್ ಕಾರ್ಡ್ ಕೂಡ ಶೀಘ್ರದಲ್ಲಿಯೇ ಜಾರಿಗೊಳಿಸಬಹುದು ಎಂದಿದ್ದಾರೆ. ಇದಕ್ಕಾಗಿ ಆಧಾರ್ ಕಾರ್ಡ್ ಮಾಹಿತಿಯನ್ನು ಪ್ಯಾನ್ ಕಾರ್ಡ್ ಮಾಹಿತಿಗೆ ಜೋಡಿಸಲು ಕೇಂದ್ರ ಸರ್ಕಾರ ಯೋಜನೆ ಜಾರಿಗೆ ತರಲಿದೆ.  ಪ್ಯಾನ್ ಸಂಖ್ಯೆ ಹಂಚಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ನಾವು ಈ ಕ್ರಮ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿರುವ ಹಣಕಾಸು ಸಚಿವರು ಶೀಘ್ರದಲ್ಲೇ ನಾವು ವ್ಯವಸ್ಥೆಯನ್ನು ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.

ಮಾರ್ಚ್ 31 ರವರೆಗೆ ಲಿಂಕ್ ಮಾಡಿ:
ಮಾರ್ಚ್ 31 ರೊಳಗೆ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವುದು ಅವಶ್ಯಕ. ಸಿಬಿಡಿಟಿ ಈ ಮೊದಲು ತನ್ನ ಗಡುವನ್ನು ಡಿಸೆಂಬರ್ 31 ಎಂದು ನಿಗದಿಪಡಿಸಿತ್ತು. ಆದರೆ ನಂತರ ಅದನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಯಿತು. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ವಿಸ್ತರಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಸಿಬಿಡಿಟಿ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ದಿನಾಂಕವನ್ನು 7 ಬಾರಿ ವಿಸ್ತರಿಸಿದೆ.

Trending News