Good News: ಕಡಿಮೆ ಬೆಲೆಗೆ ಚಿನ್ನ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ!

ಚಿನ್ನದ ಬೆಲೆಗಳು ಪ್ರಸ್ತುತ ದಾಖಲೆಯ ಗರಿಷ್ಠ ಮಟ್ಟದಲ್ಲಿವೆ. ಆದಾಗ್ಯೂ, ನೀವು ಮಾರುಕಟ್ಟೆ ಬೆಲೆಗಿಂತ ಚಿನ್ನವನ್ನು ಅಗ್ಗವಾಗಿ ಪಡೆಯಬಹುದು. ನೀವು ಅಗ್ಗದ ಚಿನ್ನವನ್ನು ಖರೀದಿಸಲು ಬಯಸಿದರೆ ಈ ಸುದ್ದಿಯನ್ನು ಎಚ್ಚರಿಕೆಯಿಂದ ಓದಿ.  

Written by - Yashaswini V | Last Updated : Jan 30, 2020, 10:10 AM IST
Good News: ಕಡಿಮೆ ಬೆಲೆಗೆ ಚಿನ್ನ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ! title=

ನವದೆಹಲಿ: ಚಿನ್ನದ ಬೆಲೆಗಳು ಪ್ರಸ್ತುತ ದಾಖಲೆಯ ಗರಿಷ್ಠ ಮಟ್ಟದಲ್ಲಿವೆ. ಆದಾಗ್ಯೂ, ನೀವು ಮಾರುಕಟ್ಟೆ ಬೆಲೆಗಿಂತ ಚಿನ್ನವನ್ನು ಅಗ್ಗವಾಗಿ ಪಡೆಯಬಹುದು. ನೀವು ಅಗ್ಗದ ಚಿನ್ನವನ್ನು ಖರೀದಿಸಲು ಬಯಸಿದರೆ ಈ ಸುದ್ದಿಯನ್ನು ಎಚ್ಚರಿಕೆಯಿಂದ ಓದಿ. ಚಿನ್ನದ ಸಾಲ ನೀಡುವ ಕಂಪನಿಯಾದ ಮಣಪುರಂ ಫೈನಾನ್ಸ್ ಚಿನ್ನವನ್ನು ಹರಾಜು ಹಾಕುತ್ತಿದೆ. ಈಗಾಗಲೇ ಹರಾಜು ಪ್ರಾರಂಭವಾಗಿದ್ದು, ಮುಂದಿನ ತಿಂಗಳವರೆಗೆ ಹರಾಜು ನಡೆಯುತ್ತದೆ. ಹರಾಜಿನಲ್ಲಿ ಪಾಲ್ಗೊಳ್ಳುವ ಮೂಲಕ, ನೀವು ಮಾರುಕಟ್ಟೆಯಿಂದ ಕಡಿಮೆ ಬೆಲೆಗೆ ಚಿನ್ನವನ್ನು ಸಹ ಖರೀದಿಸಬಹುದು. ದೇಶದ ವಿವಿಧ ಭಾಗಗಳಲ್ಲಿ ಈ ಹರಾಜು ನಡೆಯಲಿದೆ. ಇದಕ್ಕಾಗಿ ಅನೇಕ ಕೇಂದ್ರಗಳನ್ನು ನಿರ್ಮಿಸಲಾಗಿದೆ.

ಮಣಪುರಂ ಅಸೆಟ್ ಫೈನಾನ್ಸ್ ಲಿಮಿಟೆಡ್ ಚಿನ್ನದ ಹರಾಜಿಗೆ ಜಾಹೀರಾತು ಬಿಡುಗಡೆ ಮಾಡಿದೆ. ಕಂಪನಿಯು ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನವನ್ನು ಹರಾಜು ಹಾಕುತ್ತಿದೆ. ಈ ಆಭರಣಗಳನ್ನು ಗ್ರಾಹಕರು ಅಡಮಾನ ಇಟ್ಟಿದ್ದರು ಮತ್ತು ಸಾಲವನ್ನು ಪಡೆದರು. ಆದರೆ ಸಾಲದ ಮೊತ್ತವನ್ನು ಮರುಪಾವತಿಸುವಲ್ಲಿ ವಿಫಲರಾಗಿದ್ದಾರೆ. ಸಾಲದ ಮೇಲೆ ನೀಡಲಾದ ಮೊತ್ತವನ್ನು ವಸೂಲಿ ಮಾಡಲು ಕಂಪನಿಯು ಗ್ರಾಹಕರಿಗೆ ನೋಟಿಸ್ ನೀಡುತ್ತದೆ. ಆದರೆ, ಸೂಚನೆಯ ನಂತರವೂ, ಸಾಲದ ಮೊತ್ತವನ್ನು ಹಿಂತಿರುಗಿಸದಿದ್ದಾಗ, ಕಂಪನಿಯು ಅವರ ಪರವಾಗಿ ಇಟ್ಟುಕೊಂಡಿದ್ದ ಚಿನ್ನವನ್ನು ಹರಾಜು ಮಾಡುವ ಮೂಲಕ ಅದರ ಮೂಲ ಮೊತ್ತವನ್ನು ಮರುಪಡೆಯುತ್ತದೆ ಎಂದು ತಿಳಿಸಿದೆ.

ಕೇರಳದಿಂದ ಪ್ರಾರಂಭವಾದ ಹರಾಜು:
ಜನವರಿ 28 ರಿಂದ ಚಿನ್ನದ ಹರಾಜು ಪ್ರಾರಂಭವಾಗಿದೆ. ಮೊದಲ ಹರಾಜು ಕೇರಳದಲ್ಲಿ ನಡೆಯಿತು. ಆದಾಗ್ಯೂ, ಜನವರಿ 28 ರ ಹರಾಜು ವಿಫಲವಾದ ಕಾರಣ, ಜನವರಿ 29 ರಂದು ಮತ್ತೆ ಆ ಪ್ರಕ್ರಿಯೆ ಮುಂದುವರೆಸಲಾಯಿತು. ಈ ಹರಾಜು ಇನ್ನೂ ನಡೆಯುತ್ತಿದೆ. ಅದರಲ್ಲಿ ಭಾಗವಹಿಸುವ ಮೂಲಕ ನೀವು ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿಸಬಹುದು. ಗ್ರಾಹಕರು ಚಿನ್ನದ ಸಾಲ ಪಡೆದ ನಂತರ 12 ತಿಂಗಳವರೆಗೆ ಇಎಂಐ ಪಾವತಿಸದಿದ್ದಾಗ ಹಣಕಾಸು ಕಂಪನಿಯು ಹರಾಜನ್ನು ಪ್ರಾರಂಭಿಸುತ್ತದೆ. ಅಂತಹ ಗ್ರಾಹಕರನ್ನು ಮೊದಲು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ನಂತರ ಆರ್‌ಬಿಐ ನಿಯಮಗಳ ಪ್ರಕಾರ ಹರಾಜು ಮಾಡಲಾಗುತ್ತದೆ. ಅವರ ಮೇಲೆ ಕ್ರಮ ಕೈಗೊಳ್ಳುವ ಅವಕಾಶವೂ ಇದೆ.

ಫೆಬ್ರವರಿಯಲ್ಲಿ ಈ ರಾಜ್ಯಗಳಲ್ಲಿ ನಡೆಯಲಿದೆ ಹರಾಜು:
ಮಣಪುರಂ ಫೈನಾನ್ಸ್ ಮುಂದಿನ ತಿಂಗಳು ಹರಾಜನ್ನು ಮುಂದುವರಿಸಲಿದೆ. ಫೆಬ್ರವರಿ 17 ರಂದು ಬೆಳಿಗ್ಗೆ 10 ರಿಂದ ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ನಾಲ್ಕು ನಗರಗಳಲ್ಲಿ ಹರಾಜು ನಡೆಯಲಿದೆ. ವಿವಿಧ ಸ್ಥಳಗಳಲ್ಲಿ ಹರಾಜಿಗಾಗಿ  50 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಬಿಹಾರದ ರೋಹ್ತಾಸ್, ಜಾರ್ಖಂಡ್‌ನ ರಾಂಚಿ, ಬೊಕಾರೊ, ಧನ್ಬಾದ್, ಹಜಾರಿಬಾಗ್, ಜಮ್ಶೆಡ್ಪುರ, ಉತ್ತರ ಪ್ರದೇಶದ ಆಗ್ರಾ, ಗೌತಮ್ ಬುದ್ಧ ನಗರ, ಹರಿಯಾಣದ ಗುರಗಾಂವ್, ಫರಿದಾಬಾದ್ ಮತ್ತು ಮೇವತ್ ಸೇರಿವೆ. ಯಾವುದೇ ಕಾರಣಕ್ಕಾಗಿ ಹರಾಜು ಸ್ಥಳದಲ್ಲಿ ಬದಲಾವಣೆ ಕಂಡುಬಂದರೆ, ಅದರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನವೀಕರಿಸಲಾಗುವುದು ಎಂದು ಕಂಪನಿ ತನ್ನ ಜಾಹೀರಾತಿನಲ್ಲಿ ಮಾಹಿತಿ ನೀಡಿದೆ.

ಆರ್‌ಬಿಐ ನಿಯಮಗಳ ಪ್ರಕಾರ ಹರಾಜು:
ಚಿನ್ನದ ಹರಾಜನ್ನು ಸಂಪೂರ್ಣವಾಗಿ ಆರ್‌ಬಿಐ ನಿಯಮಗಳ ಪ್ರಕಾರ ಮಾಡಲಾಗುತ್ತದೆ. ಆರ್‌ಬಿಐ ಪರವಾಗಿ ವೀಕ್ಷಕರೂ ಹರಾಜಿನಲ್ಲಿ ಉಪಸ್ಥಿತರಿರುತ್ತಾರೆ. ಕಂಪನಿಯ ಪ್ರಕಾರ, ಹರಾಜು ಜಾಹೀರಾತು ಸಹ ಡೀಫಾಲ್ಟರ್ಗೆ ಸೂಚನೆಯಾಗಿದೆ. ಹರಾಜಿನ ಬಗ್ಗೆ ಮಾಹಿತಿ ಪಡೆದ ನಂತರವೂ ಗ್ರಾಹಕರು ಹಣವನ್ನು ಪಾವತಿಸದಿದ್ದರೆ, ಚಿನ್ನ ಅಥವಾ ಆಭರಣಗಳನ್ನು ಹರಾಜು ಮಾಡಲಾಗುತ್ತದೆ.

ಚಿನ್ನ ಕೊಳ್ಳಲು ಪ್ಯಾನ್ ಕಾರ್ಡ್ ಅಗತ್ಯ:
ಹರಾಜಿನಲ್ಲಿ ಭಾಗವಹಿಸಲು, ನಿಮ್ಮ ಐಡಿ ಪುರಾವೆ ನೀಡಬೇಕು. ಬಿಡ್ಡಿಂಗ್ಗಾಗಿ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ. ಎರಡೂ ಪುರಾವೆಗಳಾಗಿದ್ದರೆ ಮಾತ್ರ ಬಿಡ್ ಮಾಡಲು ಅವಕಾಶವಿರುತ್ತದೆ. ಹರಾಜಿನಲ್ಲಿ ಉಳಿದ ಚಿನ್ನ ಅಥವಾ ಆಭರಣಗಳನ್ನು ಮರುದಿನ ಅಥವಾ ಮತ್ತೆ ಹರಾಜಿಗೆ ಇಡಲಾಗುತ್ತದೆ. ಇದರ ಮಾಹಿತಿಯನ್ನು ಕಂಪನಿಯ ವೆಬ್‌ಸೈಟ್ನಲ್ಲಿ ನೀಡಲಾಗಿದೆ.

Trending News