Parvathamma Rajkumar: ಡಾ. ರಾಜ್ ಕುಮಾರ್ ಸಿನಿಮಾ ಯಶಸ್ಸಿನ ಹಿಂದೆ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರ ಪಾತ್ರ ಮಹತ್ವದ್ದು ಎಂಬುದು ಪ್ರತಿಯೊಬ್ಬರಿಗೂ ತಿಳಿದ ಸಂಗತಿ. ರಾಜ್ ಕುಮಾರ್ ನಟಿಸುವ ಸಿನಿಮಾದ ಕಥೆಯ ಆಯ್ಕೆಯಲ್ಲಿ ಪಾರ್ವತಮ್ಮ ಮತ್ತು ವರದಪ್ಪ ಅವರ ಸಮ್ಮತಿ ಅಗತ್ಯವಾಗಿ ಪಡೆಯುತ್ತಿದ್ದರು. ಅಂದಹಾಗೆ ಅಣ್ಣಾವ್ರ ಈ ನಡತೆ ಹಿಂದೆ ಬಹುದೊಡ್ಡ ಕಾರಣವೂ ಇದೆ.
ಡಾ.ರಾಜ್ ಕುಮಾರ್ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಿದ್ದ ಕಾರಣ, ಇತರ ಸಿನಿಮಾಗಳ ಕಥೆಗಳನ್ನು ಕೇಳಿಕೊಂಡು, ಅದನ್ನು ಕೂಲಂಕುಷವಾಗಿ ಆಲಿಸಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣದಿಂದ ಸಿನಿಮಾದ ಕಥೆ ಕೇಳಿ, ಅದು ಅಣ್ಣಾವ್ರಿಗೆ ಒಪ್ಪುತ್ತಾ ಎಂಬುದನ್ನು ಅರಿತುಕೊಳ್ಳುವ ಜವಾಬ್ದಾರಿ ಇವರಿಬ್ಬರ ಮೇಲಿತ್ತು.
ಇದನ್ನೂ ಓದಿ: ಬಿಸಿ ನೀರಿಗೆ ತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ ಈ ಕಾಯಿಲೆ ಒಂದೇ ವಾರದಲ್ಲಿ ಗುಣವಾಗುವುದು!
ಇನ್ನು ಹೀಗಿರುವಾಗಲೇ ಪಾರ್ವತಮ್ಮ ಬಳಿಗೆ ಓರ್ವ ಪ್ರಖ್ಯಾತ ನಿರ್ದೇಶಕ ಕಥೆಯೊಂದನ್ನು ತರುತ್ತಾರೆ. ಆದರೆ ಅದನ್ನು ಖಡಾಖಂಡಿತವಾಗಿ ತಿರಸ್ಕರಿಸಿದ ಪಾರ್ವತಮ್ಮ, "ಈ ಸಿನಿಮಾ ಮಾಡಿದ್ರೆ ನಿನ್ನ ತಲೆ ತಗೀತಿನಿ" ಎಂದು ಹೇಳಿದ್ದರಂತೆ. ಪಾರ್ವತಮ್ಮನ ಕೋಪ ಕಂಡ ಆ ನಿರ್ದೇಶಕ ಸಿನಿಮಾವನ್ನೇ ಕೈಬಿಟ್ಟರಂತೆ.
ಅಷ್ಟಕ್ಕೂ ಆ ನಿರ್ದೇಶಕ ಬೇರಾರು ಅಲ್ಲ ದೊರೈ ಭಗವಾನ್. ಈ ಬಗ್ಗೆ ʼಕನ್ನಡ ಮಾಣಿಕ್ಯʼ ಯೂಟ್ಯೂಬ್ʼನಲ್ಲಿ ಮಾಹಿತಿ ಬಿತ್ತರವಾಗಿದೆ. 1992ರ ಸಂದರ್ಭ. ನಿರ್ದೇಶಕ ದೊರೈ ಭಗವಾನ್, ಡಾ, ರಾಜ್‌ಕುಮಾರ್ʼಗೆ ಮುಂದಿನ ಸಿನಿಮಾ ಯಾವುದು ಎಂದು ಹುಡುಕಾಟದಲ್ಲಿದ್ದಾಗ, ಜ್ಞಾನಪೀಠ ಪ್ರಶಸ್ತಿ ವಿಜೇತ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಸುಬ್ಬಣ್ಣ ಕೃತಿ ಅವರ ಕಣ್ಣಿಗೆ ಬಿತ್ತು.
ಈ ಕೃತಿಯ ಕಥೆ ಮನಸ್ಸಿಗೆ ಹಿಡಿಸಿದ ಕಾರಣ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಜೊತೆ ಈ ಬಗ್ಗೆ ಮಾತನಾಡಿ, ಆಗಿನ ಕಾಲದಲ್ಲಿಯೇ ಕಾದಂಬರಿಯ ಹಕ್ಕುಗಳನ್ನು ಬರೋಬ್ಬರಿ 10 ಸಾವಿರ ರೂಪಾಯಿಗೆ ಪಡೆದುಕೊಂಡು ಬರುತ್ತಾರೆ ಭಗವಾನ್. ಆದರೆ ಮಾಸ್ತಿ ಅವರು, "ಒಂದು ವರ್ಷದ ಅವಧಿಯಲ್ಲಿ ಈ ಕಾದಂಬರಿ ಆಧರಿತ ಸಿನಿಮಾ ಶುರುವಾಗದಿದ್ದರೆ, ಇದರ ಹಕ್ಕುಗಳನ್ನು ನೀವು ಕಳೆದುಕೊಳ್ಳುತ್ತೀರಿ" ಎಂದು ಷರತ್ತು ವಿಧಿಸಿದ್ದರಂತೆ.
ಆ ನಂತರ ಭಗವಾನ್ ಅವರು ವರದಪ್ಪನವರಿಗೆ ಕತೆ ಹೇಳಿದಾಗ ಅವರು ಒಕೆ ಎನ್ನುತ್ತಾರೆ. ರಾಜ್ ಕುಮಾರ್ ಗಮನಕ್ಕೆ ತಂದಾಗಲೂ ಒಪ್ಪಿಗೆ ಸಿಕ್ಕಿರುತ್ತದೆ. ಆದರೆ ಪಾರ್ವತಮ್ಮನ ಗಮನಕ್ಕೆ ಬಂದಾಗ, "ನೀನು ಏನಾದರೂ ಈ ಸಿನಿಮಾನ ಅಣ್ಣಾವ್ರನ್ನು ಹಾಕ್ಕೊಂಡು ಮಾಡಿದ್ರೆ, ನಿನ್ನ ತಲೆ ಕಡೀತಿನಿ!" ಎನ್ನುತ್ತಾರೆ.
ಇದನ್ನೂ ಓದಿ: ತಿಂಗಳಿಗೆ 1200 ರೂಪಾಯಿ ಸಂಬಳಕ್ಕೆ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಇಂದು ಸ್ಟಾರ್ ಹೀರೋ..ಯಾರು ಗೊತ್ತಾ..?
ಸುಬ್ಬಣ್ಣ ಕಾದಂಬರಿ ಆಧಾರಿತ ಸಿನಿಮಾದಲ್ಲಿ ರಾಜ್ ಕುಮಾರ್ ನಟಿಸಿದರೆ ಜನ ಒಪ್ಪಿಕೊಳ್ತಾರಾ? ಮನೆಯ ಜವಾಬ್ದಾರಿ ಇಲ್ಲದ ಮನುಷ್ಯನ ಕಥೆ! ಅಣ್ಣಾವ್ರ ಘನತೆಗೆ ತಕ್ಕ ಸಿನಿಮಾ ಆಗಲ್ಲ, ಪಾತ್ರ ಸರಿಹೊಂದಲ್ಲ ಎಂದಿದ್ದರಂತೆ. ಆ ಕಾರಣಕ್ಕೆ ಆ ಸಿನಿಮಾ ಮಾಡೋದು ಬೇಡ, ಮಾಡಿದ್ರೆ ನಿನ್ನ ತಲೆ ಕಡೀತಿನಿ ಎಂದು ಭಗವಾನ್ʼಗೆ ಎಚ್ಚರಿಸಿದ್ದರಂತೆ ಪಾರ್ವತಮ್ಮ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.