ಇಸ್ಲಾಮಾಬಾದ್: ಭಾರತ(India) ದೊಂದಿಗೆ ಮೇಲ್ ವಿನಿಮಯ ಆರಂಭಿಸಿ ಪಾಕಿಸ್ತಾನ(Pakistan) ಪತ್ರಗಳನ್ನು ಕಳುಹಿಸುವ ನಿಷೇಧವನ್ನು ತೆಗೆದುಹಾಕಿದೆ. ಕಾಶ್ಮೀರ ವಿಷಯ(Kashmir Issue)ದ ಬಗ್ಗೆ ಉದ್ವಿಗ್ನತೆಯ ನಂತರ ಪಾಕಿಸ್ತಾನವು ಸುಮಾರು ಮೂರೂವರೆ ತಿಂಗಳ ಹಿಂದೆ ಭಾರತಕ್ಕೆ ಅಂಚೆ ಕಳುಹಿಸುವುದನ್ನು ನಿಲ್ಲಿಸಿತ್ತು. ಪಾಕಿಸ್ತಾನೀ ನಾಗರಿಕರಿಗೆ ಭಾರತಕ್ಕೆ ಪತ್ರಗಳನ್ನು ಕಳುಹಿಸಲು ಪಾಕಿಸ್ತಾನ ಅವಕಾಶ ನೀಡಿದೆ, ಆದರೆ ಯಾವುದೇ ರೀತಿಯ ಪಾರ್ಸೆಲ್ ಕಳುಹಿಸುವ ನಿಷೇಧ ಇನ್ನೂ ಮುಂದುವರೆದಿದೆ.
ಈ ಬಗ್ಗೆ ಪಾಕಿಸ್ತಾನ ಪೋಸ್ಟ್ ದೇಶದ ಎಲ್ಲಾ ಅಂಚೆ ಕಚೇರಿಗಳಿಗೆ ಔಪಚಾರಿಕ ಸುತ್ತೋಲೆ ಕಳುಹಿಸಿದೆ. ಪಾಕಿಸ್ತಾನದ ನಾಗರಿಕರು ಭಾರತಕ್ಕೆ ಪತ್ರಗಳು, ದಾಖಲಾತಿಗಳು, ಎಕ್ಸ್ಪ್ರೆಸ್ ಪತ್ರಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಆದರೆ ಪಾರ್ಸೆಲ್ಗಳು ಮತ್ತು ಇತರ ಯಾವುದೇ ಸರಕುಗಳನ್ನು ಭಾರತಕ್ಕೆ ಕಳುಹಿಸುವುದನ್ನು ನಿಷೇಧಿಸಲಾಗುವುದು ಎಂದು ಜನರಲ್ ಪೋಸ್ಟ್ ಆಫೀಸ್ ರಾವಲ್ಪಿಂಡಿ ಆಡಳಿತವು 'ಎಕ್ಸ್ಪ್ರೆಸ್ ಟ್ರಿಬ್ಯೂನ್'ಗೆ ತಿಳಿಸಿದೆ.
ತಮ್ಮ ಭಾರತೀಯ ಸಂಬಂಧಿಕರನ್ನು ಸಂಪರ್ಕಿಸಲು ಪತ್ರಗಳನ್ನು ಕಳುಹಿಸಲು ಅವಕಾಶ ನೀಡಬೇಕು ಎಂದು ಪಾಕಿಸ್ತಾನಿ ನಾಗರಿಕರ ನಿರಂತರ ಬೇಡಿಕೆ ಇತ್ತು. ಸೇವೆ ಪುನರಾರಂಭದೊಂದಿಗೆ ಅಂಚೆ ಕಚೇರಿಗಳಿಗೆ ಭಾರತಕ್ಕೆ ಕಳುಹಿಸಲು ನೂರಾರು ಪತ್ರಗಳು ಬಂದವು ಎಂದು ಆಡಳಿತ ಹೇಳಿದೆ.