ನವದೆಹಲಿ: ಟೀಮ್ ಇಂಡಿಯಾ 2011 ರಲ್ಲಿ ವಿಶ್ವಕಪ್ ಗೆದ್ದಿದೆ, ಯಾವುದೇ ಭಾರತೀಯ ಅಭಿಮಾನಿ ತನ್ನ ಅಂತಿಮ ಪಂದ್ಯವನ್ನು ಮರೆಯಲು ಸಾಧ್ಯವಿಲ್ಲ. ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಎಂ.ಎಸ್.ಧೋನಿ (MS Dhoni) 91 ರನ್ ಗಳಿಸಿದರು. ಅವರಲ್ಲದೆ, ಗೌತಮ್ ಗಂಭೀರ್(Gautam Gambhir) ಅವರ 97 ರನ್ಗಳ ಇನ್ನಿಂಗ್ಸ್ ಅನ್ನು ಸ್ಮರಣೀಯವೆಂದು ಪರಿಗಣಿಸಲಾಗಿದೆ. ಗಂಭೀರ್ ಅವರ ಇನ್ನಿಂಗ್ಸ್ನ ಮಹತ್ವದ ಕೊಡುಗೆಯಿಂದಾಗಿ 1983 ರ ನಂತರ ಎರಡನೇ ಬಾರಿಗೆ ವಿಶ್ವಕಪ್ ಭದ್ರಪಡಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಅವರು ಒಂದು ಶತಕವನ್ನು ಹೇಗೆ ಕಳೆದುಕೊಂಡರು ಎಂಬುದನ್ನು ಗಂಭೀರ್ ಇತ್ತೀಚೆಗೆ ಬಹಿರಂಗಪಡಿಸಿದರು. ಅವರ ಪ್ರಕಾರ, ಕ್ಯಾಪ್ಟನ್ ಧೋನಿ ಗಂಭೀರ್ ಅವರಿಗೆ ಒಂದು ವಿಷಯವನ್ನು ನೆನಪಿಸಿದರು, ಇದರಿಂದಾಗಿ ಅವರು ತಮ್ಮ ಲಯವನ್ನು ಕಳೆದುಕೊಂಡು ಔಟ್ ಆಗಿದ್ದರು ಎಂದು ಹೇಳಿಕೊಂಡಿದ್ದಾರೆ.
ಧೋನಿ ಜೋಡಿಯಿಂದ ತಂಡಕ್ಕೆ ಬಲ:
ಈ ಪಂದ್ಯದಲ್ಲಿ ಟೀಮ್ ಇಂಡಿಯಾ 275 ರನ್ಗಳ ಗುರಿಯನ್ನು ಬೆನ್ನಟ್ಟುತ್ತಿತ್ತು. ಮೈದಾನದಲ್ಲಿ ಗಂಭೀರ್ ಅವರನ್ನು ಬೆಂಬಲಿಸಲು ಕ್ಯಾಪ್ಟನ್ ಧೋನಿ ಬಂದಾಗ. ಆ ಸಮಯದಲ್ಲಿ ಟೀಮ್ ಇಂಡಿಯಾದ ಸ್ಕೋರ್ ಮೂರು ವಿಕೆಟ್ ನಷ್ಟದಲ್ಲಿ 114 ರನ್ ಗಳಿಸಿತ್ತು. ಇದರ ನಂತರ ಇಬ್ಬರೂ ನಾಲ್ಕನೇ ವಿಕೆಟ್ಗೆ 109 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದು ಟೀಮ್ ಇಂಡಿಯಾದ ಗೆಲುವಿಗೆ ಬಲವಾದ ಅಡಿಪಾಯವನ್ನು ಸೃಷ್ಟಿಸಿತು. ಆ ಪಂದ್ಯದಲ್ಲಿ ಗಂಭೀರ್ ಅವರ ಇನ್ನಿಂಗ್ಸ್ ಹೆಚ್ಚು ಮೆಚ್ಚುಗೆ ಗಳಿಸಿತು, ಇದರಲ್ಲಿ ಅವರು ಕೇವಲ ಮೂರು ರನ್ಗಳಿಂದ ಒಂದು ಶತಕವನ್ನು ಕಳೆದುಕೊಂಡರು.
ನಿವೃತ್ತಿಯಾದ ಒಂದು ವರ್ಷದ ನಂತರ ಬಹಿರಂಗ:
2018 ರ ಡಿಸೆಂಬರ್ನಲ್ಲಿ ನಿವೃತ್ತರಾದ ಗೌತಮ್ ಗಂಭೀರ್, 2011 ರಲ್ಲಿ ವಿಶ್ವಕಪ್ ನಲ್ಲಿ ನಾನು ಶತಕ ಬಾರಿಸಲು ಇನ್ನು ಕೇವಲ ಮೂರು ರನ್ ಮಾತ್ರ ಬಾಕಿಯಿದೆ ಎಂದು ಕ್ಯಾಪ್ಟನ್ ಎಂ.ಎಸ್. ಧೋನಿ ನೆನಪಿಸಿದರು. ತದನಂತರ ನನ್ನ ಲಯ ತಪ್ಪಿತು. ದೊಡ್ಡ ಶಾಟ್ ಹೊಡೆಯಲು ಹೋಗಿ ಔಟ್ ಆದೆ. ನಂತರ ಧೋನಿ, ಯುವರಾಜ್ ಸಿಂಗ್ ಅವರೊಂದಿಗೆ ಟೀಮ್ ಇಂಡಿಯಾದ ಗೆಲುವು ಖಚಿತಪಡಿಸಿದರು ಎಂದು ಗಂಭೀರ್ ಈ ವಿಷಯವನ್ನು ಬಹಿರಂಗ ಪಡಿಸಿದರು.
ಅಲ್ಲಿಯವರೆಗೆ ಶತಕ ಗಮನಕ್ಕೆ ಬಂದಿರಲಿಲ್ಲ:
ಸಂದರ್ಶನವೊಂದರಲ್ಲಿ ಗಂಭೀರ್, "2011 ರಲ್ಲಿ ವಿಶ್ವಕಪ್ ನಲ್ಲಿ ನಾನು 97 ರನ್ ಗಳಿಸಿದ ಬಳಿಕ ಏನಾಯಿತು ಎಂದು ನನ್ನನ್ನು ಹೆಚ್ಚಾಗಿ ಕೇಳಲಾಗುತ್ತಿದೆ. ಅದಕ್ಕೆ ನನ್ನ ಪ್ರತಿಕ್ರಿಯೆ 97 ಸ್ಕೋರ್ ತಲುಪುವ ಮೊದಲು ನನ್ನ ಗಮನವು ಶ್ರೀಲಂಕಾದ ಗುರಿಯತ್ತ ಇದ್ದುದರಿಂದ ನನ್ನ ವೈಯಕ್ತಿಕ ಸ್ಕೋರ್ ಬಗ್ಗೆ ನನಗೆ ತಿಳಿದಿರಲಿಲ್ಲ" ಎಂದಿದ್ದಾರೆ.
ಧೋನಿ ಏನು ಹೇಳಿದರು?
"ಆ ಸಮಯದಲ್ಲಿ ಒಂದು ಓವರ್ ಮುಗಿದ ನಂತರ, 'ಮೂರು ರನ್ಗಳು ಉಳಿದಿವೆ, ಮೂರು ರನ್ ಗಳಿಸಿ ಮತ್ತು ನಿಮ್ಮ ಶತಕ ಪೂರ್ಣಗೊಳ್ಳುತ್ತದೆ' ಎಂದು ಧೋನಿ ಹೇಳಿದ್ದರು ಎಂದು ಗಂಭೀರ್ ತಿಳಿಸಿದರು." 97 ರನ್ ಗಳಿಸಿದ ಗಂಭೀರ್. ಯಾರ್ಕರ್ ಚೆಂಡಿಗೆ ಬೋಲ್ಡ್ ಆದರು. ಇದರಿಂದಾಗಿ ಗೌತಮ್ ಗಂಭೀರ್ ಅವರ ಶತಕ ತಪ್ಪಿಹೋಯಿತು.
ನಾಯಕನ ಆ ಮಾತುಗಳ ನಂತರ ನಾನು ನನ್ನ ವೈಯಕ್ತಿಕ ಸ್ಕೋರ್ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ ಎಂದ ಗಂಭೀರ್, "ನಿಮ್ಮ ಮನಸ್ಸು ಇದ್ದಕ್ಕಿದ್ದಂತೆ ವೈಯಕ್ತಿಕ ಸಾಧನೆ, ವೈಯಕ್ತಿಕ ಸ್ಕೋರ್ ಕಡೆಗೆ ಚಲಿಸಿದಾಗ, ನಿಮ್ಮ ರಕ್ತ ವೇಗವಾಗಿ ಚಲಿಸಲು ಪ್ರಾರಂಭಿಸುತ್ತದೆ. ಆ ಕ್ಷಣದ ಮೊದಲು ನನ್ನ ಗುರಿ ಶ್ರೀಲಂಕಾ ಎದುರು ಗುರಿಯನ್ನು ಮಾತ್ರ ಸಾಧಿಸುವುದು. ನಾನು ಅದೇ ಮನಸ್ಥಿತಿಯಲ್ಲಿ ಇದ್ದಿದ್ದರೆ, ನನ್ನ ಶತಕವನ್ನು ಸುಲಭವಾಗಿ ಸಾಧಿಸಬಹುದಿತ್ತು" ಎಂದು ಅವರು ಹೇಳಿದರು.
ಇಂದಿಗೂ ಕಾಡುವ ಆ 3 ರನ್:
"2011 ರ ವಿಶ್ವಕಪ್ ನಲ್ಲಿ ನಾನು ಶತಕ ಬಾರಿಸಲು ಕೇವಲ 3 ರನ್ ದೂರದಲ್ಲಿದ್ದೆ. ಆದರೆ ಅದು ನನ್ನ ಮನಸ್ಸಿಗೆ ಬಂದ ಕೂಡಲೇ ನನ್ನ ಮನಸ್ಸಿನಲ್ಲಿ, ಒಂದು ಶತಕವನ್ನು ಪೂರೈಸುವ ತವಕ ಹೆಚ್ಚಾಯಿತು. ಅದಕ್ಕಾಗಿಯೇ ನಾವು ವರ್ತಮಾನದಲ್ಲಿ ಉಳಿಯುವುದು ಬಹಳ ಮುಖ್ಯ. ನಾನು ಮತ್ತೆ ಪೆವಿಲಿಯನ್ಗೆ ಹಿಂತಿರುಗುತ್ತಿದ್ದಾಗ. ಈ ಮೂರು ರನ್ಗಳು ನನ್ನನ್ನು ಜೀವಿತಾವಧಿಯಲ್ಲಿ ಕಾಡುತ್ತವೆ ಎಂದು ನಾನು ಹೇಳಿದೆ. ಹೌದು, ಅದು ಖಂಡಿತವಾಯಿಯೂ ಸತ್ಯ. ಯಾಕೆ ಆ ಮೂರು ರನ್ ಗಳಿಸಲು ನಿಮಗೆ ಸಾಧ್ಯವಾಗಲಿಲ್ಲ ಎಂದು ಇಂದಿಗೂ ಜನರು ನನ್ನನ್ನು ಕೇಳುತ್ತಾರೆ. ಅದು ನನ್ನನ್ನೂ ಎಷ್ಟೋ ಬಾರಿ ಕಾಡುತ್ತದೆ" ಎಂದು ಗಂಭೀರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
(With IANS Input)