ಮೊಟ್ಟೆ ತಿನ್ನುವ ಮಕ್ಕಳು ನರಭಕ್ಷಕರಾಗಬಹುದು- ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

 ಮೊಟ್ಟೆ ತಿನ್ನುವ ಮಕ್ಕಳು ಮುಂದೆ ನರಭಕ್ಷಕರಾಗಬಹುದು ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕ ಗೋಪಾಲ್ ಭಾರ್ಗವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.   

Last Updated : Oct 31, 2019, 05:45 PM IST
ಮೊಟ್ಟೆ ತಿನ್ನುವ ಮಕ್ಕಳು ನರಭಕ್ಷಕರಾಗಬಹುದು- ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ   title=
Photo courtesy: ANI

ನವದೆಹಲಿ: ಮೊಟ್ಟೆ ತಿನ್ನುವ ಮಕ್ಕಳು ಮುಂದೆ ನರಭಕ್ಷಕರಾಗಬಹುದು ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕ ಗೋಪಾಲ್ ಭಾರ್ಗವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.   

ಮಧ್ಯಪ್ರದೇಶದ ಅಂಗನವಾಡಿಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆಯನ್ನು ಟೀಕಿಸಿದ ಬಿಜೆಪಿ ನಾಯಕ ಗೋಪಾಲ್ ಭಾರ್ಗವ್ ' ಈ ನಿರ್ಧಾರ ಜನರ ನಂಬಿಕೆ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ಹೇಳಿದ್ದಾರೆ. ಈ ಸರ್ಕಾರದಿಂದ ಇನ್ನೇನು ನಿರೀಕ್ಷಿಸಬಹುದು? ಮಕ್ಕಳಿಗೆ ಮೊಟ್ಟೆಗಳನ್ನು ಕೊಡಿ...ತಿನ್ನದವರಿಗೆ ಒತ್ತಾಯಿಸಿ. ಅವರು ಅದನ್ನು ತಿನ್ನದಿದ್ದರೆ  ಅವರು ಕೋಳಿ, ಮಟನ್ ಆಹಾರವನ್ನು ನೀಡುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ಮಾಂಸಾಹಾರವನ್ನು ಅನುಮತಿಸಲಾಗುವುದಿಲ್ಲ. ನಾವು ಇದನ್ನು ಬಾಲ್ಯದಿಂದಲೇ ತಿನ್ನುತ್ತಿದ್ದರೆ ದೊಡ್ಡವರಾದ ಮೇಲೆ ನಾವು ನರಭಕ್ಷಕರಾಗಬಹುದು 'ಎಂದು ಗೋಪಾಲ್ ಭಾರ್ಗವ ಹೇಳಿದರು. 

ಇನ್ನು ಮುಂದುವರೆದು ತಮ್ಮ ಜಾತಿ ನಿಯಮದ ಪ್ರಕಾರ ಬೆಳ್ಳುಳ್ಳಿ ಮತ್ತು ಈರುಳ್ಳಿಗೂ ನಿರ್ಭಂಧವಿದೆ ಎಂದು ಹೇಳಿದರು. ಮಕ್ಕಳಿಗೆ ಮೊಟ್ಟೆಗಳನ್ನು ಆಹಾರದ ಭಾಗವಾಗಿ ನೀಡುವ ವಿಚಾರವನ್ನು ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಇಮಾರ್ತಿ ದೇವಿ ಪ್ರಸ್ತಾಪಿಸಿದರು. ಇಂತಹ ಆಹಾರ ಹೆಚ್ಚಿನ ಪೌಷ್ಠಿಕಾಂಶವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಆದರೆ ಇದಕ್ಕೆ ಈಗ ಪ್ರತಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ.

'ನಾವು ಅಂತಹ ಯಾವುದೇ ಪ್ರಸ್ತಾಪವನ್ನು ವಿರೋಧಿಸುತ್ತೇವೆ. ಇದು ಜನರ ಧಾರ್ಮಿಕ ನಂಬಿಕೆ ಮತ್ತು ನಂಬಿಕೆಗೆ ಅಡ್ಡಿಯುಂಟುಮಾಡುವ ಪ್ರಯತ್ನ ಎಂದು ನಾನು ಭಾವಿಸುತ್ತೇನೆ ಎಂದು ಕೈಲಾಶ್ ವಿಜಯ ವರ್ಗಿಯಾ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಚಿವೆ ಇಮಾರ್ತಿ ದೇವಿ ಬಿಜೆಪಿ ಪ್ರತಿಭಟಿಸುತ್ತಿದ್ದರೂ ನಾನು ಹೆದರುವುದಿಲ್ಲ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಇರುವ ಬ್ಲಾಕ್‌ಗಳಲ್ಲಿ ಈ ಸೇವೆಯನ್ನು ನೀಡುತ್ತೇವೆ. ಮೊಟ್ಟೆಯಲ್ಲಿ ಅನೇಕ ಪೋಷಕಾಂಶಗಳಿವೆ. ಮೊಟ್ಟೆ ತುಂಬಾ ಆರೋಗ್ಯಕರವಾಗಿರುವುದರಿಂದ ನಾನು ತಿನ್ನುತ್ತೇನೆ' ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದ್ದಾರೆ.
 

Trending News