ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದ ಸ್ಪೆಷಲ್ ಕರೆಕ್ಷನಲ್ ಹೋಂ, ಜಿಲ್ಲಾ ಕಾರಾಗೃಹ ಮತ್ತು ಕುಪ್ವಾರಾ ಮತ್ತು ಕಾರ್ಗಿಲ್ ಜಿಲ್ಲಾ ಕಾರಾಗೃಹಗಳಲ್ಲಿ ದಕ್ಷ ಕಾರ್ಯನಿರ್ವಹಣೆಗಾಗಿ 105 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ.
ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಆಡಳಿತದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ. ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿಡಿಸಿ) ಚುನಾವಣೆ ನಡೆದಿದ್ದು, ಶ್ರೀನಗರದಲ್ಲಿ ಶೇ.98ರಷ್ಟು ಮತದಾನವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾ ಅಧಿಕಾರಿ ಶೈಲೇಂದ್ರ ಕುಮಾರ್ ಮಾತನಾಡಿ, ಪುಲ್ವಾಮಾ ಮತ್ತು ಶೋಪಿಯಾನ್ನಲ್ಲಿ ಕ್ರಮವಾಗಿ ಶೇ.86 ಮತ್ತು ಶೇ.85ರಷ್ಟು ಮತದಾನ ನಡೆದಿದೆ ಎಂದು ತಿಳಿಸಿದ್ದಾರೆ.