PM Modi ಜನಪ್ರಿಯತೆಗೆ ಕಾರಣ ಏನು? Zee News Matrize Opinion Poll ನಲ್ಲಿ ಬಹಿರಂಗಗೊಂಡ ಅಂಶ ಇದು!

Zee-Matrize Opinion Poll: ಜೀ ಸುದ್ದಿವಾಹಿನಿ ಮತ್ತು ಮ್ಯಾಟ್ಟ್ರಿಜ್ ನಡೆಸಿರುವ ಸಮೀಕ್ಷೆಯಲ್ಲಿ  ಪ್ರಧಾನಿ ಮೋದಿ (PM Modi Popularity) ಜನಪ್ರಿಯತೆಯ ಕುರಿತು ವಿವಿಧ ರೀತಿಯ ಪ್ರತಿಕ್ರಿಯೆಗಳು ಹೊರಹೊಮ್ಮಿವೆ. ಕೆಲವರು ಪ್ರಧಾನಿ ಮೋದಿ ಕೈಗೊಂಡ ಕಲ್ಯಾಣ ಯೋಜನೆಗಳ ಹಿನ್ನೆಲೆ ಅವರನ್ನು ಜನಪ್ರಿಯ ನಾಯಕ ಎಂದು ಕರೆದರೆ, ಇನ್ನು ಕೆಲವರು ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಿಯನ್ನು ಜನಪ್ರಿಯ ನಾಯಕ ಎಂದು ಹೇಳುತ್ತಿದ್ದಾರೆ. (Political News In Kannada)  

Written by - Nitin Tabib | Last Updated : Mar 15, 2024, 09:17 PM IST
  • ಈ ಅಭಿಪ್ರಾಯ ಸಂಗ್ರಹಣೆಯಲ್ಲಿ 14 ಸಾವಿರದ 7 ನೂರ 99 ಮೊದಲ ಬಾರಿಗೆ ಮತದಾರರ ಅಭಿಪ್ರಾಯ ಕೂಡ ಶಾಮಿಲಾಗಿವೆ.
  • ಅಭಿಪ್ರಾಯ ಸಂಗ್ರಹದ ಫಲಿತಾಂಶಗಳಲ್ಲಿನ ಮಾರ್ಜಿನ್ ಆಫ್ ಎರರ್ ಪ್ಲಸ್ ಅಥವಾ ಮೈನಸ್ ಶೇ. 2 ಆಗಿದೆ.
  • ಇವು ಚುನಾವಣಾ ಫಲಿತಾಂಶಗಳಲ್ಲ, ಕೇವಲ ಅಭಿಪ್ರಾಯ ಸಂಗ್ರಹ.
  • ಈ ಅಭಿಪ್ರಾಯ ಸಂಗ್ರಹವನ್ನು ಯಾವುದೇ ರೀತಿಯಲ್ಲಿ ಚುನಾವಣೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ ಎಂದು ಪರಿಗಣಿಸಬಾರದು.
PM Modi ಜನಪ್ರಿಯತೆಗೆ ಕಾರಣ ಏನು? Zee News Matrize Opinion Poll ನಲ್ಲಿ ಬಹಿರಂಗಗೊಂಡ ಅಂಶ ಇದು! title=

Lok Sabha Elections 2024 ಸಂಬಂಧಿಸಿದಂತೆ ಅತಿ ದೊಡ್ಡ ಅಭಿಪ್ರಾಯ ಸಂಗ್ರಹ ನಡೆಸಲಾಗಿದ್ದು, ಅದರ ಅಂಕಿಅಂಶಗಳು ಬಹಿರಂಗಗೊಂಡಿವೆ. ಇನ್ನೊಂದೆಡೆ ಶನಿವಾರ ಚುನಾವಣಾ ದಿನಾಂಕಗಳು ಕೂಡ ಘೋಷಣೆಯಾಗುವ ಸಾಧ್ಯತೆಯನ್ನು ವರ್ತಿಸಲಾಗಿದೆ (Survey On PM Modi Popularity). ಆದರೆ ಇದಕ್ಕೂ ಮುನ್ನವೇ ZEE NEWS ಗಾಗಿ MATRIZE ಸಂಸ್ಥೆ ಅಭಿಪ್ರಾಯ ಸಂಗ್ರಹವನ್ನು ನಡೆಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಶ್ರೀನಗರಕ್ಕೆ ಭೇಟಿ ನೀಡಿದ ನಂತರ ಮತ್ತು ದೇಶಾದ್ಯಂತ ಸಿಎಎ ಜಾರಿಗೊಳಿಸಿದ ನಂತರ ಈ ಅಭಿಪ್ರಾಯ ಸಂಗ್ರಹವನ್ನು ನಡೆಸಲಾಗಿದೆ. ಈ ಅಭಿಪ್ರಾಯ ಸಂಗ್ರಹವನ್ನು ಫೆಬ್ರವರಿ 27 ಮತ್ತು ಮಾರ್ಚ್ 13 ರ ನಡುವೆ ನಡೆಸಲಾಗಿದೆ. ಇದರಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆಗೆ ದೊಡ್ಡ ಕಾರಣ ಏನು ಅಂತ ಸಾರ್ವಜನಿಕರೂ ಉತ್ತರ ನೀಡಿದ್ದಾರೆ. (Lok Sabha Elections News 2024)

ವಾಸ್ತವದಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಗೆ ಕಾರಣವೇನು? ಈ ಬಗ್ಗೆ ವಿವಿಧ ರೀತಿಯ ಪ್ರತಿಕ್ರಿಯೆಗಳು ಹೊರಹೊಮ್ಮಿವೆ. ಕೆಲವರು ಪ್ರಧಾನಿ ಮೋದಿ ಮಾಡಿರುವ ಕಲ್ಯಾಣ ಯೋಜನೆಗಳಿಂದಾಗಿ ಅವರನ್ನು ಜನಪ್ರಿಯ ನಾಯಕ ಎಂದು ಕರೆದರೆ, ಇನ್ನು ಕೆಲವರು ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಿಯನ್ನು ಜನಪ್ರಿಯ ನಾಯಕ ಎಂದು ಕರೆಯುತ್ತಿದ್ದಾರೆ. ಇನ್ನೂ ಕೆಒಲವರು ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ಮೋದಿ ತನ್ನ ನಿಷ್ಪಾಪ ಗುರುತಿನ ಕಾರಣ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿಯವರ ಜನಪ್ರಿಯತೆಗೆ ಕಾರಣವೇನು? (Why PM Modi Is more Popular)
ಈ ಕುರಿತು ಉತ್ತರ ನೀಡಿರುವ ದೇಶದ ಸಾರವಜನಿಕರು, 
- ಶೇ. 41 ರಷ್ಟು ಜನರು ಪ್ರಧಾನಿ ಮೋದಿ ತಮ್ಮ ಕಲ್ಯಾಣ ಯೋಜನೆಗಳಿಂದ ಜನಪ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ.
- ಶೇ. 18 ರಷ್ಟು ಜನರು ರಾಮಮಂದಿರ ನಿರ್ಮಾಣವನ್ನು ಅವರ ಜನಪ್ರಿಯತೆಗೆ ಕಾರಣ ಎಂದು ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ. 
- ಶೇ. 12ರಷ್ಟು ಜನರ ಪ್ರಕಾರ, ಪ್ರಧಾನಿ ಮೋದಿಯವರ ಜನಪ್ರಿಯತೆಗೆ ರಾಷ್ಟ್ರವಾದ ಕಾರಣ.
- ಶೇ. 22 ರಷ್ಟು ಜನರು ಮೋದಿ ತಮ್ಮ ನಿಷ್ಪಾಪ ಇಮೇಜ್‌ನಿಂದ ಹೆಚ್ಚು ಜನಪ್ರಿಯರಾಗಿದ್ದಾರೆ ಹೇಳಿದ್ದಾರೆ.
- ಶೇ 7ರಷ್ಟು ಜನರು ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಬೇರೆ ಹಲವು ಕಾರಣಗಳಿವೆ ಎಂದು ಹೇಳಿದ್ದಾರೆ. 

ಈ ಸಮೀಕ್ಷೆಯಲ್ಲಿ ಲೋಕಸಭೆಯ 543 ಸ್ಥಾನಗಳ ಕುರಿತು 1 ಲಕ್ಷದ 13 ಸಾವಿರದ ಎಂಟುನೂರ ನಲವತ್ತಮೂರು ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ 61 ಸಾವಿರದ ನಾನೂರ 75 ಪುರುಷರು ಮತ್ತು 37 ಸಾವಿರದ 5 ನೂರ 68 ಮಹಿಳೆಯರು ಶಾಮೀಲಾಗಿದ್ದಾರೆ.

ಇದನ್ನೂ ಓದಿ-ಸಿವಿಲ್ ಎಂಜಿನಿಯರಿಂಗ್ ನಿಂದ ರಾಜಕಾರಣದವರೆಗೆ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು ನಡೆದು ಬಂದ ಹಾದಿ

ZEE NEWS & MATRIZE ನ ಸಮೀಕ್ಷೆಯಲ್ಲಿ, ಸಾರ್ವಜನಿಗರಿಗೆ ಈ ಪ್ರಶ್ನೆ ಕೂಡ ಕೇಳಲಾಗಿದೆ
ಇಂದು ಚುನಾವಣೆ ನಡೆದರೆ ಪ್ರಮುಖ ವಿಷಯ ಯಾವುದು ? (Biggest issue of lok sabha elections 2024)
- ಶೇ. 56 ರಷ್ಟು ಜನರು ಪ್ರಧಾನಿ ಅಭ್ಯರ್ಥಿಯೇ ತಮಗೆ ಪ್ರಮುಖ ವಿಷಯ ಎಂದು ನಂಬಿದ್ದಾರೆ.
-ಶೇ.  17 ರಷ್ಟು ಜನರು ಕೇಂದ್ರದ ಯೋಜನೆಗಳನ್ನು ಪ್ರಮುಖ ಚುನಾವಣಾ ವಿಷಯವೆಂದು ಪರಿಗಣಿಸುತ್ತಾರೆ.
- ಶೇ. 4 ರಷ್ಟು ಜನರಿಗೆ ಹಣದುಬ್ಬರವು ಒಂದು ದೊಡ್ಡ ಅಂಶವಾಗಿದೆ ಎಂದು ಭಾವಿಸುತ್ತಾರೆ.
- ಶೇ. 8 ರಷ್ಟು ಜನರು ನಿರುದ್ಯೋಗವನ್ನು ದೊಡ್ಡ ಸಮಸ್ಯೆ ಎಂದು ಹೇಳುತ್ತಾರೆ.
- ಶೇ. 7 ರಷ್ಟು ಜನರು ತಮ್ಮ ಸಂಸದರ ಕೆಲಸವನ್ನು ಪರಿಗಣಿಸುವುದಾಗಿ ಹೇಳಿದರೆ ಮತ್ತು ಶೇ. 8 ರಷ್ಟು ಜನರು ಇತರ ಕಾರಣಗಳನ್ನು ಚುನಾವಣೆಯ ಪ್ರಮುಖ ವಿಷಯಗಳಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ-ಪಕ್ಷದ ನಾಯಕರ-ಜನರ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ, 3 ಲಕ್ಷ ಮತಗಳ ಅಂತರದಿಂದ ಗೆಲ್ಲುವ ನಂಬಿಕೆಯಿದೆ: ಸಚಿವ ಪ್ರಹ್ಲಾದ ಜೋಶಿ

ಈ ಅಭಿಪ್ರಾಯ ಸಂಗ್ರಹಣೆಯಲ್ಲಿ 14 ಸಾವಿರದ 7 ನೂರ 99 ಮೊದಲ ಬಾರಿಗೆ ಮತದಾರರ ಅಭಿಪ್ರಾಯ ಕೂಡ ಶಾಮಿಲಾಗಿವೆ.  ಅಭಿಪ್ರಾಯ ಸಂಗ್ರಹದ ಫಲಿತಾಂಶಗಳಲ್ಲಿನ ಮಾರ್ಜಿನ್ ಆಫ್ ಎರರ್ ಪ್ಲಸ್ ಅಥವಾ ಮೈನಸ್ ಶೇ. 2 ಆಗಿದೆ. ಇವು ಚುನಾವಣಾ ಫಲಿತಾಂಶಗಳಲ್ಲ, ಕೇವಲ ಅಭಿಪ್ರಾಯ ಸಂಗ್ರಹ. ಈ ಅಭಿಪ್ರಾಯ ಸಂಗ್ರಹವನ್ನು ಯಾವುದೇ ರೀತಿಯಲ್ಲಿ ಚುನಾವಣೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ ಎಂದು ಪರಿಗಣಿಸಬಾರದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News