ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಲೀಡ್

ಇನ್ನು ಕೆಲ ದಿನಗಳಲ್ಲೇ ಎಫ್ಎಸ್ಎಲ್ ಸಂಸ್ಥೆ ಗೌರಿ ಹತ್ಯೆ ಪ್ರಕರಣದ ಪರಿಶೀಲನಾ ವರದಿಯನ್ನು ಎಸ್ಐಟಿ ಗೆ ನೀಡಲಿದೆ ಎಂದು ಎಸ್ಐಟಿ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

Last Updated : Sep 15, 2017, 10:53 AM IST
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಲೀಡ್ title=

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣ ಕುರಿತಂತೆ ಎಸ್ಐಟಿ ತಂಡಕ್ಕೆ ಕೊನೆಗೂ ಒಂದು ದೊಡ್ಡ ಸುಳಿವು ದೊರೆತಿದೆ. ಈ ಕುರಿತಂತೆ ಎಫ್ಎಸ್ಎಲ್ ಎಂಬ ಖಾಸಗಿ ಸಂಸ್ಥೆಯೊಂದು ನಡಿಸುತ್ತಿರುವ ಪರಿಶೀಲನೆಯಲ್ಲಿ ಸಿಸಿಟಿವಿಗಳ ವಿಡಿಯೋಗಳನ್ನು ಎನಾನ್ಸ್ ಮಾಡಿ ಪರಿಶೀಲಿಸಿದಾಗ ಸುಳಿವು ಪತ್ತೆಯಾಗಿದೆ. 

ಇನ್ನು ಕೆಲ ದಿನಗಳಲ್ಲೇ ಎಫ್ಎಸ್ಎಲ್ ಸಂಸ್ಥೆ ಗೌರಿ ಹತ್ಯೆ ಪ್ರಕರಣದ ಪರಿಶೀಲನಾ ವರದಿಯನ್ನು ಎಸ್ಐಟಿ ಗೆ ನೀಡಲಿದೆ ಎಂದು ಎಸ್ಐಟಿ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

ಆರೋಪಿಗಳು ಗೌರಿಯ ಮನೆ ಬಳಿ ಓಡಾಡಿರುವುದು ವಿಡಿಯೋ ಎನಾನ್ಸ್ ನಲ್ಲಿ ಕಂಡು ಬಂದಿದೆ. ವೈಟ್ ಶರ್ಟ್, ಬ್ಲಾಕ್ ಹೆಲ್ಮೆಟ್ ಹಾಕಿದ್ದ ಹಂತಕರು ಬೈಕ್ ನಲ್ಲಿ ಬಂದು ವಾಚ್ ಮಾಡಿರುವುದು ಪತ್ತೆಯಾಗಿದೆ. ಗೌರಿ ಕೊಲೆಯಾದ ದಿನ ಕೃತ್ಯಕ್ಕೂ ಮೊದಲೇ ಎರಡು ಬಾರಿ ಗೌರಿ ಲಂಕೇಶ್ ಮನೆ ಬಳಿ ಬಂದು ಹೋಗಿದ್ದಾರೆ. 

ಏರೀಯಾದ ಬೇರೆ ಬೇರೆ ಸಿಸಿಟಿವಿ ಪರಿಶೀಲನೆ ವೇಳೆಯೂ ಈ ಬೈಕ್ ಪತ್ತೆಯಾಗಿದ್ದು, ಹಂತಕರು ಗೌರಿ ಲಂಕೇಶ್ ಮನೆಯ ಬಳಿ ಮಧ್ಯಾಹ್ನ 3 ಗಂಟೆಗೆ, ಸಂಜೆ 7 ಗಂಟೆಗೆ ಮತ್ತು ರಾತ್ರಿ 08:05 ಕ್ಕೆ ಬಂದಿರುವುದು ಪತ್ತೆಯಾಗಿದೆ.

ಗೌರಿ ಮನೆಗೆ ಬಂದು ಚಿಕ್ಕ ಗೇಟ್ ತೆಗೆದು ಒಳ ಹೋಗಿ, ತಿರುಗಿ ದೊಡ್ಡ ಗೇಟ್ ತೆಗೆಯೋ ವೇಳೆ ಶೂಟ್ ಮಾಡಿದ ಬಳಿಕ ಆ ಬೈಕ್ ಅಲ್ಲಿಂದ ವಾಪಸ್ಸಾಗಿದೆ. ಅದಾದ ಕೆಲ ನಿಮಿಷದಲ್ಲೇ ಇನ್ನೊಂದು ಬೈಕ್ ಬಂದಿದೆ ಹಾಗೂ ಅದು ಕೇಬಲ್ ರವಿ ಹುಡುಗರ ಬೈಕ್ ಎಂದು ಗುರುತಿಸಲಾಗಿದೆ.

ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್ಐಟಿ ತಂಡ ಸಂಶಯದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಗಿರಿಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆ ನಡೆಸಲಿದ್ದಾರೆ. ನಿನ್ನೆಯಷ್ಟೇ ರಾಮನಗರ ಜೈಲಿನಿಂದ ಬಿಡುಗಡೆಯಾಗಿರುವ ಕುಣಿಗಲ್ ಗಿರಿ ಸಹಚರರು ಗೌರಿ ಹತ್ಯೆಯ ದಿನ ಗೌರಿ ಮನೆಯ ಹತ್ತಿರ ಓಡಾಟ ನಡೆಸಿರುವ ಹಿನ್ನೆಲೆಯಲ್ಲಿ ಆತನ ಕೈವಾಡ ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.

Trending News