ಕ್ಯಾನ್ಸರ್, ತೂಕ ಇಳಿಕೆ, ಹೃದಯದ ಸಮಸ್ಯೆ… ಈ ಮೂರು ಸಮಸ್ಯೆಗೆ ಒಂದೇ ಪರಿಹಾರ ಈ ಕಪ್ಪು ಬೀಜದ ನೀರು!

Chia Seeds Benefits: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಚಿಯಾ ಬೀಜಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹಿಡಿದು ಸೌಂದರ್ಯವನ್ನು ಹೆಚ್ಚಿಸುವವರೆಗೆ ಪ್ರಯೋಜನಗಳನ್ನು ಹೊಂದಿದೆ.

Written by - Bhavishya Shetty | Last Updated : Mar 7, 2024, 09:09 PM IST
    • ಚಿಯಾ ಬೀಜಗಳು ಕೂಡ ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ
    • ಪೋಷಕಾಂಶಗಳಿಂದ ಸಮೃದ್ಧವಾಗಿರುವ ಚಿಯಾ ಬೀಜಗಳು
    • ಚಿಯಾ ಬೀಜಗಳು ಜೀವಕೋಶದ ಹಾನಿಯನ್ನು ತಡೆಯುತ್ತದೆ
ಕ್ಯಾನ್ಸರ್, ತೂಕ ಇಳಿಕೆ, ಹೃದಯದ ಸಮಸ್ಯೆ… ಈ ಮೂರು ಸಮಸ್ಯೆಗೆ ಒಂದೇ ಪರಿಹಾರ ಈ ಕಪ್ಪು ಬೀಜದ ನೀರು! title=
health benefits of chia seeds

Chia Seeds Benefits: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಚಿಯಾ ಬೀಜಗಳು ಕೂಡ ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಚಿಯಾ ಬೀಜವನ್ನು ಕಾಮಕಸ್ತೂರಿ, ತಂಪಿನ ಬೀಜಗಳು ಎಂದೆಲ್ಲಾ ಕರೆಯಲಾಗುತ್ತದೆ.

ಇದನ್ನೂ ಓದಿ: ಮಹಾ ಶಿವರಾತ್ರಿಯಂದು ನಿಮ್ಮ ಪ್ರೀತಿಪಾತ್ರರಿಗೆ ಈ ಅದ್ಭುತ ಸಂದೇಶಗಳ ಮೂಲಕ ಶುಭಾಶಯ ತಿಳಿಸಿ

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಚಿಯಾ ಬೀಜಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹಿಡಿದು ಸೌಂದರ್ಯವನ್ನು ಹೆಚ್ಚಿಸುವವರೆಗೆ ಪ್ರಯೋಜನಗಳನ್ನು ಹೊಂದಿದೆ.

ಚಿಯಾ ಬೀಜಗಳು ಮೆಕ್ಸಿಕೋದ ಪ್ರಮುಖ ಆಹಾರ. ಇವುಗಳು ಊಹಿಸಿರುವುದಕ್ಕಿಂತ ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಆರೋಗ್ಯಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ.

ಚಿಯಾ ಬೀಜಗಳು ಜೀವಕೋಶದ ಹಾನಿಯನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ವಿವಿಧ ಹೃದಯ ಸಂಬಂಧಿ ಸಮಸ್ಯೆಗಳು ಮಾಯವಾಗುತ್ತವೆ. ಕೆಲವು ರೀತಿಯ ಕ್ಯಾನ್ಸರ್ ಕೂಡ ಚಿಯಾ ಬೀಜಗಳಿಂದ ಮುಕ್ತವಾಗಿದೆ.

ರಾತ್ರಿಯಿಡೀ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ನೀರನ್ನು ಕುಡಿದರೆ ಹಲವಾರು ಪ್ರಯೋಜನಗಳಿವೆ. ಇದು ಮಾನವನ ದೇಹಕ್ಕೆ ಹೆಚ್ಚಿನ ಫೈಬರ್ ಅನ್ನು ಒದಗಿಸುತ್ತದೆ. ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಚಯಾಪಚಯ ಪ್ರಕ್ರಿಯೆಯು ಸಹ ಸುಧಾರಿಸುತ್ತದೆ.

ಚಿಯಾ ಬೀಜಗಳು ದೇಹದ ಆರೋಗ್ಯವನ್ನು ಹೆಚ್ಚಿಸಿ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಇದು ಕ್ವೆರ್ಸೆಟಿನ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತವೆ. ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಚಿಯಾ ಬೀಜಗಳನ್ನು ನೆನೆಸಿದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿನ ಉರಿಯೂತ ಕಡಿಮೆಯಾಗುತ್ತದೆ. ಈ ನೀರನ್ನು ಪ್ರತಿದಿನ ಕುಡಿಯುವುದು ಒಳ್ಳೆಯದು. ಇದರಿಂದ ತೂಕ ನಿರ್ವಹಣೆ ಸಾಧ್ಯವಾಗುತ್ತದೆ.

ಇದನ್ನೂ ಓದಿ: 300 ವರ್ಷಗಳ ಬಳಿಕ ಶಿವರಾತ್ರಿಯಂದೇ ರಾಜಯೋಗ: ಈ ಜನ್ಮರಾಶಿಗೆ ಬಂಗಾರದ ದಿನಗಳು ಆರಂಭ, ಶಿವಾನುಗ್ರಹದಿಂದ ಬದುಕಲ್ಲಿ ಮುನ್ನಡೆಯೇ!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News