Hair fall control tips : ಇತ್ತೀಚಿನ ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರು ಎಲ್ಲರೂ ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಕೂದಲು ಉದುರುತ್ತದೆ ಎಂದು ಹೇಳಿ ಅದಕ್ಕೆ ಮದ್ದು ಮಾಡಲು ಹೊರಡುವ ಮುನ್ನ ಕೂದಲು ಉದುರುವುದಕ್ಕೆ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳಬೇಕು. ಕೂದಲು ಉದುರುವಿಕೆಗೆ ತಲೆಹೊಟ್ಟಿನಂಥಹ ಸರಳ ಕಾರಣಗಳಿಂದ ಹಿಡಿದು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಗಂಭೀರ ಕಾಯಿಲೆಗಳವರೆಗೆ ಹಲವಾರು ವಿಷಯಗಳು ಕಾರಣವಾಗಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ತಲೆಹೊಟ್ಟು ಅಥವಾ ದೇಹದಲ್ಲಿ ಯಾವುದೇ ಪೋಷಕಾಂಶದ ಕೊರತೆಯಿಂದಾಗಿ ಕೂದಲು ಉದುರುವುದಕ್ಕೆ ಆರಂಭವಾಗುತ್ತದೆ. ಕೂದಲು ಉದುರುವುದಕ್ಕೆ ಕಾರಣ ಏನು ಎಂದು ತಿಳಿದುಕೊಂಡರೆ ಆ ಸಮಸ್ಯೆಯನ್ನು ಮನೆಯಲ್ಲಿಯೇ ಬಗೆಹರಿಸಿಕೊಳ್ಳಬಹುದು. ಪ್ರತಿ ಸಮಸ್ಯೆಗೂ ದುಬಾರಿ ಪ್ರಾಡಕ್ಟ್ ಗಳ ಮೊರೆ ಹೋಗಬೇಕೆಂದಿಲ್ಲ. ಸರಳ ಪರಿಹಾರ ಕಾರ್ಯಗಳನ್ನು ಅನುಸರಿಸುವ ಮೂಲಕವೂ ಸಮಸ್ಯೆಯನ್ನು ಬಗೆಹರಿಸಬಹುದು.
ಕೂದಲು ಉದುರುವಿಕೆಗೆ ಈರುಳ್ಳಿ ರಸ :
ಅನೇಕ ಜನರು ಈರುಳ್ಳಿಯನ್ನು ಇಷ್ಟಪಡುವುದಿಲ್ಲ. ತಮ್ಮ ಆಹಾರದಲ್ಲಿಯೂ ಇದನ್ನು ಸೇವಿಸುವುದಿಲ್ಲ. ಆದರೆ ಈರುಳ್ಳಿಯ ಪ್ರಯೋಜನಗಳನ್ನು ಪಡೆಯಬೇಕಾದರೆ ಅದನ್ನು ತಿನ್ನಲೇ ಬೇಕೆಂದಿಲ್ಲ. ಈರುಳ್ಳಿ ರಸದಲ್ಲಿ ಅನೇಕ ವಿಶೇಷ ಅಂಶಗಳು ಕಂಡುಬರುತ್ತವೆ. ಇದು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಈರುಳ್ಳಿ ರಸದಲ್ಲಿರುವ ಗಂಧಕವು ಕೂದಲು ಉದುರುವುದನ್ನು ತಡೆಯುತ್ತದೆ ಮಾತ್ರವಲ್ಲ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ : Hair Care: ಉದ್ದ ಮತ್ತು ದಪ್ಪ ಕೂದಲು ನಿಮ್ಮದಾಗಬೇಕಾ? ಹಾಗಿದ್ರೆ ಈ ನೈಸರ್ಗಿಕ ಪರಿಹಾರಗಳನ್ನು ಅನುಸರಿಸಿ!
ಈರುಳ್ಳಿ ರಸ :
ಕೂದಲು ಉದುರುವಿಕೆಯನ್ನು ತಡೆಗಟ್ಟಲು ಈರುಳ್ಳಿ ರಸ ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಹೇಳಲಾಗುತ್ತದೆ. ಆದರೆ, ಅದನ್ನು ಸರಿಯಾಗಿ ಬಳಸುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಕೂದಲು ಅತಿಯಾಗಿ ಉದುರುತ್ತಿದ್ದರೆ, ಬೆಳಿಗ್ಗೆ ಶಾಂಪೂ ಬಳಸಿ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆದು, ನಂತರ ನಿಮ್ಮ ಕೂದಲನ್ನು ಚೆನ್ನಾಗಿ ಒಣಗಿಸಿ. ನಿಮ್ಮ ಕೂದಲು ಚೆನ್ನಾಗಿ ಒಣಗಿದ ಮೇಲೆ ಈರುಳ್ಳಿ ರಸವನ್ನು ಹತ್ತಿಯ ಉಂಡೆಯ ಸಹಾಯದಿಂದ ನಿಮ್ಮ ಕೂದಲಿನ ಬೇರುಗಳಿಗೆ ಸಂಪೂರ್ಣವಾಗಿ ಹಚ್ಚಿ. ಇದನ್ನು ಕೂದಲಿನ ಮೇಲೆ ಕನಿಷ್ಠ 30 ನಿಮಿಷಗಳ ಕಾಲ ಹಾಗೆಯೆ ಬಿಡಬೇಕು. ನಂತರ ಉತ್ತಮ ಶಾಂಪೂ ಸಹಾಯದಿಂದ ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.
ಈರುಳ್ಳಿ ರಸವನ್ನು ತೆಗೆಯುವುದು ಹೇಗೆ ? :
ಈರುಳ್ಳಿ ರಸವನ್ನು ಹೊರತೆಗೆಯುವುದು ನಿಮಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ನೀವು ಸರಿಯಾದ ವಿಧಾನವನ್ನು ಬಳಸಿದರೆ ಅದು ಕೂಡಾ ಸುಲಭವಾಗಿರುತ್ತದೆ. ಈರುಳ್ಳಿಯನ್ನು ಮಿಕ್ಸರ್ ಗ್ರೈಂಡರ್ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ, ಶುದ್ಧವಾದ ಹತ್ತಿ ಬಟ್ಟೆಯಿಂದ ಹಿಸುಕಿ ರಸವನ್ನು ಬೇರ್ಪಡಿಸಬಹುದು. ರಸವನ್ನು ತೆಗೆದ ನಂತರ, ಅದನ್ನು ಹೆಚ್ಚಿನ ಸಮಯದವರೆಗೆ ಇಡಬೇಡಿ. ರಸವನ್ನು ತೆಗೆದ ಅರ್ಧ ಗಂಟೆಯೊಳಗೆ ಅದನ್ನು ನಿಮ್ಮ ಕೂದಲಿಗೆ ಹಚ್ಚಿ.
ಇದನ್ನೂ ಓದಿ : Waxing Tips: ವ್ಯಾಕ್ಸಿಂಗ್ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು!
ವೈದ್ಯರ ಸಲಹೆ ಅಗತ್ಯ :
ಕೆಲೊಮ್ಮೆ ಗಂಭೀರ ಕಾಯಿಲೆಗಳ ಕಾರಣದಿಂದಲೂ ಕೂದಲು ಉದುರಬಹುದು. ಈ ಕಾಯಿಲೆಗಳಿಂದ ಉಂಟಾಗುವ ಕೂದಲು ಉದುರುವಿಕೆಯನ್ನು ಮನೆಮದ್ದುಗಳಿಂದ ನಿಲ್ಲಿಸಲಾಗುವುದಿಲ್ಲ. ಇದಕ್ಕೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಆಂತರಿಕ ಕಾಯಿಲೆಗೆ ಸಾಧ್ಯವಾದಷ್ಟು ಬೇಗ ಚಿಕಿತ್ಸೆ ನೀಡುವ ಮೂಲಕ ಕೂದಲು ಉದುರುವಿಕೆಯನ್ನು ನಿಲ್ಲಿಸಬಹುದು.
(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.