ವಾಷಿಂಗ್ಟನ್: ಪ್ರತಿಯೊಬ್ಬರೂ ತುಂಬಾ ಅದೃಷ್ಟಶಾಲಿಗಳಲ್ಲ, ಅದೃಷ್ಟ ಅನ್ನೋದು ಕೆಲವರಿಗೆ ಮಾತ್ರ ಇರುತ್ತೆ ಅಂತ ಹೇಳ್ತಾರೆ. ಕೆಲವರ ಅದೃಷ್ಟ ಎಷ್ಟು ಚೆನ್ನಾಗಿರುತ್ತೆ ಅಂದ್ರೆ ಕೇವಲ ಒಂದು ಟ್ವೀಟ್ ಕೂಡ ಅವರ ಊಹೆಗೂ ಮೀರಿದ ಪ್ರತಿಕ್ರಿಯೆ ಪಡೆಯಬಹುದು.
ವಾಸ್ತವವಾಗಿ, ಮಹಿಳೆಯೊಬ್ಬರು ಟ್ವೀಟ್ ಮಾಡುವ ಮೂಲಕ ರುಚಿಕರವಾದ ಚಿಕನ್ ಸ್ಯಾಂಡ್‌ವಿಚ್‌ಗಳ ಅನ್ನು ಜೀವಿತಾವಧಿ ಉಚಿತವಾಗಿ ತಿನ್ನುವ ಅವಕಾಶ ಪಡೆದಿದ್ದಾರೆ. ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾದಲ್ಲಿ ರೆಸ್ಟೋರೆಂಟ್ ಒಂದರಲ್ಲಿ ರುಚಿಕರ ಚಿಕನ್ ಸ್ಯಾಂಡ್‌ವಿಚ್ ತಿಂದ ಬಳಿಕ ಅಮೆರಿಕದ ಮಹಿಳೆಯೊಬ್ಬರು ಅದನ್ನು ಹೊಗಳಿ ಮಾಡಿದ ಟ್ವೀಟ್ ವೈರಲ್ ಆಗಿದ್ದು, ನಂತರ ಅವರು ಈ ಉಡುಗೊರೆಯನ್ನು ಪಡೆದರು. ಈ ಟ್ವೀಟ್ ಅನ್ನು 24 ವರ್ಷದ ಸಂಗೀತಗಾರರಾದ ಬ್ರೀ ಹಾಲ್ ಮಾಡಿದ್ದಾರೆ.
ಈ ಟ್ವೀಟ್‌ನಿಂದಾಗಿ, ರೋಮಿಂಗ್ ರೂಸ್ಟರ್ ಹೆಸರಿನ ರೆಸ್ಟೋರೆಂಟ್‌ನ ವ್ಯವಹಾರವು ಸಖತ್ ಜಾಸ್ತಿಯಾಗಿದ್ದು, ಜನರು ಆ ರೆಸ್ಟೋರೆಂಟ್‌ನ ವಿಶೇಷ ಕರಿದ ಚಿಕನ್ ಸ್ಯಾಂಡ್‌ವಿಚ್ ತಿನ್ನಲು ಕ್ಯೂ ನಿಲ್ಲುವಂತಾಗಿದೆ. "ನೀವು ಡಿಎಂವಿ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಡಿಸಿ ಯಲ್ಲಿ ರೋಮಿಂಗ್ ರೋಸ್ಟರ್ ರೆಸ್ಟೋರೆಂಟ್‌ನಲ್ಲಿ ಒಮ್ಮೆ ಸವಿಯಬೇಕು" ಎಂದು ಹಾಲ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ರೆಸ್ಟೋರೆಂಟ್‌ನ ಮಾಲೀಕರಲ್ಲಿ ಒಬ್ಬರಾದ ಮೈಕೆಲ್ ಹಬ್ಟೆಮರಿಯಮ್ ಇತ್ತೀಚೆಗೆ ತಮ್ಮ ರೆಸ್ಟೋರೆಂಟ್‌ನಲ್ಲಿರುವ ಸಭಾಂಗಣದಲ್ಲಿ ನೀವು ಎಂದಿಗೂ ಪಾವತಿಸಬೇಕಾಗಿಲ್ಲ(ಲೈಫ್ ಟೈಮ್ ಫ್ರೀ ಚಿಕನ್ ಸ್ಯಾಂಡ್‌ವಿಚ್) ಎಂದು ಭರವಸೆ ನೀಡಿದ್ದಾರೆ. ಆಗಸ್ಟ್ 31 ರಂದು ಹಾಲ್ ಟ್ವೀಟ್ ನಲ್ಲಿ "ಮೈಕ್ ಇಂದು ರಾತ್ರಿ ನನ್ನನ್ನು ಕರೆದು ಹೃತ್ಪೂರ್ವಕವಾಗಿ ಧನ್ಯವಾದ ಹೇಳಿದರು" ಎಂದು ಬರೆದಿದ್ದಾರೆ. ಅವರ ಅನೇಕ ಅನುಯಾಯಿಗಳು ರೆಸ್ಟೋರೆಂಟ್‌ನ ಆಹಾರವು ತುಂಬಾ ರುಚಿಕರವಾಗಿದೆ ಎಂದು ಹೇಳಿದ್ದಾರೆ.