ಬೆಂಗಳೂರು : ಮಹಾಲಕ್ಷ್ಮೀಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಕೂಡಾ ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಕೆಲವು ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಾನೆ. ಲಕ್ಷ್ಮೀ ದೇವಿಯ ಸ್ವಭಾವ ಚಂಚಲವಾಗಿದೆ. ಲಕ್ಷ್ಮೀ ಎಂದಿಗೂ ಒಂದೇ ಜಾಗದಲ್ಲಿ ಅಥವಾ ಒಂದೇ ಮನೆಯಲ್ಲಿ ಕುಳಿತು ಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಪೂಜೆ ಪುನಸ್ಕಾರಗಳನ್ನು ಮಾಡುವ ಮೂಲಕ ಅವಳ ಕೃಪೆಗೆ ಪಾತ್ರರಾಗುವ ಎಲ್ಲಾ ಪ್ರಯತ್ನವನ್ನು ಮನುಷ್ಯರು ಮಾಡುತ್ತಾರೆ. ಅದರಲ್ಲಿ ಒಂದು ಕವಡೆ. ಕವಡೆ ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ.
ಸಮುದ್ರ ಮಂಥನದ ಸಮಯದಲ್ಲಿ ಲಕ್ಷ್ಮೀ ಸಮುದ್ರದ ಒಡಲಿನಿಂದ ಹೊರ ಬರುತ್ತಾಳೆ, ಕವಡೆ ಕೂಡಾ ಸಮುದ್ರದಲ್ಲಿಯೇ ಸಿಗುತ್ತದೆ. ಆದ್ದರಿಂದ ಲಕ್ಷ್ಮೀ ದೇವಿಗೆ ಕವಡೆಗಳೆಂದರೆ ತುಂಬಾ ಪ್ರಿಯವಾದುದು. ಮನೆಯಲ್ಲಿ ಕವಡೆಗಳನ್ನು ಇಡುವುದರಿಂದ ಲಕ್ಷ್ಮೀದೇವಿಯು ಪ್ರಸನ್ನಳಾಗುತ್ತಾಳೆ.ಮನೆಯಲ್ಲಿ ಕವಡೆಗಳನ್ನು ಇಡುವುದರಿಂದ ಆಗುವ ಪ್ರಯೋಜನಗಳು ಮತ್ತು ಕವಡೆಗಳನ್ನು ಇಡುವ ನಿಯಮಗಳನ್ನು ತಿಳಿಯೋಣ.
ಇದನ್ನೂ ಓದಿ : Vastu Tips: ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವ ಉಪ್ಪು? ತುಂಬಾ ಶಕ್ತಿ ಹೊಂದಿದೆ!
ಶುಕ್ರವಾರದಂದು ಕವಡೆಗಳ ಈ ಪರಿಹಾರ ಮಾಡಿ :
ಮನೆಯಲ್ಲಿ ಕವಡೆಗಳನ್ನು ಇಡುವುದು ತುಂಬಾ ಮಂಗಳಕರ.ಇವುಗಳನ್ನು ಮನೆಯಲ್ಲಿ ಇಡುವುದರಿಂದ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ಕವಡೆ ತನ್ನ ಕಡೆಗೆ ಹಣವನ್ನು ಆಕರ್ಷಿಸುತ್ತದೆ.
ಮನೆಯ ಮುಖ್ಯ ದ್ವಾರದಲ್ಲಿ ಕವಡೆಗಳನ್ನು ನೇತು ಹಾಕುವುದು ಕೂಡ ಮಂಗಳಕರ. ಇವುಗಳನ್ನು ಕೆಂಪು ಬಟ್ಟೆಯಲ್ಲಿ 7-7 ಜೋಡಿಯಾಗಿ ಕಟ್ಟಿ ಬಾಗಿಲಿನ ಹೊರಗೆ ನೇತು ಹಾಕಬಹುದು. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ನೆಲೆಯುವಂತೆ ಮಾಡುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಇರುವುದಿಲ್ಲ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪೂಜೆಯ ಸಮಯದಲ್ಲಿ ಕವಡೆಗಳನ್ನು ಬಳಸಬೇಕು. ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ಕವಡೆಗಳನ್ನು ಅರ್ಪಿಸಬೇಕು. ಇದರೊಂದಿಗೆ, ಲಕ್ಷ್ಮಿ ದೇವಿಯು ಸಂತೋಷವಾಗುತ್ತಾಳೆ, ಮಾತ್ರವಲ್ಲ ಮನೆಯಲ್ಲಿ ಸಂತೋಷ, ಸಮೃದ್ಧಿ ಹರಿದು ಬರುತ್ತದೆ.
ಇದನ್ನೂ ಓದಿ : Mauni Amavasya 2024: ಮೌನಿ ಅಮಾವಾಸ್ಯೆಯಂದು ಅದ್ಭುತ ಯೋಗ, ನಾಲ್ಕು ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ
ಕವಡೆಗಳನ್ನು ತಿಜೋರಿಯಲ್ಲಿ ಇಡುವುದು ಸಹ ಮಂಗಳಕರವಾಗಿದೆ. 9 ಕವಡೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ತಿಜೋರಿಯಲ್ಲಿ ಅಥವಾ ಹಣ ಇಡುವ ಸ್ಥಳದಲ್ಲಿ ಇರಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿನ ಸಂಪತ್ತು ಹೆಚ್ಚುತ್ತದೆ ಮತ್ತು ಬೊಕ್ಕಸ ಕೂಡಾ ಖಾಲಿಯಾಗುವುದಿಲ್ಲ.
ಶುಕ್ರವಾರವು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಈ ದಿನ, 11 ಕವಡೆಗಳನ್ನು ತೆಗೆದುಕೊಂಡು ಹಳದಿ ಬಟ್ಟೆಯಲ್ಲಿ ಕಟ್ಟಿ ಮನೆಯ ಉತ್ತರ ದಿಕ್ಕಿನಲ್ಲಿ ಇರಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣ ಸಂಗ್ರಹವಾಗುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವೂ ಸಿಗುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.