Smartphone Battery Life: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಹೆಚ್ಚು ಬಳಸುವ ಸಾಧನವಾಗಿದೆ. ಯಾರೇ ಆಗಲಿ ತಮ್ಮ ಹೆಚ್ಚಿನ ಸಮಯವನ್ನು ಈ ಸ್ಮಾರ್ಟ್ ಫೋನ್ ನೊಂದಿಗೆಯೇ ಕಳೆಯುತ್ತಾರೆ. ವೈಯಕ್ತಿಕ ಮತ್ತು ವೃತ್ತಿಪರ ಕೆಲಸಕ್ಕೆ ಫೋನ್ ಅಗತ್ಯವಿದೆ. ನಿರಂತರ ಬಳಕೆಯಿಂದಾಗಿ ಫೋನ್ ಬ್ಯಾಟರಿ ಬೇಗನೆ ಡಿಸ್ಚಾರ್ಜ್ ಆಗುತ್ತದೆ. ನಿಮ್ಮ ಫೋನ್ನ ಬ್ಯಾಟರಿ ಬೇಗನೆ ಖಾಲಿಯಾದರೆ, ಕೆಲವು ಸುಲಭ ಸೆಟ್ಟಿಂಗ್ಗಳನ್ನು ಆನ್ ಮಾಡುವ ಮೂಲಕ ಫೋನ್ನ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು.
ಆನ್ ಮಾಡಬೇಕಾದ ಸೆಟ್ಟಿಂಗ್ಗಳು ಇವು :
ಆಟೋ ಬ್ರೈಟ್ ನೆಸ್ : ಸ್ಕ್ರೀನ್ ಬ್ರೈಟ್ ನೆಸ್ ಅನ್ನು ಸ್ವಯಂಚಾಲಿತವಾಗಿ ಹೊಂದಿಸಲು ಆಟೋ ಬ್ರೈಟ್ ನೆಸ್ ಸೆಟ್ಟಿಂಗ್ ಅನ್ನು ಆನ್ ಮಾಡಬಹುದು. ಇದರಿಂದ ಸಾಕಷ್ಟು ಬ್ಯಾಟರಿ ಉಳಿತಾಯವಾಗುತ್ತದೆ.
ಡಾರ್ಕ್ ಮೋಡ್ :ನಿಮ್ಮ ಫೋನ್ ಡಾರ್ಕ್ ಮೋಡ್ ಅನ್ನು ಸಪೋರ್ಟ್ ಮಾಡಿದರೆ ಅದನ್ನು ಆನ್ ಮಾಡಿ. ಇದರಿಂದ ಡಿವೈಸ್ ನಲ್ಲಿನ ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ : Honda Activa Electric ಬುಕಿಂಗ್ ಆರಂಭ! Ola ಮತ್ತು Atherಗೆ ಹುಟ್ಟಿತು ನಡುಕ
ಬ್ಯಾಕ್ ಗ್ರೌಂಡ್ ಅಪ್ಲಿಕೇಶನ್ಗಳನ್ನು ಮುಚ್ಚಿ : ಹೆಚ್ಚು ಬಳಸದೇ ಇರುವ ಅಪ್ಲಿಕೇಶನ್ಗಳು ಬ್ಯಾಕ್ ಗ್ರೌಂಡ್ ನಲ್ಲಿ ಇದ್ದರೆ ಅದನ್ನು ಕ್ಲೋಸ್ ಮಾಡಿ. ಇದು ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡಬಹುದು.
ಲೋಕೇಶನ್ : ಲೋಕೇಶನ್ ಅನ್ನು ಹೆಚ್ಚು ಬಳಸದಿದ್ದರೆ, ಆಫ್ ಮಾಡಿ. ಬ್ಯಾಕ್ ಗ್ರೌಂಡ್ ನಲ್ಲಿ ಆನ್ ಇರುವ ವೈ-ಫೈ ಮತ್ತು ಬ್ಲೂಟೂತ್ ಸೇವೆಗಳನ್ನು ಆಫ್ ಮಾಡಿ.
ಒರಿಜಿನಲ್ ಚಾರ್ಜರ್ ಅನ್ನೇ ಬಳಸಿ:ನಕಲಿ ಚಾರ್ಜರ್ನೊಂದಿಗೆ ಫೋನ್ ಅನ್ನು ಚಾರ್ಜ್ ಮಾಡುವುದರಿಂದ ಬ್ಯಾಟರಿಗೆ ಹಾನಿಯಾಗಬಹುದು. ಯಾವಾಗಲೂ ಫೋನ್ನೊಂದಿಗೆ ಬಂದಿರುವ ಚಾರ್ಜರ್ ಅನ್ನು ಬಳಸಿ.
ಇದನ್ನೂ ಓದಿ : BSNL New Year Offer: ಹೊಸ ವರ್ಷದಲ್ಲಿ 2 ಬೊಂಬಾಟ್ ಅಗ್ಗದ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆಗೊಳಿಸಿದ ಬಿಎಸ್ಎನ್ಎಲ್
ಫೋನ್ ಅತಿಯಾಗಿ ಬಿಸಿಯಾಗದಂತೆ ನೋಡಿಕೊಳ್ಳಿ : ಶಾಖವು ಫೋನ್ನ ಬ್ಯಾಟರಿಯನ್ನು ತ್ವರಿತವಾಗಿ ಖಾಲಿ ಮಾಡುತ್ತದೆ.ಆದ್ದರಿಂದ, ಫೋನ್ ಅನ್ನು ನೇರ ಸೂರ್ಯನ ಬೆಳಕಿನಲ್ಲಿ ಅಥವಾ ಬಿಸಿಯಾದ ಸ್ಥಳದಲ್ಲಿ ಇಡಬೇಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.