Whatsapp: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ಕೇವಲ ವೈಯಕ್ತಿಕ ಚಾಟಿಂಗ್ ಗೆ ಮಾತ್ರ ಸೀಮಿತವಾಗಿಲ್ಲ. ಕೊರೊನಾ ನಂತರದ ದಿನಗಳಲ್ಲಿ ಬಹುತೇಕ ಕಂಪನಿ ಕೆಲಸಗಳಿಗೂ ಕೂಡ ವಾಟ್ಸಾಪ್ ಪ್ರಸಿದ್ದಿಯನ್ನು ಪಡೆದಿದೆ. ಜಗತ್ತಿನಾದ್ಯಂತ ಲಕ್ಷಾಂತರ ಬಳಕೆದಾರರನು ಹೊಂದಿರುವ ವಾಟ್ಸಾಪ್ ಪಠ್ಯ, ಫೋಟೋಗಳು, ವೀಡಿಯೊಗಳು, ಆಡಿಯೊಗಳು ಮತ್ತು ದಾಖಲೆಗಳನ್ನು ಹಂಚಿಕೊಳ್ಳಲು ಸುಲಭ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ. ವಾಟ್ಸಾಪ್ ಸಂದೇಶಗಳನ್ನು ಓದಲು ನೀವು ಅಪ್ಲಿಕೇಶನ್ ಅನ್ನು ಓಪನ್ ಮಾಡಲೇಬೇಕು ಎಂದೇನಿಲ್ಲ. ಇಂದು ನಾವು ನಿಮಗೆ ಅಂತಹ ಒಂದು ಟ್ರಿಕ್ ಅನ್ನು ಹೇಳುತ್ತೇವೆ, ಅದರ ಸಹಾಯದಿಂದ ನೀವು ಅಪ್ಲಿಕೇಶನ್ ಅನ್ನು ತೆರೆಯದೆಯೇ ವಾಟ್ಸಾಪ್ನಲ್ಲಿ ಬರುವ ಸಂದೇಶಗಳನ್ನು ಓದಬಹುದು.
ವಾಟ್ಸಾಪ್ ವಿಜೆಟ್:
ನಿಮ್ಮ ಫೋನ್ನ ಹೋಮ್ ಸ್ಕ್ರೀನ್ಗೆ ನೀವು ವಾಟ್ಸಾಪ್ ವಿಜೆಟ್ಗಳನ್ನು ಸೇರಿಸಬಹುದು. ಈ ವಿಜೆಟ್ ಮೂಲಕ ನೀವು ವಾಟ್ಸಾಪ್ ಅನ್ನು ತೆರೆಯದೆಯೇ ಸಂದೇಶಗಳನ್ನು ಓದಬಹುದು.
ಇದನ್ನೂ ಓದಿ- D2M Technology: ಸಿಮ್ ಕಾರ್ಡ್, ಇಂಟರ್ನೆಟ್ ಎರಡೂ ಇಲ್ಲದೆ ಮೊಬೈಲ್ ನಲ್ಲಿ ನೋಡಬಹುದು live TV
ವಾಟ್ಸಾಪ್ ವಿಜೆಟ್ ಅನ್ನು ಹೋಂ ಸ್ಕ್ರೀನ್ಗೆ ಸೇರಿಸಲು ಈ ಕೆಲಸ ಮಾಡಿ:
>> ಮೊದಲನೆಯದಾಗಿ ನಿಮ್ಮ ಫೋನ್ನಲ್ಲಿ ವಾಟ್ಸಾಪ್ ಅನ್ನು ತೆರೆಯಿರಿ.
>> ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ.
>> ಇದರ ನಂತರ ಸೆಟ್ಟಿಂಗ್ಸ್ ಮೇಲೆ ಟ್ಯಾಪ್ ಮಾಡಿ.
>> ನಂತರ ವಿಜೆಟ್ಸ್ (Widgets) ಮೇಲೆ ಟ್ಯಾಪ್ ಮಾಡಿ.
>> ಇದರ ನಂತರ ವಾಟ್ಸಾಪ್ ವಿಜೆಟ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ನಿಮ್ಮ ಹೋಂ ಪೇಜ್ ನಲ್ಲಿ ಸೆಟ್ ಮಾಡಿ.
ವಾಟ್ಸಾಪ್ ಅಧಿಸೂಚನೆಯ ಮೂಲಕ ಸಂದೇಶಗಳನ್ನು ಓದುವುದು ಹೇಗೆ?
ನೀವು ವಾಟ್ಸಾಪ್ನಲ್ಲಿ ಹೊಸ ಸಂದೇಶವನ್ನು ಸ್ವೀಕರಿಸಿದಾಗ, ನೀವು ಅಧಿಸೂಚನೆಯನ್ನು ಪಡೆಯುತ್ತೀರಿ. ಈ ಅಧಿಸೂಚನೆಯ ಮೇಲೆ ಟ್ಯಾಪ್ ಮಾಡುವ ಮೂಲಕವೂ ನೀವು ವಾಟ್ಸಾಪ್ ತೆರೆಯದೆಯೇ ಸಂದೇಶದ ಕೆಲವು ಪದಗಳನ್ನು ನೋಡಬಹುದು.
ಇದನ್ನೂ ಓದಿ- Incognito ಮೋಡ್ನಲ್ಲಿಯೂ ಬ್ರೌಸಿಂಗ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತಿದೆ ಗೂಗಲ್
1. ನೀವು ವಾಟ್ಸಾಪ್ನಲ್ಲಿ ಹೊಸ ಸಂದೇಶವನ್ನು ಸ್ವೀಕರಿಸಿದಾಗ, ನೀವು ಅಧಿಸೂಚನೆಯನ್ನು ಪಡೆಯುತ್ತೀರಿ.
2. ಈ ಅಧಿಸೂಚನೆಯನ್ನು ಟ್ಯಾಪ್ ಮಾಡಿ.
3. ಇದರ ನಂತರ ಸಂದೇಶವನ್ನು ಓದಲು ಸ್ಕ್ರಾಲ್ ಮಾಡಿ.
ವಾಟ್ಸಾಪ್ನಲ್ಲಿ ಸ್ವೀಕರಿಸಿದ ಸಂದೇಶವು ಚಿಕ್ಕದಾಗಿದ್ದರೆ ಈ ವಿಧಾನವು ಉಪಯುಕ್ತವಾಗಿದೆ. ಸಂದೇಶವು ತುಂಬಾ ಉದ್ದವಾಗಿದ್ದರೆ ನೀವು ಅದನ್ನು ಸಂಪೂರ್ಣವಾಗಿ ಓದಲು ಸಾಧ್ಯವಾಗದಿರಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.