Chamarajanagar: ಕರ್ನಾಟಕದ ಕಟ್ಟೆಕಡೆಯ ಊರಲ್ಲಿ ಹೋರಿ ಬೆದರಿಸುವ ಸಂಭ್ರಮ!

Makar Sankranti special: ಗೋಪಿನಾಥಂ ಗ್ರಾಮದ ಮಾರಿಯಮ್ಮ ದೇಗುಲ‌ದ ಮುಂಭಾಗ ಜಮಾಯಿಸಿದ ಹೊಗೆನಕಲ್, ಆಲಂಬಾಡಿ, ಪುದೂರಿನ‌ ಗ್ರಾಮಸ್ಥರು ಎತ್ತುಗಳಿಗೆ ಬೆದರು ಬೊಂಬೆ ತೋರಿಸಿ ರೊಚ್ಚಿಗೆಬ್ಬಿಸಿ ಕಾದಾಡಿಸಿದ್ದಾರೆ.‌

Written by - Zee Kannada News Desk | Last Updated : Jan 17, 2024, 05:27 PM IST
  • ಕರ್ನಾಟಕದ ಕಟ್ಟಕಡೆಯ ಗ್ರಾಮ ಹನೂರು ತಾಲೂಕಿನ ಗೋಪಿನಾಥಂನಲ್ಲಿ ಸಂಕ್ರಾತಿ ಹಬ್ಬದ ಸಂಭ್ರಮ
  • ಸಂಕ್ರಾತಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸಿ ಸಂಭ್ರಮಪಟ್ಟ ಗೋಪಿನಾಥಂ ಗ್ರಾಮಸ್ಥರು
  • ಹೋರಿ ಬೆದರಿಸುವ ದೃಶ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ ಸುತ್ತಮುತ್ತಲ ಗ್ರಾಮಸ್ಥರು
Chamarajanagar: ಕರ್ನಾಟಕದ ಕಟ್ಟೆಕಡೆಯ ಊರಲ್ಲಿ ಹೋರಿ ಬೆದರಿಸುವ ಸಂಭ್ರಮ!  title=
ಗೋಪಿನಾಥಂನಲ್ಲಿ ಸಂಕ್ರಾತಿ ಹಬ್ಬದ ಸಂಭ್ರಮ

ಚಾಮರಾಜನಗರ: ಕರ್ನಾಟಕದ ಕಟ್ಟಕಡೆಯ ಗ್ರಾಮವಾದ ಹನೂರು ತಾಲೂಕಿನ ಗೋಪಿನಾಥಂನಲ್ಲಿ ಸಂಕ್ರಾತಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸಿ ಗ್ರಾಮಸ್ಥರು ಸಂಭ್ರಮಪಟ್ಟರು. ಸಂಕ್ರಾತಿ ದಿನದಂದು ಕಿಚ್ಚು ಹಾಯಿಸುವ ಸಂಪ್ರದಾಯದಂತೆ ಗೋಪಿನಾಥಂ ಗ್ರಾಮದಲ್ಲಿ ಹೋರಿ ಬೆದರಿಸಲಿದ್ದು, ಯುವಕರು ಸೇರಿದಂತೆ ಹಿರಿಯರು ಕೂಡ ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ.

ಗ್ರಾಮದ ಮಾರಿಯಮ್ಮ ದೇಗುಲ‌ದ ಮುಂಭಾಗ ಜಮಾಯಿಸಿದ ಹೊಗೆನಕಲ್, ಆಲಂಬಾಡಿ, ಪುದೂರಿನ‌ ಗ್ರಾಮಸ್ಥರು ಎತ್ತುಗಳಿಗೆ ಬೆದರು ಬೊಂಬೆ ತೋರಿಸಿ ರೊಚ್ಚಿಗೆಬ್ಬಿಸಿ ಕಾದಾಡಿಸಿದ್ದಾರೆ.‌ ಇಂದು 50 ಎತ್ತುಗಳನ್ನು ಬೆದರಿಸಿದ್ದು, ಎತ್ತುಗಳಿಗೆ ಎಳೆಯುವ ಶಕ್ತಿ ಹೆಚ್ಚಾಗಲಿ, ದುಷ್ಟ ಶಕ್ತಿಗಳು ಹತ್ತಿರ ಸುಳಿಯದಿರಲೆಂದು ಈ ಸಂಪ್ರದಾಯವನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಪ್ರಮಾಣಪತ್ರ ಸಲ್ಲಿಸುವಾಗ ಕ್ರಿಮಿನಲ್‌ ಕೇಸ್‌ಗಳ ಮಾಹಿತಿ ನೀಡಬೇಕು: ಹೈಕೋರ್ಟ್

ಹೋರಿಯ ಎಡ-ಬಲವನ್ನು ಹಗ್ಗದಿಂದ ಹಿಡಿಯುವ 10ಕ್ಕೂ ಹೆಚ್ಚು ಯುವಕರು, ಬೆದರು ಬೊಂಬೆಯನ್ನು ತೋರಿಸಿ ಅದನ್ನು ರೊಚ್ಚಿಗೆಬ್ಬಿಸುತ್ತಾರೆ. 10-12 ಮಂದಿಯ ಹಿಡಿತವನ್ನು ಲೆಕ್ಕಿಸದ ಎತ್ತುಗಳು ಬೆದರು ಬೊಂಬೆಯನ್ನು ತಿವಿದು ಬಿಸಾಕುತ್ತವೆ.

ಇದು ಜಲ್ಲಿಕಟ್ಟಿನಷ್ಟು ಅಪಾಯಕಾರಿ ಅಲ್ಲದಿದ್ದರೂ ಜಾಗೃತರಾಗಿರುವುದು ಅವಶ್ಯಕ. ರೈತರ ಹಬ್ಬ ಸಂಕ್ರಾಂತಿಯನ್ನು ಒಂದೊಂದು ಪ್ರದೇಶದಲ್ಲಿ ಒಂದು ವಿಶೇಷತೆಯೊಂದಿಗೆ ಆಚರಿಸಲಾಗುತ್ತಿದೆ. ಹೋರಿ ಬೆದರಿಸೋದು ಸಂಕ್ರಾಂತಿ ಸಡಗರವನ್ನು ಈ ಗ್ರಾಮದಲ್ಲಿ ಇಮ್ಮಡಿಗೊಳಿಸಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಗ್ರಾಮಸ್ಥರು ಹೊರಿ ಬೆದರಿಸುವ ದೃಶ್ಯವನ್ನು ಕಣ್ತುಂಬಿಕೊಂಡು ಖುಷಿಪಟ್ಟರು.

ಇದನ್ನೂ ಓದಿ: ನಕಲಿ ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಕರ ಜತೆ ಬಿಜೆಪಿ ನಂಟು: ಪ್ರಿಯಾಂಕ್ ಖರ್ಗೆ ಆರೋಪ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News