ಆರೋಗ್ಯಕ್ಕೆ ಒಳ್ಳೆಯದು ಬಿಳಿ ಪೇರಳೆಯೋ ?ಕೆಂಪು ಪೇರಳೆಯೋ ? ನಿಮ್ಮ ಆಯ್ಕೆ ಯಾವುದಾಗಬೇಕು?

ಪೇರಳೆ ಹಣ್ಣು ಉದರದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆಹಾರ ಸೇವಿಸಿದ ನಂತರ ಪೇರಳೆ ಸೇವಿಸಬೇಕು. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಿಯಾಗಿಡುತ್ತದೆ. 

Written by - Ranjitha R K | Last Updated : Jan 9, 2024, 05:35 PM IST
  • ಚಳಿಗಾಲದಲ್ಲಿ ಪೇರಳೆ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತದೆ.
  • ಪೇರಳೆಯಲ್ಲಿ ಎರಡು ವಿಧ.
  • ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಿಯಾಗಿಡುತ್ತದೆ.
ಆರೋಗ್ಯಕ್ಕೆ ಒಳ್ಳೆಯದು ಬಿಳಿ ಪೇರಳೆಯೋ ?ಕೆಂಪು ಪೇರಳೆಯೋ ?  ನಿಮ್ಮ ಆಯ್ಕೆ  ಯಾವುದಾಗಬೇಕು?  title=

ಬೆಂಗಳೂರು : ಪೇರಳೆ ತಿನ್ನಲು ಬಹಳ ರುಚಿಕರವಾದ ಹಣ್ಣು. ಇಎ ಕಾರಣಕ್ಕೆ ಪೇರಳೆ ಎಂದ ತಕ್ಷಣ ಬಾಯಿಯಲ್ಲಿ ನೀರೂರುತ್ತದೆ. ಈ ಹಣ್ಣಿಗೆ ಉಪ್ಪು ಖಾರ ಹಾಕಿ ತಿಂದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ಕೆಲವರು ಪೇರಳೆ ಹಣ್ಣನ್ನು ಹಾಗೆಯೇ ತಿನ್ನುತ್ತಾರೆ. ಇನ್ನು ಕೆಲವರು ಹೀಗೆ ಮಸಾಲೆ ಹಾಕಿಯೇ ತಿನ್ನುವುದು. ಹೀಗೆ ಮಸಾಲೆ ಹಾಕಿ ಪೇರಳೆ ತುನ್ನುತ್ತಾ ಹೋದರೆ ತಟ್ಟೆಯಲ್ಲಿ ಹಣ್ಣು ಖಾಲಿಯಾಗುವುದೇ ಗೊತ್ತಾಗುವುದಿಲ್ಲ. 

ಚಳಿಗಾಲದಲ್ಲಿ ಪೇರಳೆ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತದೆ. ಪೇರಳೆಯಲ್ಲಿ ಎರಡು ವಿಧ. ಬಿಳಿ ಪೇರಳೆ ಮತ್ತು ಕೆಂಪು ಪೇರಳೆ. ಪೇರಳೆ ಹಣ್ಣು ಹೊಟ್ಟೆಯ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಿಯಾಗಿಡುತ್ತದೆ. ಈ ಕಾರಣಕ್ಕಾಗಿ ಪೇರಳೆಯನ್ನು ಆಹಾರ ಸೇವಿಸಿದ ನಂತರವೇ ತಿನ್ನಬೇಕು. ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಿಳಿ ಪೇರಳೆ ಸಿಗುತ್ತದೆ. ಆದರೆ ಕೆಂಪು ಪೇರಳೆ ತಿಂದರೆ ದೇಹಕ್ಕೆ  ಹೆಚ್ಚಿನ ಪ್ರಯೋಜನ ಸಿಗುತ್ತದೆ. 

ಇದನ್ನೂ ಓದಿ : ಹಳದಿ ಹಲ್ಲುಗಳನ್ನು ಮುತ್ತಿನಂತೆ ಹೊಳೆಯುವಂತೆ ಮಾಡುವ ಸೂಪರ್ ಮನೆಮದ್ದುಗಳು!

ಬಿಳಿ ಪೇರಳೆಗೆ ಹೋಲಿಸಿದರೆ ಕೆಂಪು ಪೇರಳೆ ತುಂಬಾ ಪ್ರಯೋಜನಕಾರಿಯಾಗಿದೆ. 

1. ಕೆಂಪು ಪೇರಳೆಯಲ್ಲಿ ಹೇರಳವಾದ ವಿಟಮಿನ್ ಸಿ ಕಂಡುಬರುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಮಧುಮೇಹ ರೋಗಿಗಳಿಗೆ ಕೆಂಪು ಪೇರಳೆ ತುಂಬಾ ಪ್ರಯೋಜನಕಾರಿ. ಕೆಂಪು ಪೇರಳೆಯಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆಯಿರುತ್ತದೆ.ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. 

2. ಕೆಂಪು ಪೇರಳೆ ತಿನ್ನುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆ ದೂರವಾಗುತ್ತದೆ. ಕೆಂಪು ಪೇರಳೆಯಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಕೆಂಪು ಪೇರಳೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಗಡ್ಡೆಯ ರಚನೆಯ ಪ್ರಕ್ರಿಯೆಯ ತಡೆಗೆ ಕೆಂಪು ಪೇರಳೆ ಸಹಾಯ ಮಾಡುತ್ತದೆ. 

ಇದನ್ನೂ ಓದಿ : ಸೀತಾಫಲ ಹಣ್ಣು ಚಳಿಗಾಲದಲ್ಲಿ ಕಾಡುವ ಈ ಸಮಸ್ಯೆಗೆ ರಾಮಬಾಣ!

3. ಕೆಂಪು ಪೇರಳೆಯಲ್ಲಿ ಪೊಟ್ಯಾಸಿಯಮ್ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಅದಕ್ಕಾಗಿಯೇ ಬಿಪಿ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

4. ಕೆಂಪು ಪೇರಳೆಯಲ್ಲಿ ಫೈಬರ್ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಕೆಂಪು ಪೇರಳೆ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡಾ  ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 

ಇದನ್ನೂ ಓದಿ : ಶೀತ, ಗಂಟಲು ನೋವಿನಿಂದ ತಕ್ಷಣ ಪರಿಹಾರ ನೀಡುತ್ತದೆ ಈ ಮನೆ ಮದ್ದುಗಳು !

5. ಬಿಳಿ ಪೇರಳೆಗಿಂತ ಕೆಂಪು ಪೇರಳೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದನ್ನು ತಿಂದರೆ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳು ದೂರವಾಗುತ್ತವೆ. ಕೆಂಪು ಪೇರಳೆ ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News