ಕೆಜಿಎಫ್ ನಲ್ಲಿ ಅಧೀರ್ ನಾದ ಸಂಜಯ್ ದತ್ !

ಸೋಮವಾರದಂದು 60ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಸಂಜಯ್ ದತ್ತ ಈಗ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Last Updated : Jul 29, 2019, 03:52 PM IST
ಕೆಜಿಎಫ್ ನಲ್ಲಿ ಅಧೀರ್ ನಾದ ಸಂಜಯ್ ದತ್ ! title=
Photo courtesy :Twitter

ಮುಂಬೈ: ಸೋಮವಾರದಂದು 60ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಸಂಜಯ್ ದತ್ತ ಈಗ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೊಂಬಾಳೆ ಫಿಲಂಸ್  ಈಗ ಅವರ ಹುಟ್ಟುಹಬ್ಬದಂದು ಸಂಜಯ್ ದತ್ತ ಅವರು ಕೆಜಿಎಫ್ ಚಿತ್ರದ 2 ನೇ ಭಾಗದಲ್ಲಿ ಅಧೀರಾ ಪಾತ್ರದಲ್ಲಿನ ಮೋಷನ್ ಪೋಸ್ಟರ್ ನ್ನು ಬಿಡುಗಡೆಗೊಳಿಸಿದೆ. ಈ ಪೋಸ್ಟರ್ ನಲ್ಲಿ ಖದರ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್ತ್ ಈಗ ಪ್ರೇಕ್ಷಕರಿಗೆ ಸಾಕಷ್ಟು ಕೂತುಹಲ ಕೆರಳಿಸಿದ್ದಾರೆ.

ಕೆಜಿಎಫ್ ನ ಮೊದಲ ಭಾಗ ಈಗಾಗಲೇ ಎಲ್ಲಾ ಭಾಷೆಗಳಲ್ಲಿ ಭರ್ಜರಿ ಹಿಟ್ ಆಗಿದ್ದು. ಎರಡನೇ ಭಾಗ ಇನ್ನಷ್ಟು ಕುತೂಹಲ ಕೆರಳಿಸಿದೆ. ಯಶ್ ಅಭಿನಯದ ಈ ಚಿತ್ರ ಶಾರುಖ್ ಖಾನ್ ಅಭಿನಯದ ಜೀರೋ ಸಿನಿಮಾವನ್ನು ಹಿಂದಿಕ್ಕಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು. ಆ ಮೂಲಕ ಕನ್ನಡ ಸಿನಿಮಾವೊಂದು ಇಡೀ ಭಾರತಾದ್ಯಂತ ಸದ್ದು ಮಾಡಿದ್ದು ಇದೇ ಮೊದಲು ಎನ್ನಬಹುದು. ಅದ್ಬುತ ದೃಶ್ಯ ಸಂಯೋಜನೆ, ಸಂಗೀತ, ಸೆಟ್ ಹಾಗೂ ಕಥೆ ಸಾಗುವ ರೀತಿ ಪ್ರತಿಯೊಂದು ರೋಚಕವಾಗಿ ಕಟ್ಟಿಕೊಂಡಿರುವ ಕೆಜಿಎಫ್ ಚಿತ್ರ ಕನ್ನಡದ ಮಟ್ಟಿಗೆ ನಿಜಕ್ಕೂ ಅದ್ದೂರಿ ಸಿನಿಮಾ ಎನ್ನಬಹುದು.

ಈಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೆಜಿಎಫ್ ಚಿತ್ರ ಮೋಷನ್ ಪೋಸ್ಟರ್ ಹಂಚಿಕೊಂಡಿರುವ ಸಂಜಯ್ ದತ್ತ್  'ಕೆಜಿಎಫ್ ಚಿತ್ರದಲ್ಲಿ ಅಧೀರನಾಗಿರುವುದಕ್ಕೆ ಸಂತಸವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

 

Trending News