Bigg Boss Kannada 10 : ನಿನ್ನೆ ಸಂಗೀತಾಗೆ ಎಲ್ರೂ ನನ್ನ ಟಾರ್ಗೆಟ್ ಮಾಡ್ತಿದಾರೆ ಅನಿಸ್ತಿದ್ರೆ, ಈವತ್ತು ವಿನಯ್ ಪಾಳಿ. ಇದುವರೆಗೂ ಸ್ಟ್ರಾಂಗ್ ಆಗಿಯೇ ಇದ್ದ ವಿನಯ್ ಕಣ್ಣುಗಳಲ್ಲಿ ಇಂದು ನೀರು ಉಕ್ಕಿದೆ. ಹಾಗೆಯೇ ಅವರ ಧ್ವನಿಯೂ ಜೋರಾಗಿದೆ.‘ಅವ್ಳು ನನ್ನಿಂದ ಡಿಪ್ರೆಶನ್ಗೆ ಹೋಗ್ತಿದಾಳೆ ಅಂತಾರೆ. ಅವ್ಳು ನೋಡಿದ್ರೆ ನನ್ನಿಂದ ಥ್ರೆಟ್ ಇದೆ ಅಂತಿದಾಳೆ. ಯಾರಿಗ್ ಏನ್ ಮಾಡಿದೀನಿ ಗುರು ನಾನು?’ ಎಂದು ವಿನಯ್, ಕಾರ್ತಿಕ್ ಬಳಿ ಕೂಗಾಡಿದ್ದಾರೆ.
ಅವರ ಮಾತುಗಳನ್ನು ಕೇಳಿದ ಸಂಗೀತಾ ಶೃಂಗೇರಿ ನೇರವಾಗಿ ವಿನಯ್ ಎದುರಿಗೇ ಬಂದು ಕೂತು, ‘ನಿಮ್ಮಿಂದ ನನಗೆ ಡೇಂಜರ್ ಅಂತ ನಂಗೆ ಅನಿಸುತ್ತದೆ’ ಎಂದು ತಣ್ಣಗೇ ಹೇಳಿದ್ದಾರೆ. ವಿನಯ್ ಅವಳ ಜೊತೆಗೆ ಮಾತನಾಡದೆ ಕಾರ್ತಿಕ್ ಬಳಿಯೇ ತಿರುಗಿ, ‘ನನ್ನ ವೈಸ್ ಕೇಳಿದ್ರೆ ಕಿವಿ ಮುಚ್ಕೊಳೋಕೆ ಹೇಳು. ಇಲ್ಲಾ ದೂರ ಇರೋದಕ್ಕೆ ಹೇಳು’ ಎಂದು ಹೇಳಿ ಸಂಗೀತಾ ಕಡೆಗೆ ತಿರುಗಿ, ‘ಪ್ಲೀಸ್ ಡಿಲೀಟ್ ಮೀ ಇನ್ ಯುವರ್ ಹೆಡ್’ ಎಂದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ಗೆ ಬಂದಿದ್ದು ನನ್ನ ತಪ್ಪು ನಿರ್ಧಾರ.. ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ ಶೃಂಗೇರಿ!
ಸಂಗೀತಾ, ‘ಸ್ಟೋರ್ ಆಗಿದ್ರೆ ಡಿಲೀಟ್ ಮಾಡ್ಬೋದು’ ಎಂದು ಮತ್ತೆ ಕೆಣಕಿದ್ದಾರೆ…ವಿನಯ್ ಸಹನೆಯ ಕಟ್ಟೆಯೊಡೆದು, ‘ಯಾರ್ ಹೆಂಗಾದ್ರೂ ಸತ್ರೆ, ವೈ ಶುಡ್ ಐ ಕೇರ್’ ಎಂದು ಕಿರುಚಿದ್ದಾರೆ. ಹಾಗಾದ್ರೆ ಮನೆಯೊಳಗೆ ಏನು ನಡೀತಿದೆ? ಸಂಗೀತಾ ಮತ್ತು ವಿನಯ್ ನಡುವೆ ಹೊತ್ತಿಕೊಂಡಿರುವ ಬೆಂಕಿಕಿಡಿಯನ್ನು ಆರಿಸ್ತಾರಾ ಕಾರ್ತಿಕ್? ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರಕ್ಕಾಗಿ JioCinemaದಲ್ಲಿ ಬಿಗ್ಬಾಸ್ ಕನ್ನಡ 24ಗಂಟೆ ಉಚಿತ ಪ್ರಸಾರವನ್ನು ನೋಡುತ್ತಿರಿ. ಬಿಗ್ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.
ಇದನ್ನೂ ಓದಿ: BBK10: ನಾನಾ-ಅವಳಾ? ವಿನಯ್ ಪ್ರಶ್ನೆಗೆ ಉತ್ತರ ಕೊಡ್ತಾರಾ ಕಾರ್ತೀಕ್?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.