ತ್ವರಿತವಾಗಿ ಐಟಿಆರ್ ಮರುಪಾವತಿ ಪಡೆಯಲು ಈಗಲೇ ಈ ಕೆಲಸ ಮಾಡಿ

ITR Refund: ಪ್ರತಿ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಮಾತ್ರವಲ್ಲ, ಇದು ಜವಾಬ್ಧಾರಿಯುತ ನಾಗರೀಕನ ಆದ್ಯತೆಯೂ ಹೌದು. ಸರ್ಕಾರಕ್ಕೆ ನಾವು ಆದಾಯ ತೆರಿಗೆ ಸಲ್ಲಿಸುವಂತೆ ಆದಾಯ ತೆರಿಗೆ ರಿಟರ್ನ್ ಮರುಪಾವತಿ ಪಡೆಯುವುದು ಕೂಡ ಅರ್ಹ ಜನರ ಹಕ್ಕು.  

Written by - Yashaswini V | Last Updated : Aug 23, 2023, 11:54 AM IST
  • ಐ‌ಟಿ‌ಆರ್ ಸಲ್ಲಿಕೆ ವೇಳೆ ಸರಿಯಾದ ಮತ್ತು ಸಂಪೂರ್ಣವಾದ ಮಾಹಿತಿಯನ್ನು ನೀಡಬೇಕು
  • ಒಂದೊಮ್ಮೆ ನಿಮ್ಮ ಐ‌ಟಿ‌ಆರ್ ನಲ್ಲಿ ಯಾವುದೇ ರೀತಿಯ ದೋಷ ಕಂಡು ಬಂದಲ್ಲಿ ಅದು ಐ‌ಟಿ‌ಆರ್ ಮರುಪಾವತಿಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು.
ತ್ವರಿತವಾಗಿ ಐಟಿಆರ್ ಮರುಪಾವತಿ  ಪಡೆಯಲು ಈಗಲೇ ಈ ಕೆಲಸ ಮಾಡಿ  title=

ITR Refund:  ತೆರಿಗೆಗೆ ಒಳಪಡುವ ಆದಾಯವನ್ನು ಹೊಂದಿರುವ ದೇಶದ ಪ್ರತಿ ನಾಗರೀಕರೂ ಕೂಡ ಪ್ರತಿ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ನಂತರ, ಅರ್ಹ ಜನರು ಆದಾಯ ತೆರಿಗೆ ಮರುಪಾವತಿಯನ್ನು ಪಡೆಯುತ್ತಾರೆ. ಆದಾಯ ತೆರಿಗೆ ಮರುಪಾವತಿಯನ್ನು ಪಡೆಯಲು ತೆರಿಗೆದಾರರು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು. ಆದಾಗ್ಯೂ, ಕೆಲವೊಮ್ಮೆ ಹಲವು ಕಾರಣಗಳಿಂದಾಗಿ ಐಟಿಆರ್ ಮರುಪಾವತಿ ಪಡೆಯುವಲ್ಲಿ ವಿಳಂಬವಾಗುತ್ತದೆ. ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನೀವು ಕೆಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ತ್ವರಿತವಾಗಿ ಐಟಿಆರ್ ಮರುಪಾವತಿ  ಪಡೆಯಬಹುದಾಗಿದೆ. 

ಐಟಿಆರ್ ಮರುಪಾವತಿಯಲ್ಲಿ ವಿಳಂಬವಾಗುತ್ತಿದೆಯೇ? ಈಗಲೇ ಈ ಕೆಲಸ ಮಾಡಿ:- 
ಸರಿಯಾದ ಫಾರ್ಮ್ ಆಯ್ಕೆ: 

ಐಟಿಆರ್ ಮರುಪಾವತಿಯಲ್ಲಿ ವಿಳಂಬವನ್ನು ತಪ್ಪಿಸಲು ನೀವು ಐ‌ಟಿ‌ಆರ್ ಸಲ್ಲಿಸುವಾಗ ಸರಿಯಾದ ಫಾರ್ಮ್ ಆಯ್ಕೆ ಮಾಡುವುದು ತುಂಬಾ ಅಗತ್ಯ. ನೀವು ಸರಿಯಾದ ಸೂಕ್ತವಾದ ಫಾರ್ಮ್ ಬಳಸಿ ಐ‌ಟಿ‌ಆರ್ ಸಲ್ಲಿಸಿದರೆ ತ್ವರಿತವಾಗಿ ಐಟಿಆರ್ ಮರುಪಾವತಿ  ಪಡೆಯಬಹುದು. 
ಇದಕ್ಕಾಗಿ ಐ‌ಟಿ‌ಆರ್ ಸಲ್ಲಿಸುವಾಗ ನೀವು ಸರಿಯಾದ ನಮೂನೆಯಲ್ಲಿ ಇದನ್ನು ಸಲ್ಲಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. 

ಇದನ್ನೂ ಓದಿ- ಪಡಿತರ ಚೀಟಿದಾರರೇ ಗಮನಿಸಿ ! ಸೆ.30 ರೊಳಗೆ ಈ ಕೆಲಸ ಮಾಡದಿದ್ದರೆ ಸಿಗುವುದಿಲ್ಲ ಉಚಿತ ಪಡಿತರ !

ಸರಿಯಾದ ಮಾಹಿತಿ: 
ಐ‌ಟಿ‌ಆರ್ ಸಲ್ಲಿಕೆ ವೇಳೆ ಸರಿಯಾದ ಮತ್ತು ಸಂಪೂರ್ಣವಾದ ಮಾಹಿತಿಯನ್ನು ನೀಡಬೇಕು ಎಂಬುದನ್ನೂ ನೆನಪಿನಲ್ಲಿಡಿ. ಒಂದೊಮ್ಮೆ ನಿಮ್ಮ ಐ‌ಟಿ‌ಆರ್ ನಲ್ಲಿ ಯಾವುದೇ ರೀತಿಯ ದೋಷ ಕಂಡು ಬಂದಲ್ಲಿ ಅದು ಐ‌ಟಿ‌ಆರ್ ಮರುಪಾವತಿಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು. ಇದನ್ನು ತಪ್ಪಿಸಲು ತೆರಿಗೆದಾರರು ತಮ್ಮ ಪ್ಯಾನ್ ಕಾರ್ಡ್, ಬ್ಯಾಂಕ್ ವಿವರಗಳು ಮತ್ತು ಸಂಪರ್ಕಗಳಂತಹ ವಿವರಗಳನ್ನು ಸರಿಯಾಗಿ ನೀಡಬೇಕು. ಇದಲ್ಲದೆ, ಮಾಹಿತಿಯನ್ನು ಭರ್ತಿ ಮಾಡಿದ ನಂತರ ಇದನ್ನು ಡಬಲ್ ಚೆಕ್ ಮಾಡಲು ಮರೆಯಬೇಡಿ. 

ನಿಗದಿತ ದಿನಾಂಕದೊಳಗೆ ಐ‌ಟಿ‌ಆರ್ ಸಲ್ಲಿಸಿ: 
ಇನ್ನೊಂದು ಪ್ರಮುಖವಾದ ವಿಷಯವೆಂದರೆ ಪ್ರತಿ ಆರ್ಥಿಕ ವರ್ಷದಲ್ಲಿ ನಿಗದಿತ ಸಮಯದೊಳಗೆ ತಪ್ಪದೆ ಐ‌ಟಿ‌ಆರ್ ಸಲ್ಲಿಸಿ. ನೀವು ಸಮಯ ಮಿತಿಯೊಳಗೆ ಐ‌ಟಿ‌ಆರ್ ಸಲ್ಲಿಸಿದಾಗಷ್ಟೇ ತ್ವರಿತವಾಗಿ ಮರುಪಾವತಿಯನ್ನು ಸಹ ಸ್ವೀಕರಿಸಬಹುದು. 

ಇದನ್ನೂ ಓದಿ- ನಿಮ್ಮ ಬಳಿಯೂ ಹರಿದ, ಹಾನಿಗೊಳಗಾದ ನೋಟ್ ಇದೆಯೇ? ಈ ರೀತಿ ಬದಲಾಯಿಸಿ

ಐ‌ಟಿ‌ಆರ್ ಪರಿಶೀಲನೆ: 
ಆದಾಯ ತೆರಿಗೆ ರಿಟರ್ನ್ ಪರಿಶೀಲನೆಗಾಗಿ ಇ-ಪರಿಶೀಲನೆ ಕೋಡ್ ಆಯ್ಕೆಯನ್ನು ಬಳಸಿ. ನೆನಪಿಡಿ, ಇದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯು ಆಧಾರ್‌ನೊಂದಿಗೆ ಲಿಂಕ್ ಆಗಿರಬೇಕು. ಒಂದೊಮ್ಮೆ ನೀವು ನೆಟ್ ಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸಿದರೆ, ಪೋರ್ಟಲ್ ನಿಮ್ಮನ್ನು ಬ್ಯಾಂಕಿನ ಸೈಟ್‌ಗೆ ಮರುನಿರ್ದೇಶಿಸುತ್ತದೆ. ಆನ್‌ಲೈನ್ ಫೈಲಿಂಗ್ ಮತ್ತು ಇ-ಪರಿಶೀಲನೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ಮೂಲಕ ಆನ್‌ಲೈನ್ ಫೈಲಿಂಗ್ ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. 

ಇ-ವೆರಿಫಿಕೇಶನ್:
ಇನ್ನು ರಿಟರ್ನ್ ಸಲ್ಲಿಸಿದ ತಕ್ಷಣ ಇ-ವೆರಿಫಿಕೇಶನ್ ಮಾಡಬೇಕು. ಪೂರ್ವ-ಪರಿಶೀಲಿಸಿದ ಖಾತೆ ಮರುಪಾವತಿಗಾಗಿ ಬ್ಯಾಂಕ್ ಖಾತೆಯನ್ನು ಪೂರ್ವ-ಪರಿಶೀಲಿಸುವುದರಿಂದ ಮರುಪಾವತಿಯ ಮೊತ್ತವು ನೇರವಾಗಿ ಖಾತೆಗೆ ಜಮೆಯಾಗಿದೆ ಎಂಬುದನ್ನೂ ದೃಢಪಡಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News