Shravana Masa 2023: 15 ದಿನಗಳವರೆಗೆ ಈ 4 ಕೆಲಸ ಮಾಡಿದ್ರೆ ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ!

Sravana Masa 2023: ಶ್ರಾವಣ ಮಾಸವು ಭಗವಾನ್ ಶಿವನ ಭಕ್ತಿ ಮತ್ತು ಆರಾಧನೆಗೆ ಮೀಸಲಾಗಿದೆ. ಆಗಸ್ಟ್ 16ರಂದು ಅಧಿಕಮಾಸದ ಅಮಾವಾಸ್ಯೆಯ ನಂತರ, ಆಗಸ್ಟ್ 17ರಿಂದ ಮತ್ತೊಮ್ಮೆ ಶ್ರಾವಣ ಮಾಸ ಪ್ರಾರಂಭವಾಗಿದೆ, ಈ 15 ದಿನಗಳು ಶಿವ ಭಕ್ತರಿಗೆ ಬಹಳ ವಿಶೇಷವಾಗಿದೆ. ಈ ದಿನಗಳಲ್ಲಿ ತೆಗೆದುಕೊಂಡ ಕ್ರಮಗಳು ವ್ಯಕ್ತಿಯ ಭವಿಷ್ಯವನ್ನು ಬದಲಾಯಿಸುತ್ತದೆ.

Written by - Puttaraj K Alur | Last Updated : Aug 19, 2023, 08:16 AM IST
  • ನಿಮ್ಮ ಇಷ್ಟಾರ್ಥಗಳು ಈಡೇರಲು ಶ್ರೀಗಂಧದಿಂದ ‘ಓಂ ನಮಃ ಶಿವಾಯ’ವೆಂದು ಬರೆದು ಶಿವಲಿಂಗಕ್ಕೆ ಅರ್ಪಿಸಿ
  • ಮನೆಯ ಸುಖ-ಸಮೃದ್ಧಿಗೆ ಶ್ರಾವಣ ಮಾಸದಲ್ಲಿ ಶಿವನಿಗೆ ಸಕ್ಕರೆ ಬೆರೆಸಿದ ಹಾಲಿನಿಂದ ಅಭಿಷೇಕ ಮಾಡಿ
  • ಶ್ರಾವಣ ಮಾಸದ ಸೋಮವಾರ ಮನೆಯಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಭಕ್ತಿಯಿಂದ ಪೂಜಿಸಿರಿ
Shravana Masa 2023: 15 ದಿನಗಳವರೆಗೆ ಈ 4 ಕೆಲಸ ಮಾಡಿದ್ರೆ ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ! title=
ಶ್ರಾವಣ ಪರಿಹಾರಗಳು 2023

ಶ್ರಾವಣ ಪರಿಹಾರಗಳು 2023: ಶ್ರಾವಣ ಮಾಸ ನಡೆಯುತ್ತಿದೆ. ಈ ವಿಶೇಷ ಸಮಯದಲ್ಲಿ ತೆಗೆದುಕೊಂಡ ಕ್ರಮಗಳು ಬಹುಬೇಗ ಫಲಪ್ರದವಾಗುತ್ತವೆ. ಶ್ರಾವಣ ಮಾಸದಲ್ಲಿ ಶಿವನನ್ನು ಪೂರ್ಣ ಭಕ್ತಿಯಿಂದ ಪೂಜಿಸಲಾಗುತ್ತದೆ, ಈ ಕಾರಣದಿಂದ ಶಿವನು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಇದರೊಂದಿಗೆ ಶ್ರಾವಣದಲ್ಲಿ ತೆಗೆದುಕೊಂಡ ಕೆಲವು ಕ್ರಮಗಳು ವೃತ್ತಿಜೀವನದಲ್ಲಿ ಪ್ರಗತಿ, ಜೀವನದಲ್ಲಿ ಸಂತೋಷ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ತರುತ್ತವೆ. ಹಾಗಾದರೆ ಶ್ರಾವಣ ಮಾಸದಲ್ಲಿ ಯಾವ್ಯಾವ ಕ್ರಮಗಳನ್ನು ಕೈಗೊಂಡರೆ ಏನೆಲ್ಲಾ ಲಾಭಗಳಾಗುತ್ತವೆ ಎಂಬುದನ್ನು ತಿಳಿಯಿರಿ.

ಈ ಕ್ರಮಗಳಿಂದ ಜೀವನದ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ!

ದೀರ್ಘಕಾಲದ ಅನಾರೋಗ್ಯ: ಯಾವುದೇ ಒಬ್ಬ ವ್ಯಕ್ತಿಯು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆ, ಶ್ರಾವಣ ಮಾಸದಲ್ಲಿ ಶಿವ ದೇವಾಲಯಕ್ಕೆ ಹೋಗಿ ಮತ್ತು ಭೋಲೇನಾಥನಿಗೆ ಹಾಲು ಮತ್ತು ಕರಿಕೊಲೆಯಿಂದ ಅಭಿಷೇಕ ಮಾಡಿ. ಶಿವಲಿಂಗಕ್ಕೆ ನೀರನ್ನು ಅರ್ಪಿಸುವಾಗ ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸಿ. ಇದರ ನಂತರ ಶಿವನ ಬಳಿ ಆರೋಗ್ಯವಾಗಿರಲು ಪ್ರಾರ್ಥಿಸಿ. ಇದರಿಂದ ನೀವು ಭೋಲೇನಾಥನ ಅನುಗ್ರಹವನ್ನು ಪಡೆಯುತ್ತೀರಿ ಮತ್ತು ಶೀಘ್ರದಲ್ಲೇ ರೋಗವು ದೂರವಾಗುತ್ತದೆ.

ಇದನ್ನೂ ಓದಿ: ಸಂಗಾತಿ ಕೇವಲ ಶಾರೀರಿಕ ಸಂಬಂಧ ಬಯಸುತ್ತಾನೋ ಅಥವಾ ಪ್ರೀತಿಯನ್ನು ಕೂಡ ಮಾಡುತ್ತಾನೋ? ಹೇಗೆ ತಿಳಿದುಕೊಳ್ಳಬೇಕು?

ಆಸೆಗಳ ಈಡೇರಿಕೆಗಾಗಿ: ಶ್ರಾವಣ ಮಾಸದಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಲು, ಶ್ರೀಗಂಧದಿಂದ ‘ಓಂ ನಮಃ ಶಿವಾಯ’ ಎಂದು ಬರೆದು ಶಿವಲಿಂಗದ ಮೇಲೆ ಅರ್ಪಿಸಿ. ಬೇಲ್ಪತ್ರವನ್ನು ಅರ್ಪಿಸುವಾಗ ನಿಮ್ಮ ಆಸೆಯನ್ನು ಹೇಳಿ. ಇದರೊಂದಿಗೆ ನಿಮ್ಮ ಆಸೆ ಈಡೇರುತ್ತದೆ.

ಸಂತೋಷ ಮತ್ತು ಸಮೃದ್ಧಿಗಾಗಿ: ಮನೆಯಲ್ಲಿ ಸುಖ-ಸಮೃದ್ಧಿಗೆ ಕೊರತೆಯಿರಬಾದರು ಎಂದು ನೀವು ಬಯಸಿದ್ರೆ, ಶ್ರಾವಣ ಮಾಸದಲ್ಲಿ ಶಿವನಿಗೆ ಸಕ್ಕರೆ ಬೆರೆಸಿದ ಹಾಲಿನಿಂದ ಅಭಿಷೇಕ ಮಾಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಇದರೊಂದಿಗೆ ಧನ-ಧಾನ್ಯಗಳ ಕೊರತೆಯಿರಲ್ಲ. ಮಹಾದೇವನು ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಮನೆ-ಮನವನ್ನು ತುಂಬುತ್ತಾನೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಸುಕ್ಕುಗಟ್ಟಿದ ಕೂದಲಿನಿಂದ ಪರಿಹಾರಕ್ಕಾಗಿ ಇಲ್ಲಿದೆ 5 ಟಿಪ್ಸ್

ಆದಾಯ ಹೆಚ್ಚಿಸಲು: ನೀವು ಮನೆಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ತೊಂದರೆಗೀಡಾಗಿದ್ದರೆ ಅಥವಾ ನಿಮ್ಮ ಆದಾಯವನ್ನು ಹೆಚ್ಚಿಸಲು ಬಯಸಿದರೆ, ಶ್ರಾವಣ ಮಾಸದ ಯಾವುದೇ ಸೋಮವಾರದಂದು ಮನೆಯಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಪೂಜಿಸಿ. ಇದರ ನಂತರ, ‘ಐಂ ಹ್ರೀಂ ಶ್ರೀ ಓಂ ನಮಃ ಶಿವಾಯ: ಶ್ರೀನ್ ಹ್ರೀನ್ ಐನ್’ ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಹೀಗೆ ಮಾಡುವುದರಿಂದ ಹಗಲು ರಾತ್ರಿ 4 ಪಟ್ಟು ಪ್ರಗತಿ ಸಾಧಿಸಿ ಆದಾಯ ಹೆಚ್ಚುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News