ತರಬೇತಿಯೇ ಇಲ್ಲದ ಕ್ರೀಡಾಪಟುವಿಗೆ ಅಂತಾರಾಷ್ಟ್ರೀಯ ಓಟದಲ್ಲಿ ಅವಕಾಶ ಕೊಟ್ಟು ಮರ್ಯಾದೆ ಕಳೆದುಕೊಂಡ ಈ ದೇಶ!

Somalia Athlete video: ಇದು ಯಾವುದೋ ದಾಖಲೆಯನ್ನು ಬರೆದಿರುವುದು ಅಥವಾ ಮುರಿದಿರುವುದಕ್ಕೆ ಸಂಬಂಧಿಸಿಲ್ಲ. ಈ 21 ಸೆಕೆಂಡುಗಳ ಕ್ಲಿಪ್ ನಲ್ಲಿ ಓರ್ವ ಆಟಗಾರ್ತಿ ಓಡುತ್ತಿದ್ದು, ಆಕೆ ನೀಡಿದ ಪ್ರದರ್ಶನದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

Written by - Bhavishya Shetty | Last Updated : Aug 3, 2023, 12:28 PM IST
    • 100 ಮೀಟರ್ ಓಟಕ್ಕೆ ಸಂಬಂಧಿಸಿದ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್
    • ತರಬೇತಿ ಪಡೆಯದ ಕ್ರೀಡಾಪಟುವನ್ನು ಉನ್ನತ ಮಟ್ಟದ ಕಾರ್ಯಕ್ರಮಕ್ಕೆ ಕಳುಹಿಸಿದ ಸೊಮಾಲಿಯಾ
    • ಈ ಓಟಗಾರ್ತಿಯ ಹೆಸರನ್ನು ನಸ್ರಾ ಅಬುಕರ್ ಅಲಿ ಎಂದು ಹೇಳಲಾಗುತ್ತಿದೆ
ತರಬೇತಿಯೇ ಇಲ್ಲದ ಕ್ರೀಡಾಪಟುವಿಗೆ ಅಂತಾರಾಷ್ಟ್ರೀಯ ಓಟದಲ್ಲಿ ಅವಕಾಶ ಕೊಟ್ಟು ಮರ್ಯಾದೆ ಕಳೆದುಕೊಂಡ ಈ ದೇಶ! title=
somalia

Trending News: ಚೀನಾದಲ್ಲಿ ನಡೆಯುತ್ತಿರುವ ಸಮ್ಮರ್ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ ಸಂದರ್ಭದಲ್ಲಿ ಮಹಿಳೆಯರ 100 ಮೀಟರ್ ಓಟಕ್ಕೆ ಸಂಬಂಧಿಸಿದ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಯಾವುದೋ ದಾಖಲೆಯನ್ನು ಬರೆದಿರುವುದು ಅಥವಾ ಮುರಿದಿರುವುದಕ್ಕೆ ಸಂಬಂಧಿಸಿಲ್ಲ. ಈ 21 ಸೆಕೆಂಡುಗಳ ಕ್ಲಿಪ್ ನಲ್ಲಿ ಓರ್ವ ಆಟಗಾರ್ತಿ ಓಡುತ್ತಿದ್ದು, ಆಕೆ ನೀಡಿದ ಪ್ರದರ್ಶನದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಏಕದಿನ ಸರಣಿಯಲ್ಲಿ ವಿಂಡೀಸ್ ವಿರುದ್ಧ ಗೆದ್ದ ಭಾರತ: ಆ ಒಂದು ಗೆಲುವಿಗೆ ಮುರಿಯಿತು 6 ವಿಶ್ವದಾಖಲೆಗಳು!

ಓಟಗಾರ್ತಿಯ ಹೆಸರನ್ನು ನಸ್ರಾ ಅಬುಕರ್ ಅಲಿ ಎಂದು ಹೇಳಲಾಗುತ್ತಿದೆ. ವೀಡಿಯೊವನ್ನು ಪೋಸ್ಟ್ ಮಾಡಿದ ಬಳಕೆದಾರರು ಎಲ್ಹಾಮ್ ಗೆರಾರ್ಡ್ ಅವರು ಈ ತರಬೇತಿ ಪಡೆಯದ ಕ್ರೀಡಾಪಟುವನ್ನು ಉನ್ನತ ಮಟ್ಟದ ಕಾರ್ಯಕ್ರಮಕ್ಕೆ ಕಳುಹಿಸಿದ್ದಕ್ಕಾಗಿ ಸೊಮಾಲಿಯಾದ ಯುವ ಮತ್ತು ಕ್ರೀಡಾ ಸಚಿವಾಲಯವನ್ನು ಟೀಕಿಸಿದ್ದಾರೆ.

“ಯುವಜನ ಮತ್ತು ಕ್ರೀಡಾ ಸಚಿವಾಲಯದ ಜವಾಬ್ದಾರಿಯುತ ಜನರು ತಕ್ಷಣ ತಮ್ಮ ಹುದ್ದೆಗಳನ್ನು ತೊರೆಯಬೇಕು. ಈ ರೀತಿಯ ವಿಫಲ ಸರ್ಕಾರವನ್ನು ನೋಡಿದರೆ ಬೇಸರವಾಗುತ್ತದೆ. ಸೊಮಾಲಿಯಾವನ್ನು ಪ್ರತಿನಿಧಿಸಲು ತರಬೇತಿ ಪಡೆಯದ ಹುಡುಗಿಯನ್ನು ಹೇಗೆ ಆಯ್ಕೆ ಮಾಡಿದ್ದಾರೆ? ಇದು ನಿಜಕ್ಕೂ ಆಘಾತಕಾರಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಮೇಲೆ ಕಳಪೆ ಪಟ್ಟಿ ಪ್ರತಿಫಲಿಸುತ್ತದೆ” ಎಂದು ಎಲ್ಹಾಮ್ ಹೇಳಿದ್ದು, ಅವರ ಪೋಸ್ಟ್ ತಕ್ಷಣವೇ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಈ ವಿಡಿಯೋ ನೋಡಿ:

 

1 ನಿಮಿಷ 10 ಸೆಕೆಂಡುಗಳ ವಿಡಿಯೋದಲ್ಲಿ 6 ಮಹಿಳಾ ಓಟಗಾರರು ನಿಂತಿದ್ದಾರೆ. ರೆಡಿ, ಸ್ಟೆಡಿ ಮತ್ತು ಗೋ ಎಂದರೆ ಬಜರ್ ರಿಂಗಣಿಸಿದ ತಕ್ಷಣ ಎಲ್ಲಾ ಕ್ರೀಡಾಪಟುಗಳು ಓಡಲು ಪ್ರಾರಂಭಿಸುತ್ತಾರೆ. ಆದರೆ ಸೋಮಾಲಿಯಾದ ಅಥ್ಲೀಟ್ ಮುಖಭಾವ ಮತ್ತು ದೇಹಭಾಷೆಯನ್ನು ನೋಡಿದರೆ, ಅವರು ತಮ್ಮ ದೇಶವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಲು ಸಿದ್ಧರಿದ್ದಾರೆ ಎಂದು ಅನಿಸುತ್ತಿಲ್ಲ. ಕೊಂಚವೂ ಫಿಟ್ ಆಗಿ ಕಾಣುತ್ತಿಲ್ಲ. ಉಳಿದ ಕ್ರೀಡಾಪಟುಗಳು ಆಕೆಯನ್ನು ಹಿಮ್ಮೆಟ್ಟಿಸಿ ಮುಂದೆ ಓಡುವುದನ್ನು ನಾವು ನೋಡಬಹುದು.

ಇದನ್ನೂ ಓದಿ: 1 ವರ್ಷದ ಬಳಿಕ ಟೀಂ ಇಂಡಿಯಾಗೆ ಲಗ್ಗೆಯಿಟ್ಟ ಲೆಗ್ ಬ್ರೇಕ್ ಬೌಲಿಂಗ್ ಮಾಂತ್ರಿಕ! ಇನ್ಮುಂದೆ ಕೊಹ್ಲಿ ಸ್ನೇಹಿತನ ಆಟ ಶುರು

ಆಫ್ರಿಕನ್ ದೇಶಗಳಿಗೆ ನೀಡುತ್ತಿರುವ ನೆರವಿನ ಹೆಸರಿನಲ್ಲಿ ಹಣದ ಬಳಕೆಯ ಬಗ್ಗೆ ನೆಟಿಜನ್‌’ಗಳು ತಮ್ಮ ಪೋಸ್ಟ್‌ಗಳಲ್ಲಿ ಪ್ರಶ್ನೆಗಳನ್ನು ಎತ್ತಿದ್ದಾರೆ. “ಈ ಪರಿಸ್ಥಿತಿಗಳ ಹೊರತಾಗಿಯೂ ಪಾಶ್ಚಿಮಾತ್ಯ ದೇಶಗಳು ಅವರಿಗೆ ನೆರವು ನೀಡುವುದನ್ನು ಎಷ್ಟು ದಿನ ಮುಂದುವರಿಸುತ್ತವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ತಪ್ಪು ಜನರನ್ನು ತಲುಪುವ ಸಹಾಯಧನವನ್ನು ನಿಲ್ಲಿಸಲು ನಾವು ಪ್ರತಿಪಾದಿಸಬೇಕು. ಧನಸಹಾಯದ ಬದಲು ಆಟಗಾರರ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಜನರಿಗೆ ಕೌಶಲ್ಯವನ್ನು ನೀಡುವತ್ತ ಗಮನಹರಿಸಬೇಕು. ಹಸಿದ ಮನುಷ್ಯನಿಗೆ ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಕಲಿಸುವುದು ಉತ್ತಮ. ಅಸಮರ್ಥ ನಾಯಕರನ್ನು ಅನಿರ್ದಿಷ್ಟವಾಗಿ ಬೆಂಬಲಿಸುವುದಕ್ಕಿಂತ ಹೆಚ್ಚಾಗಿ ಆಫ್ರಿಕಾದಲ್ಲಿ ಸ್ವಾವಲಂಬನೆ ಮತ್ತು ಪ್ರಗತಿಯನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕು ಎಂಬುದು ನಮ್ಮ ವಾದವಾಗಿದೆ. ಒಡೆದ ಸರ್ಕಾರಗಳನ್ನು ಬೆಂಬಲಿಸುವ ಬದಲು ಸ್ಥಳೀಯ ಜನತೆಗೆ ಅಧಿಕಾರ ನೀಡಬೇಕು” ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News