Cricketer who appeared in movies : ಅನೇಕ ಸ್ಟಾರ್ ಕ್ರಿಕೆಟಿಗರು ತಮ್ಮ ಜನಪ್ರಿಯತೆಯ ಕಾರಣದಿಂದಾಗಿ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಇದರ ಪರಿಣಾಮವಾಗಿ ಕ್ರಿಕೆಟ್ ಮತ್ತು ಚಲನಚಿತ್ರೋದ್ಯಮದ ನಡುವೆ ಬಾಂಧವ್ಯ ಬೆಳೆಯುತ್ತಿದೆ. ಯುವರಾಜ್ ಸಿಂಗ್ ಮತ್ತು ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಕ್ರಿಕೆಟಗರು ಚಲನಚಿತ್ರಗಳಲ್ಲಿ ನಟಿಸಿ ಗಮನಸೆಳೆದಿದ್ದಾರೆ.
ಯುವರಾಜ್ ಸಿಂಗ್ ಕ್ರಿಕೆಟ್ ಮತ್ತು ನಟನೆ ಎರಡರಲ್ಲೂ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ಬಾಲ ಕಲಾವಿದನಾಗಿ, ಯುವರಾಜ್ ತನ್ನ ತಂದೆ ಹಾಗು ಹೆಸರಾಂತ ನಟರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಂತಿಮವಾಗಿ ಕ್ರಿಕೆಟ್ನತ್ತ ಹೆಚ್ಚಿನ ಗಮನ ನೀಡಿದರು. ಭಾರತೀಯ ಕ್ರಿಕೆಟ್ ತಂಡದ ಪ್ರಭಾವಿ ಆಟಗಾರನಾಗಿ ಹೊರಹೊಮ್ಮಿದರು.
ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಶ್ವದ ಅತ್ಯುತ್ತಮ ಫೀಲ್ಡರ್ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ ಅಜಯ್ ಜಡೇಜಾ ಅವರು 2003 ರಲ್ಲಿ ಕ್ರಿಕೆಟ್ನಿಂದ ನಿವೃತ್ತರಾದ ನಂತರ ಸಿನಿರಂಗ ಪ್ರವೇಶವನ್ನು ಮಾಡಿದರು. ʼಖೇಲ್ʼ ಸಿನಿಮಾದ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. "ಪಲ್ ಪಲ್ ದಿಲ್ ಕೆ ಸಾಥ್" ಸೇರಿದಂತೆ ಇತೆ ಸಿನಿಮಾಗಳಲಿ ನಟಿಸಿದ್ದಾರೆ.
1983 ರ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಅನಿರೀಕ್ಷಿತ ವಿಜಯದತ್ತ ಮುನ್ನಡೆಸಿದ ಕೀರ್ತಿಗೆ ಪಾತ್ರರಾದ ಕಪಿಲ್ ದೇವ್, ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರು. ಅವರು "ದಿಲ್ಲಗಿ ಯೇ ದಿಲ್ಲಗಿ," "ಚೈನ್ ಕುಲಿ ಕಿ ಮೈನ್ ಕುಲಿ," ಮತ್ತು "ಇಕ್ಬಾಲ್" ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.
1983 ರ ವಿಶ್ವಕಪ್ನಲ್ಲಿ ಕಪಿಲ್ ದೇವ್ ಅವರ ಸಹ ಆಟಗಾರ ಸುನಿಲ್ ಗವಾಸ್ಕರ್ ಎರಡು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು 1980 ರಲ್ಲಿ ಮರಾಠಿ ಚಲನಚಿತ್ರ "ಸವಿಲ್ ಪ್ರೇಮಚಿ" ಮೂಲಕ ಸಿನಿ ಜರ್ನಿ ಪ್ರಾರಂಭಿಸಿದರು. ನಂತರ 1988 ರಲ್ಲಿ "ಮಾಲಮಾಲ್" ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡಿದರು.
ಸಚಿನ್ ತೆಂಡೂಲ್ಕರ್ ಅವರೊಂದಿಗೆ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ಸಲೀಲ್ ಅಂಕೋಲಾ ಅವರು 2000 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಸಂಜಯ್ ದತ್ ಜೊತೆಗೆ "ಕುರುಕ್ಷೇತ್ರ" ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದರು. ಕ್ರಿಕೆಟ್ ಆಧಾರಿತ ಚಲನಚಿತ್ರ "ಸೈಲೆನ್ಸ್" ನಲ್ಲಿ ಕಾಣಿಸಿಕೊಂಡಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ವೇಗದ ಬೌಲರ್ ಎಂದು ಕರೆಯಲ್ಪಡುವ ಬ್ರೆಟ್ ಲೀ ಅವರು 2015 ರಲ್ಲಿ ಆಟದ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದರು. ಅವರು 1995 ರಲ್ಲಿ "ಬೇಬ್" ಎಂಬ ಆಸ್ಟ್ರೇಲಿಯಾದ ಚಲನಚಿತ್ರದಲ್ಲಿ ನಟಿಸಿದ್ದರು. ಇಂಡೋ-ಆಸ್ಟ್ರೇಲಿಯನ್ ಚಲನಚಿತ್ರ "ಯುನಿಂಡಿಯನ್"ನಲ್ಲೂ ನಟಿಸಿದ್ದಾರೆ.
ಕ್ರಿಕೆಟಿಗ ವಿನೋದ್ ಕಾಂಬ್ಳಿ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿ. 2002 ರಲ್ಲಿ, ಅವರು ಸುನೀಲ್ ಶೆಟ್ಟಿ ಅವರೊಂದಿಗೆ "ಅನರ್ಥ್" ಚಿತ್ರದಲ್ಲಿ ಕಾಣಿಸಿಕೊಂಡರು.2009 ರಲ್ಲಿ, ಅವರು ಕ್ರಿಕೆಟಿಗ ಅಜಯ್ ಜಡೇಜಾ ಅವರೊಂದಿಗೆ "ಪಾಲ್ ಪಾಲ್ ದಿಲ್ ಕೆ ಸಾಥ್" ನಲ್ಲಿ ನಟಿಸಿದರು.
ಈ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾಗಿರುವ ಆಲ್ ರೌಂಡರ್ ಇರ್ಫಾನ್ ಪಠಾಣ್ 2022 ರಲ್ಲಿ ತಮಿಳು ಚಲನಚಿತ್ರ "ಕೋಬ್ರಾ" ದೊಂದಿಗೆ ಖಳನಾಯಕನ ಪಾತ್ರ ನಿರ್ವಹಿಸುವ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದ್ದಾರೆ.