ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 1,30,000 ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಉದ್ಯೋಗ ಅರಸುತ್ತಿರುವ ಯುವಕರಿಗೆ ಉತ್ತಮ ಅವಕಾಶ ನೀಡಿದೆ.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಮೇಲ್ವರ್ಗದ ಬಡವರಿಗೂ ಶೇ.10 ಮಿಸಲಾತಿ ಒದಗಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಪೀಯುಶ್ ಗೋಯಲ್ ಹೇಳಿದ್ದಾರೆ. ಈ ಹುದ್ದೆಗಳಲ್ಲಿ 30 ಸಾವಿರ ತಾಂತ್ರಿಕೇತರ, ಪ್ಯಾರಾ ಮೆಡಿಕಲ್ ಸಿಬ್ಬಂದಿ ಮತ್ತು ಇಲಾಖಾವಾರು ಹಾಗೂ ಇತರ ವರ್ಗಗಳಿಗೆ ಮೀಸಲಿಡಲಾಗಿದೆ. ಉಳಿದ ಒಂದು ಲಕ್ಷ ಹುದ್ದೆಗಳನ್ನು ಲೆವೆಲ್ 1 ಪೋಸ್ಟ್ಗಳಿಗೆ ಭರ್ತಿ ಮಾಡಲಾಗುತ್ತಿದ್ದು, ಇದು ಗ್ರೂಪ್-ಡಿ ಹುದ್ದೆಗಳ ನೇಮಕಾತಿ ಎಂದು ಹೇಳಿದ್ದಾರೆ.
ಕಳೆದ ವರ್ಷವೂ ರೈಲ್ವೆ ನೇಮಕಾತಿ ಮಂಡಳಿಯು 63 ಸಾವಿರ ಹುದ್ದೆಗಳಿಗೆ ಅಭರ್ಥಿಗಳನ್ನು ನೇಮಕ ಮಾಡಿತ್ತು. ಆದರೆ ಈ ಬಾರಿ ಗ್ರೂಪ್ ಡಿ ನೇಮಕಾತಿ ಪರೀಕ್ಷೆಯನ್ನು ರೈಲ್ವೆ ನೇಮಕಾತಿ ಮಂಡಳಿ ನಡೆಸುವುದಕ್ಕೆ ಬದಲಾಗಿ ರೈಲ್ವೆ ನೇಮಕಾತಿ ಘಟಕ ನಡೆಸಲಿದೆ. ಮುಂದಿನ ದಿನಗಳಲ್ಲಿಯೂ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ರೈಲ್ವೆ ನೇಮಕಾತಿ ಘಟಕ(RRC)ವೇ ನಡೆಸಲಿದೆ ಎನ್ನಲಾಗಿದೆ.
युवाओं के लिए रेलवे ने 1.30 लाख भर्तियों का अभियान शुरू किया है। इन भर्तियों में अन्य वर्गों के आरक्षण को बरकरार रखते हुए गरीबों के लिए भी 10% आरक्षण रखा गया है। इस अवसर का लाभ उठा कर रेलवे परिवार का हिस्सा बने।
अधिक जानकारी के लिए देखें https://t.co/jOXS85I4fe pic.twitter.com/LLh9liJdEc
— Piyush Goyal (@PiyushGoyal) February 24, 2019
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಸಚಿವ ಪೀಯುಶ್ ಗೋಯಲ್, ಅಧಿಸುಚನೆಯ ಮಾಹಿತಿಯಿರುವ ಲಿಂಕ್ ಅನ್ನು ಪೋಸ್ಟ್ ಮಾಡಿದ್ದಾರೆ. ಅದರನ್ವಯ, ತಾಂತ್ರಿಕೇತರ ಹುದ್ದೆಗಳಿಗೆ ಫೆಬ್ರವರಿ 28ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೆಯೇ ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕಾತಿಗೆ ಮಾರ್ಚ್ 4 ರಿಂದ ಹಾಗೂ ಸಚಿವಾಲಯ ಮತ್ತು ಪ್ರತ್ಯೇಕಿತ ವರ್ಗಗಳಿಗೆ ಮಾರ್ಚ್ 8 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಮೂರು ವಿಭಾಗಗಳ 30 ಸಾವಿರ ಹುದ್ದೆಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆ ನಡೆಸಲಿದೆ. ಎರಡನೇ ವಿಭಾಗದಲ್ಲಿ ಲೆವೆಲ್ 1 ಹುದ್ದೆಗಳಿಗೆ ರೈಲ್ವೆ ನೇಮಕಾತಿ ಸೆಲ್ ಪರೀಕ್ಷೆ ನಡೆಸಲಿದ್ದು, ಮಾರ್ಚ್ 12 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.