Malaika Arora latest photos : ಬಾಂಬೆ ಟೈಮ್ಸ್ ಫ್ಯಾಶನ್ ವೀಕ್ 2023ನಲ್ಲಿ ಭಾಗವಹಿಸಿದ್ದ ಬಿಟೌನ್ ನಟಿ ಮಲೈಕಾ ಅರೋರಾ ತಮ್ಮ ಸೌಂದರ್ಯದ ಮೂಲಕ ಶೋನ ಸೆಂಟರ್ ಅಟ್ರ್ಯಾಕ್ಷನ್ ಆಗಿದ್ದರು. ಫ್ಯಾಶನ್ ವೀಕ್ನ ಮೂರನೇ ದಿನ ಬಾಲಿವುಡ್ ನಟಿಯರು ಭಾಗವಹಿಸಿದ್ದರು. ಈ ಪೈಕಿ ಮಲೈಕಾ, ಡಿಸೈನರ್ ಕೃಷ್ಣ ಸನ್ನಿ ರಮಣಿ ಡ್ರೇಸ್ನಲ್ಲಿ ರಾಂಪ್ ವಾಕ್ ಮಾಡಿ ಶೋನಲ್ಲಿ ಮಿಂಚಿದರು.
Malaika Arora : ಬಾಲಿವುಡ್ ನಟಿಯರಾದ ಮಲೈಕಾ ಅರೋರಾ, ಭೂಮಿ ಪೆಡ್ನೇಕರ್, ನೇಹಾ ಶರ್ಮಾ, ದಿಯಾ ಮಿರ್ಜಾ ಮುಂತಾದ ನಟಿಯರು ಬಾಂಬೆ ಟೈಮ್ಸ್ ಫ್ಯಾಶನ್ ವೀಕ್ 2023 ರ ಮೂರನೇ ದಿನದ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ, ಮಲೈಕಾ ಅರೋರಾ, ಡಿಸೈನರ್ ಕೃಷ್ಣ ಸನ್ನಿ ರಮಣಿ ಅವರ ಪಿಂಕ್ ಕೋ-ಆರ್ಡರ್ ಸೆಟ್ನಲ್ಲಿ ಕ್ಯಾಟ್ ವಾಕ್ ಮಾಡಿದ್ರು. ಸದ್ಯ ಫೋಟೋಶೂಟ್ ಮಾಡಿಸಿರುವ ಚೆಲುವೆ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
49 ಹರೆಯದ ಮಲೈಕಾ ಅರೋರಾ ಪಿಂಕ್ ಕೋ-ಆರ್ಡರ್ ಸೆಟ್ನಲ್ಲಿ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
ಓಪನ್ ಹೇರ್ ಬಿಟ್ಟುಕೊಂಡು, ಕ್ಯಾಟ್ ವಾಕ್ ಮಾಡಿ, ಬಾಂಬೆ ಟೈಮ್ಸ್ ಫ್ಯಾಶನ್ ವೀಕ್ 2023ನ ಸೆಂಟರ್ ಅಟ್ರ್ಯಾಕ್ಷನ್ ಆಗಿದ್ದರು.
ಇನ್ನು ಇತ್ತೀಚಿಗೆ ಮಲೈಕಾ ಅರೋರಾ ಗೆಳೆಯ ಅರ್ಜುನ್ ಕಪೂರ್ ಜೊತೆ ಜರ್ಮನಿಗೆ ತೆರಳಿದ್ದರು. ಇಬ್ಬರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಬಾಲಿವುಡ್ನ ಈ ಜೋಡಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಾಗಲೆಲ್ಲಾ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಾರೆ. ಆ ಸಿಹಿ ಸುದ್ದಿ ಕೇಳಲು ಅವರ ಅಭಿಮಾನಿಗಳು ಸಹ ಕಾಯ್ತಿದ್ದಾರೆ.
ಅರ್ಬಾಜ್ ಖಾನ್ನಿಂದ ವಿಚ್ಛೇದನ ಪಡೆದ ನಂತರ ಮಲೈಕಾ ಅರ್ಜುನ್ ಕಪೂರ್ ಅವರೊಂದಿಗೆ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.